ಎಪಿಎಂಸಿ ಸಾಮಾನ್ಯ ಸಭೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: 2019-20ನೇ ಸಾಲಿನಲ್ಲಿ ಪ್ರಾಂಗಣದಲ್ಲಿ ೩.೭೦ಕೋಟಿ ಅನುದಾನದ ೧೧ ಹೊಸ ಕಾಮಗಾರಿಗಳು, ರೂ.೬೦ಲಕ್ಷ ಅನುದಾನದಲ್ಲಿ ೬೦ಸಿ ಯೋಜನೆಯಲ್ಲಿ ೨೩ ಗ್ರಾಮೀಣ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಹಾಗೂ ಹಿಂದಿನ ಅವಧಿಯಲ್ಲಿ ೫,೬೫,೭೭,೫೬೩ ಅನುದಾನದ ೩೨ ಕಾಮಗಾರಿಗಳಿಗೆ ಸಾಮಾನ್ಯ ಸಭೆಯಲ್ಲಿ ಕ್ರಿಯಾಯೋಜನೆ ತಯಾರಿಸಲಾಯಿತು.

ಸಭೆಯು ಸೆ.18ರಂದು ಅಧ್ಯಕ್ಷ ದಿನೇಶ್ ಮೆದುರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾರ್ಯದರ್ಶಿ ಪ್ರಭಾರ ರಾಮಚಂದ್ರರವರು ವಿಷಯ ಮಂಡಿಸಿದರು.

11 ಹೊಸ ಕಾಮಗಾರಿಗಳು:
ಎಪಿಎಂಸಿಯ ಉದ್ದೇಶಿತ ಮಾರುಕಟ್ಟೆ ಪ್ರಾಂಗಣದಲ್ಲಿ ೨೦೧೯-೨೦ಸಾಲಿನ ಹೊಸ ಕಾಮಗಾರಿಗಳಾದ ರೂ.೨೩ಲಕ್ಷದಲ್ಲಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಕಾಂಕ್ರಿಟ್ ತಡೆಗೋಡೆ, ರೂ.೫೦ಲಕ್ಷದಲ್ಲಿ ೨ ಗೋದಾಮು ನಿರ್ಮಾಣ, ರೂ.೬ಲಕ್ಷದಲ್ಲಿ ೪೦೦ಎಂ.ಟಿ ಗೋದಾಮು, ರೂ.೧೦ಲಕ್ಷದಲ್ಲಿ ರೈತ ಸಭಾ ಭವನದ ಬಳಿ ಶೆಡ್, ರೈತ ಸಭಾಭವನದ ಬಳಿ ಇಂಟರ್‌ಲಾಕ್, ೧.೫೦ಕೋಟಿಯಲ್ಲಿ ಪ್ರಾಂಗಣದಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ಹಾಗೂ ಇಂಟರ್‌ಲಾಕ್, ರೂ.೨೩ಲಕ್ಷದಲ್ಲಿ ಬ್ಯಾಂಕ್ ಕಟ್ಟಡ, ಅಂಚೆ ಕಛೇರಿ, ಹೊಸ ಕ್ಯಾಂಟೀನ್ ಕಟ್ಟಡ ಅಭಿವೃದ್ಧಿ, ರೂ.೫೦ಲಕ್ಷದಲ್ಲಿ ಪ್ರಾಂಗಣದ ಆವರಣಗೋಡೆಗೆ ಬಣ್ಣ ಹಾಗೂ ಮೆಶ್ ಅಳವಡಿಕೆ, ರೂ.೮ಲಕ್ಷದಲ್ಲಿ ಆಡಳಿತ ಕಛೇರಿ ಮುಂಭಾಗ ಹೂತೋಟ, ರೂ.೧೫ಲಕ್ಷದಲ್ಲಿ ಆಡಳಿತ ಕಛೇರಿ ಅಭಿವೃದ್ಧಿ, ರೂ.೧೦ಲಕ್ಷದಲ್ಲಿ ಕಾರ್ಯದರ್ಶಿಯವರ ವಸತಿ ಗೃಹದ ಅಭಿವೃದ್ಧಿ ಹಾಗೂ ರೂ.೨೫ಲಕ್ಷದಲ್ಲಿ ಸಂತೆ ಮಾರುಕಟ್ಟೆ ಸುತ್ತ ಇರುವ ಅಂಗಡಿ ಮಳಿಗೆ ಹಾಗೂ ಸಂತೆ ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದೆ.

23 ಗ್ರಾಮೀಣ ಸಂಪರ್ಕ ರಸ್ತೆಗಳು:
೬೦ಸಿ ಗ್ರಾಮೀಣ ಸಂಪರ್ಕ ರಸ್ತೆ ಅಭಿವೃದ್ಧಿ ಯೋಜನೆಯಲ್ಲಿ ಬಜತ್ತೂರು ಕಾಂಚನ ನಡ್ಪ ರಸ್ತೆಗೆ ರೂ.೨ಲಕ್ಷ, ಆಲಂತಾಯ ಶಿವಾರು ದುಗ್ಗು ತೋಟ ರಸ್ತೆಗೆ ರೂ.೨ಲಕ್ಷ, ಕೆದಂಬಾಡಿ ದರ್ಬೆ ತಿಂಗಳಾಡಿ ಅಂಗನತ್ತಡ್ಕ ಕನ್ನಡ ಮೂಲೆ ರಸ್ತೆಗೆ ರೂ.೫ಲಕ್ಷ, ಮುಂಡೂರು ಪಂಜಳ,ಪೆರಿಯಡ್ಕ, ಕುರೆಮಜಲು ರಸ್ತಗೆ ರೂ,೨ಲಕ್ಷ, ಕೆದಂಬಾಡಿ ತಿಂಗಳಾಡಿ ಮಿತ್ರಂಪಾಡಿ ಮುಳಿಗದ್ದೆ ರಸ್ತೆಗೆ ರೂ.೨ಲಕ್ಷ, ಬಲ್ನಾಡು ಬೆಳಿಯೂರುಕಟ್ಟೆ, ಸಾರ್ಯಮಠ ರಸ್ತೆಗೆ ರೂ.೪ಲಕ್ಷ, ನೆಲ್ಯಾಡಿ ಪಡುಬೆಟ್ಟು, ಪಟ್ಟೆ ಬೀದಿ ರಸೆಗೆ ರೂ.೨ಲಕ್ಷ, ಕೊಂಬಾರು ಗುಂಡ್ಯ, ದೇರಣೆ, ರೆಂಜಾಳ ರಸ್ತೆಗೆ ರೂ.೨ಲಕ್ಷ, ಬಂಟ್ರ ಮರ್ದಾಳ, ಬೀಡು ರಸ್ತೆಗೆ ರೂ.೨ಲಕ್ಷ, ನೂಜಿಬಾಳ್ತಿಲ ನೀರಾವರಿ, ಬರೆಮೇಲು ರಸ್ತೆಗೆ ರೂ.೨ಲಕ್ಷ, ಕುಟ್ರುಪ್ಪಾಡಿ ಕೇಪು, ಬಲ್ಯ ರಸ್ತೆಗೆ ರೂ.೨ಲಕ್ಷ, ಕುಂತೂರು ಎರ್ಮಾಳ ಪಲಸಗಿರಿ ಮೇರುಗುಡ್ಡೆ ಅಡೀಲು ರಸ್ತೆಗೆ ರೂ.೨ಲಕ್ಷ, ಆಲಂಕಾರು ಕರಂದ್ಲಾಜೆ ಶರವೂರು ರಸ್ತೆಗೆ ರೂ.೨ಲಕ್ಷ, ಕೊಯಿಲ ಒಳಕಡಮ, ಕೆಮ್ಮಟೆ ರಸ್ತೆಗೆ ರೂ.೨ಲಕ್ಷ, ಕೊಳ್ತಿಗೆ ಉಬರಾಜೆ, ಪುಂಡ್ಯವನ ರಸ್ತೆಗೆ ರೂ.೫ಲಕ್ಷ, ಬೆಳ್ಳಿಪ್ಪಾಡಿ ಕೊಡಪಟ್ಯ, ಜತ್ತಿಬೆಟ್ಟು ರಸ್ತೆಗೆ ರೂ.೫ಲಕ್ಷ, ಬೆಟ್ಟಂಪಾಡಿ ಉಪ್ಪಳಿಗೆ, ಬಾರ್ತಕುಮೇರು ರಸ್ತೆಗೆ ರೂ.೨ಲಕ್ಷ, ಪಾಣಾಜೆ ದೇವಸ್ಯ, ನಿರೋಲ್ಯ ರಸ್ತೆಗೆ ರೂ ೨.೫೦ಲಕ್ಷ, ಒಳಮೊಗ್ರು ಕುಂಬ್ರ ಬಡಕ್ಕೋಡಿ ರಸ್ತೆಗೆ ರೂ.೨.೫೦ಲಕ್ಷ, ಕುದ್ಮಾರು ಪಾಲ್ತೂರು ನೂಜಿ ರಸ್ತೆಗೆ ರೂ.೩ಲಕ್ಷ, ಸವಣೂರು ಕನ್ನಡಕುಮೇರು, ಪಾದೆಬಂಬಿಲ ರಸ್ತೆಗೆ ರೂ.೩ಲಕ್ಷ, ಬೆಳಂದೂರು ಪರಣೆ, ಅಮೈ ರಸ್ತೆಗೆ ರೂ೩ಲಕ್ಷ ಹಾಗೂ ಮುಂಡೂರು ಅಂಬಟ, ಪೋನೊನಿ ರಸ್ತೆಗೆ ರೂ.೧ಲಕ್ಷದ ಅಭಿವೃದ್ಧಿ ಕಾಮಗಾರಿಗಳು ನಡೆಯಲಿದೆ.

32 ಮುಂದುವರಿದ ಕಾಮಗಾರಿಗಳು:
೨೦೧೯-೨೦ನೇ ಸಾಲಿಗೆ ಮುಂದುವರಿದ ಹಿಂದಿನ ಕಾಮಗಾರಿಗಳಾದ ರೂ.೩೩.೪೭ಲಕ್ಷದ ಪ್ರಾಂಗಣದಲ್ಲಿ ಅಂಗಡಿ, ಗೋದಾಮು ದುರಸ್ತಿ, ಆವರಣ ಗೋಡೆ ನಿರ್ಮಾಣ, ರೂ.೪.೫೪ಲಕ್ಷದಲ್ಲಿ ಆಡಳಿತ ಕಛೇರಿಯ ವಿಸ್ತರಣಾ ಕಟ್ಟದ ನೆಲ ಅಂತಸ್ತಿನಲ್ಲಿ ಮಿನಿ ಹಾಲ್, ಕಡಬ ಉಪಮಾರುಕಟ್ಟೆಯಲ್ಲಿ ಅಂಗಡಿ ಮಳಿಗೆಗಳ ಎದುರು ಇಂಟರ್‌ಲಾಕ್, ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ತಡೆಗೋಡೆ, ಚರಂಡಿ, ಡೆಕ್ ಸ್ಲಾಬ್, ರೂ.೭೫.೬೦ಲಕ್ಷದಲ್ಲಿ ೧೦೦೦ ಮೆಟ್ರಿಕ್ ಟನ್ ಸಾಮರ್ಥ್ಯದ ಗೋದಾಮು, ರೂ.೪೮.೫೦ಲಕ್ಷದಲ್ಲಿ ಮುಖ್ಯ ಪ್ರಾಂಗಣದಲ್ಲಿ ಕಾಂಕ್ರೀಟ್ ರಸ್ತೆ ಹಾಗೂ ಚರಂಡಿ, ೩.೦೫ಕೋಟಿಯಲ್ಲಿ ಮುಖ್ಯ ಪ್ರಾಂಗಣದಲ್ಲಿ ೫ ಹಾಗೂ ಕಡಬ ಉಪ ಮಾರುಕಟ್ಟೆಯಲ್ಲಿ ೧ ವಿವಿಧ ಅಭಿವೃದ್ಧಿ ಕಾಮಗಾರಿಗಳು, ೬೦ಸಿ ಯೋಜನೆಯಲ್ಲಿ ೧೩ ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ರೂ.೨೮.೫೦ಲಕ್ಷದಲ್ಲಿ ಮುಖ್ಯ ಪ್ರಾಂಗಣದಲ್ಲಿ ಶೌಚಾಲಯ ದುರಸ್ಥಿ, ಶೌಚಾಲಯದ ಸುತ್ತ ಇಂಟರ್‍ಲಾಕ್, ರೂ.೧೧.೮೦ಲಕ್ಷದಲ್ಲಿ ಮುಖ್ಯ ಪ್ರಾಂಗಣದ ಸಂಡ್ರಿಶಾಫ್ ಕಟ್ಟಡದ ಮೊದಲ ಅಂತಸ್ಥಿನಲ್ಲಿ ಅಂಗಡಿ ಮಳಿಗೆಗಳ ನಿರ್ಮಾಣ, ರೂ.೪.೮೫ಲಕ್ಷದಲ್ಲಿ ಕೋಡಿಂಬಾಳ ಮಜ್ಜಾರು ರಸ್ತೆ ಅಭಿವೃದ್ಧಿ, ರೂ.೩ಲಕ್ಷದಲ್ಲಿ ನೆಟ್ಟಣಿಗೆ ಮುಡ್ನೂರು ಸಾಂತ್ಯ, ಕೊಂಕಣಿಗುಂಡಿ ರಸ್ತೆ ಅಭಿವೃದ್ಧಿ ಹಾಗೂ ರೂ.೫೦ಲಕ್ಷದಲ್ಲಿ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ವಿದ್ಯುತ್ ಕಾಮಗಾರಿಗಳಿಗೆ ಕ್ರಿಯಾಯೋಜನೆ ನಡೆಸಲಾಯಿತು.

ಎಲ್ಲಿಯೂ ಇಲ್ಲದ ನಿರ್ಬಂಧ ಪ್ರಾಂಗಣದ ವರ್ತಕರಿಗೇಕೆ?
ಎಪಿಎಂಸಿ ಪ್ರಾಂಗಣದಲ್ಲಿರುವ ಎಲ್ಲಾ ವರ್ತಕರು ಲೈಸನ್ಸ್ ಪಡೆದು ಕಾನೂನು ರೀತಿಯಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಎಪಿಎಂಸಿಗೆ ಪಾವತಿಸಬೇಕಾದ ಎಲ್ಲಾ ರೀತಿಯ ತೆರಿಗೆ, ಸೆಸ್‌ಗಳನ್ನು ಪಾವತಿಸಿಯೇ ವ್ಯಪಾರ ನಡೆಸುತ್ತಿದ್ದಾರೆ. ಹಾಗಿದ್ದರೂ ಇಲ್ಲಿರುವ ಅಂಗಡಿಗಳಿಗೆ ಮಾತ್ರ ಎಲ್ಲಾ ರೀತಿಯ ಕಾನೂನು, ನಿರ್ಬಂಧಗಳನ್ನು ಹೇರಲಾಗುತ್ತದೆ. ಉಪಮಾರುಕಟ್ಟೆಯಲ್ಲಿ ಗೇಟ್ ಇಲ್ಲ. ಅಲ್ಲಿ ಕಾವಲುಗಾರರೂ ಇಲ್ಲ. ಅಲ್ಲಿ ಇಷ್ಟೊಂದು ನಿರ್ಬಂಧವೂ ಇಲ್ಲ. ಜಿಲ್ಲೆಯಲ್ಲಿರುವ ಇತರ ಎಪಿಎಂಸಿಗಳಲ್ಲಿಯೂ ಗೇಟ್ ಪದ್ಧತಿಯಿಲ್ಲ. ಮಾರಾಟ ತೆರಿಗೆಯ ಅಧಿಕಾರಿಗಳೂ ಪ್ರಾಂಗಣದಲ್ಲಿರುವ ವರ್ತಕರನ್ನು ತನಿಖೆ ನಡೆಸುತ್ತಿದ್ದಾರೆ. ಇದರಿಂದಾಗಿ ವರ್ತಕರು ಬಹಳಷ್ಟು ತೊಂದರೆ ಎದುರಿಸುವಂತಾಗಿದೆ. ಅಡಿಕೆ ತರುವ ರೈತರು ಪ್ರಾಂಗಣದ ಒಳಗೆ ಬರುವಾಗ ಹಾಗೂ ಹೋಗುವಾಗ ವಾಹನಗಳನ್ನು ತನಿಖೆ ನಡೆಸಲಾಗುತ್ತಿದೆ. ಇದರಿಂದ ರೈತರಿಗೂ ತೊಂದರೆ ಉಂಟಾಗುತ್ತಿದೆ. ಈ ನಿಟ್ಟಿನಲ್ಲಿ ಪ್ರಾಂಗಣದಲ್ಲಿ ಕಾನೂನು ಬದ್ಧ ರೀತಿಯಲ್ಲಿ ವ್ಯವಹರಿಸುತ್ತಿರುವ ವರ್ತಕರಿಗೆ ರಿಯಾಯಿತಿ ನೀಡಬೇಕು ಎಂದು ವರ್ತಕ ಪ್ರತಿನಿಧಿ ಅಬ್ದುಲ್ ಶಕೂರ್ ಹಾಜಿ ಆಗ್ರಹಿಸಿದರು. ಪ್ರತಿಕ್ರಿಯಿಸಿದ ಅಧ್ಯಕ್ಷ ದಿನೇಶ್ ಮೆದು ಈ ಹಿಂದೆ ನಡೆದ ಪ್ರಕರಣಕ್ಕೆ ಸಂಬಂಧಿಸಿ ಹಿಂದಿನ ಆಡಳಿತ ಮಂಡಳಿಯವರು ಭದ್ರತೆಯ ದೃಷ್ಠಿಯಿಂದ ಗೇಟ್ ಎಂಟ್ರಿ ಪದ್ಧತಿಯನ್ನು ಜಾರಿಗೆತರಲಾಗಿದೆ. ರೈತರು ಪ್ರಾಂಗಣದ ಒಳಗೆ ಬರುವ ಸಂದರ್ಭದಲ್ಲಿ ಗೇಟ್‌ನಲ್ಲಿ ತನಿಖೆನಡೆಸುವುದಿಲ್ಲ. ಹೊರಹೋಗುವ ಸಂದರ್ಭದಲ್ಲಿ ಸೆಸ್ ಪಾವತಿಸಿದ ಬಿಲ್ ಕಡ್ಡಾಯವಾಗಿ ಗೇಟ್‌ನಲ್ಲಿ ಸಲ್ಲಿಸಬೇಕು ಎಂದರು. ಪ್ರಾಂಗಣಕ್ಕೆ ಅಡಿಕೆ ತರುವಂತೆ ರೈತರಿಗೆ ಯಾವುದೇ ರೀತಿಯ ತೊಂದರೆಯಿಲ್ಲ. ಸೆಸ್ ಸಂಗ್ರಹಕ್ಕೆ ನಿರ್ದಿಷ್ಠ ಗುರಿಯಿದೆ. ಕಳೆದ ಐದು ವರ್ಷಗಳಲ್ಲಿ ಈ ವರ್ಷವೇ ಸೆಸ್ ಸಂಗ್ರಹದ ಪ್ರಮಾಣ ಇಳಿಕೆಯಾಗಿದೆ. ಇದಕ್ಕಾಗಿ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಇದರಿಂದಾಗಿ ಇಲ್ಲಿನ ಅಡಿಕೆಯನ್ನು ಕೇರಳದ ಬಿಲ್ ಮೂಲಕ ಮಾರಾಟ ಮಾಡುವುದು ಬಹುತೇಕ ಕಡಿಮೆಯಾಗಿದೆ ಎಂದು ಕಾರ್ಯದರ್ಶಿ ರಾಮಚಂದ್ರ ಹೇಳಿದರು

ರೈಲ್ವೇ ಅಂಡರ್‌ಪಾಸ್‌ಗೆ ರೂ.3ಕೋಟಿಗೆ ಮಂಜೂರಾತಿಗೆ ಮನವಿ:
ರೈಲ್ವೇ ಅಂಡರ್ ಪಾಸ್ ನಿರ್ಮಾಣದ ಯೋಜನೆ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಕಾಮಗಾರಿಗೆ ಅಂದಾಜುಪಟ್ಟಿ ಸಿದ್ದವಾಗಿದೆ. ಒಟ್ಟು ಮೊತ್ತದ ಅರ್ಧಭಾಗ ರೈಲ್ವೇ ಇಲಾಖೆ ಭರಿಸಲಿದೆ. ಉಳಿದ ಅರ್ಧಭಾಗವನ್ನು ಎಪಿಎಂಸಿ, ನಗರ ಸಭೆ, ಶಾಸಕರು ಹಾಗೂ ಸಂಸದರು ಮುಖಾಂತರ ಭರಿಸಬೇಕಿದೆ. ಇದಕ್ಕಾಗಿ ಮೂಲಸೌಕರ್ಯ ನಿಧಿಯಿಂದ ರೂ.೫ಕೋಟಿ ಅನುದಾನ ನೀಡುವಂತೆ ಮನವಿ ಮಾಲಡಲಾಗಿದೆ ರೂ.೩ಕೋಟಿ ಬರುವ ನಿರೀಕ್ಷೆಯಿದೆ. ಎಪಿಯಂಸಿಯಿಂದ ರೂ.೩ಕೋಟಿ ನೀಡಲು ಆಡಳಿತ ಮಂಡಳಿ ಮಂಜೂರಾತಿಗೆ ಮನವಿ ಮಾಡಲಾಗವುದು ಎಂದು ಅಧ್ಯಕ್ಷ ದಿನೇಶ್ ಮೆದು ಹೇಳಿದರು.

ತಹಶೀಲ್ದಾರ್‌ಗೆ ಮನವಿ
ಪುತ್ತೂರು ತಾಲೂಕಿನಿಂದ ಪ್ರತ್ಯೇಕಗೊಂಡಿರುವ ಕಡಬ ತಾಲೂಕಿನಲ್ಲಿ ರೈತರಿಗೆ ಅನುಕೂಲವಾಗುವಂತೆ ಸುಸಜ್ಜಿತವಾದ ಎಪಿಎಂಸಿ ಮಾರುಕಟ್ಟೆ ನಿರ್ಮಾಣ ಮಾಡುವಂತೆ ಸದಸ್ಯ ಬಾಲಕೃಷ್ಣ ಬಾಣಜಾಲು ಒತ್ತಾಯಿಸಿದರು. ಈಗಾಗಲೇ ಕಡಬದಲ್ಲಿ ಎಪಿಎಂಸಿಗೆ ೩೫ ಸೆಂಟ್ಸ್ ಜಾಗವಿದ್ದು ಅದರಲ್ಲಿ ಮಾರುಕಟ್ಟೆ, ಮೇಲಂತಸ್ಥಿನಲ್ಲಿ ಕಛೇರಿ ಕಾಮಗಾರಿ ನಡೆಯುತ್ತಿದೆ. ಸುಸಜ್ಜಿತವಾದ ಮಾರುಕಟ್ಟೆ ನಿರ್ಮಾಣಕ್ಕೆ ೧೦ಎಕ್ರೆ ಜಾಗ ಗುರುತಿಸಿಕೊಡುವಂತೆ ತಹಶೀಲ್ದಾರ್‌ಗೆ ಮನವಿ ಮಾಡುವುದಾಗಿ ಅಧ್ಯಕ್ಷ ದಿನೇಶ್ ಮೆದು ಹೇಳಿದರು.

ಗುತ್ತಿಗೆದಾರ ಕಪ್ಪುಪಟ್ಟಿಗೆ:
ಸದಸ್ಯ ತೀರ್ಥಾನಂದ ದುಗ್ಗಳ ಮಾತನಾಡಿ, ಗ್ರಾಮೀಣ ರಸ್ತೆ ಅಭಿವೃದ್ಧಿಯ ಅನುದಾನದಲ್ಲಿ ರಸ್ತೆ ಕಾಂಕ್ರೀಟೀಕರಣಕ್ಕೆ ಟೆಂಡರ್ ನಡೆದು ಹಲವು ತಿಂಗಳು ಕಳೆದರೂ ಇನ್ನೂ ಕಾಮಗಾರಿ ಪ್ರಾರಂಭಿಸಿಲ್ಲ. ಆ ಭಾಗದ ಜನ ನಮ್ಮಲ್ಲಿ ಪ್ರಶ್ನಿಸುತ್ತಾರೆ. ಕಾಮಗಾರಿ ನಡೆದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು. ಆಡಳಿತ ಮಂಡಳಿಯ ಹಂತದಲ್ಲಿ ಕಾಮಗಾರಿ ಬಾಕಿ ಉಳಿದಿಲ್ಲ. ಗುತ್ತಿಗೆದಾರರಿಂದಾಗಿಯೇ ಬಾಕಿ  ಉಳಿದಿದೆ. ಕಾಮಗಾರಿ ನಡೆಸಲು ಇನ್ನೂ ಒಂದು ತಿಂಗಳ ಕಾಲಾವಕಾಶ ನೀಡುವ. ಆ ಬಳಿಕವೂ ಕಾಮಗಾರಿ ಪ್ರಾರಂಭಿಸದಿದ್ದರೆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಇಲಾಖೆಗೆ ಕಳುಹಿಸಲಾಗುವುದು ಎಂದು ಹೇಳಿದರು.

ಉಪಾಧ್ಯಕ್ಷ ಮಂಜುನಾಥ ಎನ್.ಎಸ್, ಸದಸ್ಯರಾದ ಬೂಡಿಯಾರ್ ರಾಧಾಕೃಷ್ಣ ರೈ ಪುಲಸ್ತ್ಯ ರೈ, ತ್ರೀವೇಣಿ ಪೆರ್‍ವೋಡಿ, ಕೊರಗಪ್ಪ ಗೌಡ, ಮೇದಪ್ಪ ಗೌಡ, ಕೊರಗಪ್ಪ, ಕೃಷ್ಣ ಕುಮಾರ್ ರೈ ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಮಚಂದ್ರ ಸ್ವಾಗತಿಸಿ, ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.