Home_Page_Advt
Home_Page_Advt
Home_Page_Advt
Breaking News

ಬಿಜೆಪಿಯಿಂದ ವಿಧಿ ರದ್ಧತಿ ಕುರಿತು ರಾಷ್ಟ್ರೀಯ ಐಕ್ಯತಾ ಅಭಿಯಾನ

  • ಕಾಶ್ಮೀರ ಭಾರತದ ಕಿರೀಟ – ಪಿ.ರಾಜೀವ್

ಪುತ್ತೂರು: ಜಮ್ಮು ಮತ್ತು ಕಾಶ್ಮೀರದಲ್ಲಿ ನರಮೇಧ, ಭಯೋತ್ಪಾದನೆ, ರಕ್ತದ ಓಕುಳಿಗಳಿಂದ ಇದುವರೆಗೆ ಸುಮಾರು 40 ಸಾವಿರ ಹತ್ಯೆಗಳಾಗಿವೆ. ಜವಾಹರಲಾಲ್ ನೆಹರುರವರು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನದ ಆರ್ಟಿಕಲ್ 370ರ ಪರಿಣಾಮ ಕಾಶ್ಮೀರಕ್ಕೆ ಪ್ರತ್ಯೇಕ ಸಂವಿಧಾನ ರಚಿಸಲು ಅನುವು ನೀಡಿ,ಅದು ಭಾರತದ ಸಂವಿಧಾನಕ್ಕೆ ವಿರುದ್ಧವಾಗಿರುವುದಲ್ಲದೇ ಕೇವಲ ಅಧಿಕಾರದ ವ್ಯಾಮೋಹಕ್ಕಾಗಿ ಕಾಶ್ಮೀರ ಭೀಕರತೆ ಎದುರಿಸಬೇಕಾಯಿತು ಎಂದು ಕುಡುಚಿ ವಿಧಾನ ಸಭಾ ಕ್ಷೇತ್ರದ ಶಾಸಕ ಪಿ.ರಾಜೀವ್ ಹೇಳಿದರು.

ಪುತ್ತೂರು ವಿಧಾನಸಭಾ ಕ್ಷೇತ್ರ ಭಾರತೀಯ ಜನತಾ ಪಾರ್ಟಿ ವತಿಯಿಂದ ಸೆ.18 ರಂದು ಪುತ್ತೂರಿನ ಕೋ ಒಪರೇಟಿವ್ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಿದ ರಾಷ್ಟ್ರೀಯ ಐಕ್ಯತಾ ಅಭಿಯಾನದಲ್ಲಿ  ಮುಖ್ಯ ಭಾಷಣಕಾರರಾಗಿ ಆಗಮಿಸಿ ಅವರು ಮಾತನಾಡಿದರು. ಭಾರತದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ರವರ ಕಠಿಣ ಪರಿಶ್ರಮದಿಂದಾಗಿ ಒಂದೇ ಒಂದು ಕ್ರಾಂತಿ ಇಲ್ಲದೇ ಆರ್ಟಿಕಲ್ 370 ನ್ನು ನಿಷ್ಕ್ರಿಯಗೊಳಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದಾರೆ ಎಂದು ಅವರು ತಿಳಿಸಿದರು.

ಭಾರತದೊಂದಿಗೆ ಕಾಶ್ಮೀರ ವಿಲೀನ….

ಕಾಶ್ಮೀರ ಭಾರತದ ಶಿರವಾಗಬೇಕೆಂದು ಘೋಷಿಸಿದ ಶಾಂತರಾಮ್ ಅವರನ್ನು ಬಂಧಿಸಿದ ಹಿನ್ನಲೆಯಲ್ಲಿ ಕಾರಗೃಹದಲ್ಲಿಯೇ ಹುತಾತ್ಮರಾಗುತ್ತಾರೆ ಆದರೆ ಅವರ ಸಾವು ಇನ್ನು ನಿಗೂಢ..!, ಕಾಶ್ಮೀರಕ್ಕಾಗಿ ರಾತ್ರಿ ಹಗಲೆನ್ನದೇ ಭಾರತದ ಅವಿಭಾಜ್ಯ ಭಾಗವನ್ನಾಗಿಸಲು ಶ್ರಮ ಪಟ್ಟು ಅಮರರಾದ ಸೈನಿಕರನ್ನು ನಾವೆಲ್ಲರೂ ಸ್ಮರಿಸೋಣ. ಕಾಶ್ಮೀರ ಭಾರತದೊಂದಿಗೆ ವಿಲೀನಗೊಂಡಿದೆ. ಪ್ರತಿಬಾರಿ ಕೇಂದ್ರ ಸರಕಾರದಿಂದ ಅತಿ ಹೆಚ್ಚು ಅನುದಾನ ಪಡೆಯುತ್ತಿರುವ ರಾಜ್ಯವೂ ಹೌದು, ಕಾಶ್ಮೀರದಲ್ಲಿನ್ನು ಆಸ್ತಿ ಖರೀದಿ, ವಾಣಿಜ್ಯ ವ್ಯಾಪಾರಕ್ಕಾಗಿ ಕೇಂದ್ರ ಸರಕಾರ ಮುಕ್ತ ಸ್ವಾತಂತ್ರ್ಯ ನೀಡಿದೆ. -ಪಿ.ರಾಜೀವ್ 

ಭಾ.ಜ.ಪಾ. ಹಿರಿಯ ಕಾರ್ಯಕರ್ತ ಯು.ಪೂವಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾ.ಜ.ಪಾ. ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ವಹಿಸಿದರು.  ಪುತ್ತೂರು ಶಾಸಕ ಸಂಜೀವ ಮಠಂದೂರು, ಭಾ.ಜ.ಪಾ. ಪುತ್ತೂರು ನಗರ ಮಂಡಲ ಅಧ್ಯಕ್ಷ ಜೀವಂಧರ ಜೈನ್, ಭಾ.ಜ.ಪಾ. ಮಹಿಳಾ ಮಂಡಲದ ಅಧ್ಯಕ್ಷೆ ಪೂಜಾ ಪೈ, ಭಾ.ಜ.ಪ. ಪುತ್ತೂರು  ಪ್ರಭಾರಿ ಕಿಶೋರ್  ಕುಮಾರ್ ರೈ, ಭಾ.ಜ.ಪಾ. ಜಿಲ್ಲಾ ಕಾರ್ಯದರ್ಶಿ ಸತೀಶ ಕುಂಪಲ್ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.

ಪುತ್ತೂರು ಪುರಸಭೆ ಸದಸ್ಯೆ ಗೌರಿ ಬನ್ನೂರು ಪ್ರಾರ್ಥಿಸಿ, ಭಾ.ಜ.ಪಾ. ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಸ್ವಾಗತಿಸಿ, ಭಾ.ಜ.ಪಾ. ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಜೀವಂಧರ್ ಜೈನ್ ವಂದಿಸಿದರು. ಚಂದ್ರಶೇಖರ್ ಬಪ್ಪಳಿಗೆ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.