Home_Page_Advt
Home_Page_Advt
Home_Page_Advt

ಉಪ್ಪಿನಂಗಡಿಯಲ್ಲಿ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನೆ

Puttur_Advt_NewsUnder_1
Puttur_Advt_NewsUnder_1

  • ಕಂಠಪಾಠಕ್ಕೆ ಸೀಮಿತವಾಗದೆ ಪರಂಪರೆ ಆಧಾರಿತ ಚಟುವಟಿಕೆಗೆ ಮಾನ್ಯತೆ ಲಭಿಸುತ್ತಿದೆ-ಸಂಜೀವ ಮಠಂದೂರು
  • ಶಿಕ್ಷಕರು, ಪೋಷಕರು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು- ಅನಿತಾ ಹೇಮನಾಥ ಶೆಟ್ಟಿ ಕಾವು
  • ವಿದ್ಯಾರ್ಥಿಗಳು ಗುರಿ, ಇಚ್ಛಾಶಕ್ತಿ ಹೊಂದಿರಬೇಕು-ರಾಧಾಕೃಷ್ಣ ಬೋರ್ಕರ್
  • ಸರ್ಕಾರಿ ಶಾಲೆಯ ಶಿಕ್ಷಣ ವ್ಯವಸ್ಥೆ ಬಹಳಷ್ಟು ಉತ್ತಮವಾಗುತ್ತಿದೆ- ಶಯನಾ ಜಯಾನಂದ
  • ಉಪ್ಪಿನಂಗಡಿಯಲ್ಲಿ ತಾಲ್ಲೂಕು ಮಟ್ಟದ ಕಾರ್‍ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ-ಕೆ. ಅಬ್ದುಲ್ ರಹಿಮಾನ್

ಉಪ್ಪಿನಂಗಡಿ: ಹಿಂದೆಲ್ಲ ಮಕ್ಕಳ ಚಟುವಟಿಕೆ ಗುರುತಿಸಲು ಕಂಠಪಾಠ ಮಾನದಂಡವಾಗುತ್ತಿತ್ತು, ಆದರೆ ಬದಲಾದ ವ್ಯವಸ್ಥೆಯಲ್ಲಿ ಪ್ರತಿಭಾ ಕಾರಂಜಿ ಮೂಲಕ ನಾಡಿನ ಸಂಸ್ಕೃತಿ, ಪರಂಪರೆ ಆಧಾರಿತ ಚಟುವಟಿಕೆಗಳ ಹೆಚ್ಚು ಮಾನ್ಯತೆ ದೊರಕುತ್ತಿದ್ದು, ಇದು ಒಳ್ಳೆಯ ಬೆಳವಣಿಗೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಅವರು ಸೆ. 18ರಂದು ಉಪ್ಪಿನಂಗಡಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ.ಕ. ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಕೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು, (ಪ್ರೌಢ ಶಾಲಾ ವಿಭಾಗ) ಉಪ್ಪಿನಂಗಡಿ ಸಂಯುಕ್ತ ಆಶ್ರಯದಲ್ಲಿ ೨ ದಿನಗಳ ಕಾಲ ನಡೆಯುವ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.

ಕರ್ನಾಟಕ ಸರಕಾರ ಶಿಕ್ಷಣದಲ್ಲಿ ನಾಡಿನ ಆಚಾರ-ವಿಚಾರಗಳು ಇರಬೇಕು, ದೇಶದ ಸಂಸ್ಕೃತಿ ಬಿಂಬಿಸುವಂತಿರಬೇಕು ಎಂಬ ಉದ್ದೇಶ, ಕಲ್ಪನೆಯೊಂದಿಗೆ ಪ್ರತಿಭಾ ಕಾರಂಜಿ ಕಾರ್‍ಯಕ್ರಮ ರೂಪಿಸಿದ್ದು, ಈ ರೀತಿಯ ಕಾರ್‍ಯಕ್ರಮದಿಂದಾಗಿ ವೈವಿಧ್ಯತೆಯನ್ನು ಒಂದುಗೂಡಿಸಿ ವಿದ್ಯಾರ್ಥಿಗಳು, ಶಿಕ್ಷಕರು, ಮಕ್ಕಳ ಪೋಷಕರು ಸಾರ್ವತ್ರಿಕವಾಗಿ ಸಂಭ್ರಮ ಪಡುವಂತಾಗಿದೆ ಈ ನಿಟ್ಟಿನಲ್ಲಿ ಶಿಕ್ಷಕರ ಶ್ರಮಕ್ಕೆ ಪೋಷಕರು ಪ್ರೋತ್ಸಾಹ ನೀಡಬೇಕು, ಆಗ ನಮ್ಮ ಮಕ್ಕಳ ಜೊತೆಗೆ ನಮ್ಮ ಮಕ್ಕಳು ಕಲಿಯುವ ಶಾಲೆಯೂ ಗುರುತಿಸಲ್ಪಡುತ್ತದೆ ಎಂದ ಅವರು 2 ದಿನಗಳ ಕಾಲ ನಡೆಯುವ ಈ ಕಾರ್‍ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.

ದ.ಕ. ಜಿಲ್ಲಾ ಪಂಚಾಯಿತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ  ಅನಿತಾ ಹೇಮನಾಥ ಶೆಟ್ಟಿ ಕಾವು ಬ್ಯಾಂಡ್ ಬಾರಿಸುವ ಮೂಲಕ ವಿವಿಧ ಸ್ಪರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಅರಳಿಸಲು ಪ್ರೋತ್ಸಾಹ ಅಗತ್ಯ, ಶಿಕ್ಷಕರು, ಪೋಷಕರು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು, ವಿದ್ಯಾರ್ಥಿಗಳು ತಮಗೆ ಲಭಿಸುವ ಅವಕಾಶವನ್ನು ಸದುಪಯೋಗ ಪಡೆದುಕೊಂಡು ಸಾಧನೆ ತೋರಬೇಕು ಆ ಮೂಲಕ ವಿದ್ಯಾರ್ಥಿಗಳು ಶಿಕ್ಷಕರ ಮತ್ತು ಪೋಷಕರ ಪ್ರೀತಿ, ವಿಶ್ವಾಸ ಗಳಿಸಬೇಕು ಎಂದರು.

ಪುತ್ತೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಕಾರ್‍ಯಕ್ರಮವನ್ನು ಸವಾಲು ಆಗಿ ಸ್ವೀಕರಿಸುವ ಶಿಕ್ಷಕರು ಮಕ್ಕಳನ್ನು ತಿದ್ದಿ, ಅವರನ್ನು ಕಾರ್‍ಯಕ್ರಮಗಳಿಗೆ ಸಿದ್ಧಪಡಿಸುವ ಕೆಲಸ ಮಾಡುತ್ತಾರೆ, ಶಿಕ್ಷಕರಿಗೆ ಮತ್ತು ಪೋಷಕರಿಗೆ ಮಕ್ಕಳ ಮೇಲೆ ಬಹಳ ನಿರೀಕ್ಷೆ ಇರುತ್ತದೆ, ಹೀಗಾಗಿ ವಿದ್ಯಾರ್ಥಿಗಳು ಗುರಿ ಮತ್ತು ಇಚ್ಛಾಶಕ್ತಿ ಹೊಂದಿ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು, ಹೀಗಾದಾಗ ಮಾತ್ರ ಅಂತಹ ವಿದ್ಯಾರ್ಥಿ ಯಶಸ್ಸಿನ ಮೆಟ್ಟಿಲು ಏರಲು ಸಾಧ್ಯ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯೆ  ಶಯನಾ ಜಯಾನಂದ ಮಾತನಾಡಿ ಸರ್ಕಾರಿ ಶಾಲೆಯ ಶಿಕ್ಷಣ ವ್ಯವಸ್ಥೆ ಬಹಳಷ್ಟು ಉತ್ತಮವಾಗುತ್ತಿದ್ದು, ಖಾಸಗಿ ಶಾಲೆಗಳಿಗೆ ಸವಾಲು ಒಡ್ಡುತ್ತಿದೆ, ಖಾಸಗಿ ಶಾಲೆಗೆ ಕಳುಹಿಸುತ್ತಿದ್ದ ಬಹಳಷ್ಟು ಮಂದಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಮುಂದಾಗುತ್ತಿದ್ದಾರೆ, ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ನಾವುಗಳು ಸಹಕಾರಿ ಆಗಬೇಕು ಎಂದರು.

ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್ ಮಾತನಾಡಿ ಉಪ್ಪಿನಂಗಡಿಯಲ್ಲಿ ತಾಲ್ಲೂಕು ಮಟ್ಟದ ಕಾರ್‍ಯಕ್ರಮ ಆಯೋಜಿಸಿರುವುದು ಸಂತಸ ತಂದಿದ್ದು, ಇಲ್ಲಿನ ಜನತೆಯ ಸಹಕಾರದಿಂದ ಯಶಸ್ವಿ ಆಗುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದ ಅವರು ಮುಂದಿನ ವರ್ಷ ಜಿಲ್ಲಾ ಮಟ್ಟದ ಕಾರ್‍ಯಕ್ರಮ ನಡೆಯುವಂತಾಗಲಿ ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ಶ್ರೀಮತಿ ಸುಜಾತಕೃಷ್ಣ ಆಚಾರ್ಯ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್, ಪ್ರತಿಭಾ ಕಾರಂಜಿಯ ನೋಡೆಲ್ ಅಧಿಕಾರಿ ಯನ್. ಸುಂದರ ಗೌಡ ಸಂದರ್ಭೋಚಿತವಾಗಿ ಮಾತನಾಡಿದರು.

ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಎನ್. ಉಮೇಶ್ ಶೆಣೈ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಯು.ಟಿ. ತೌಶೀಫ್, ದ.ಕ. ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್‍ಯದರ್ಶಿ ರಾಮಕೃಷ್ಣ ಮಲ್ಲಾರ, ದ.ಕ. ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಕಾರ್‍ಯದರ್ಶಿ ರಾಮಕೃಷ್ಣ, ಪುತ್ತೂರು ತಾಲೂಕು ಪ್ರೌಢ ಶಾಲಾ ಮುಖ್ಯಸ್ಥರ ಸಂಘದ ಕಾರ್‍ಯದರ್ಶಿ ಶ್ರೀಮತಿ ರೂಪಕಲಾ, ಪುತ್ತೂರು ತಾಲೂಕು ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಾಹಂ ಎಸ್.ಎ., ಪುತ್ತೂರು ತಾಲ್ಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸೀತಾರಾಮ ಗೌಡ, ಪುತ್ತೂರು ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್ ಕುಮಾರ್, ಪುತ್ತೂರು ಯುವಜನ ಸಬಲೀಕರಣ ಮತ್ತು ಕ್ರೀಡಾಧಿಕಾರಿ ಮಾಮಚ್ಚನ್, ಉಪ್ಪಿನಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಚಂದಪ್ಪ ಮೂಲ್ಯ, ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಮಂಜುನಾಥ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪದವಿ ಪೂರ್ವ ಕಾಲೇಜಿನ ಉಪ ಪ್ರಾಚಾರ್ಯ ದಿವಾಕರ ಆಚಾರ್ಯ ಸ್ವಾಗತಿಸಿ, ಶಿಕ್ಷಣ ಸಮನ್ವಯಾಧಿಕಾರಿ ಮೋನಪ್ಪ ಪೂಜಾರಿ ವಂದಿಸಿದರು. ಸ್ಥಳೀಯ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ರಾಮಚಂದ್ರ ಮಣಿಯಾಣಿ, ಜೆ.ಕೆ. ಪೂಜಾರಿ, ಶ್ರೀಮತಿ ಶೋಭಾ, ಶ್ರೀಮತಿ ಸುಮನ, ಶ್ರೀಮತಿ ಭವಾನಿ ಬೆತ್ತೋಡಿ, ಮುನೀರ್ ದಾವೂದ್, ಶ್ರೀಮತಿ ದುರ್ಗಾಮಣಿ, ಹರಿರಾಮಚಂದ್ರ, ಗೋಪಾಲ ಶೆಟ್ಟಿ, ಝಕರಿಯಾ ಕೊಡಿಪ್ಪಾಡಿ, ವಿಜೇತ, ಈಶ್ವರ ಭಟ್, ಜಯಂತ ಪೊರೋಳಿ, ಜಗದೀಶ್ ಶೆಟ್ಟಿ, ಪ್ರವೀಣ್ ಕುಮಾರ್ ಕಜೆಕ್ಕಾರು, ಉಮೇಶ್ ಅಮೀನ್, ಆದಂ ಕೊಪ್ಪಳ, ಯು.ಜಿ. ರಾಧಾ, ಶಿಕ್ಷಣ ಇಲಾಖೆಯ ಅಶ್ರಫ್, ತಾರನಾಥ ಸವಣೂರು, ಪುನೀತ್,  ಸುಚಿತ್ರಾ ಹೊಳ್ಳ ವಿವಿಧ ಕಾರ್‍ಯಕ್ರಮ ನಿರ್ವಹಿಸಿದರು. ಶಿಕ್ಷಕ ಗುಡ್ಡಪ್ಪ ಬಲ್ಯ ಕಾರ್‍ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.