Home_Page_Advt
Home_Page_Advt
Home_Page_Advt
Breaking News

ತಾಲೂಕು ಜನಜಾಗೃತಿ ಪದಾಧಿಕಾರಿಗಳ ಸಭೆ

ಪುತ್ತೂರು:ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಪುತ್ತೂರು ಇದರ ಪದಾಧಿಕಾರಿಗಳ ಸಭೆಯು ತಾಲೂಕು ಅಧ್ಯಕ್ಷ ಮಹಾಬಲ ರೈಯವರ ಅಧ್ಯಕ್ಷತೆಯಲ್ಲಿ ಯೋಜನಾ ಕಚೇರಿಯಲ್ಲಿ ನಡೆಯಿತು. ಜನಜಾಗೃತಿ ವೇದಿಕೆ ನಿಕಟ ಪೂರ್ವ ಅಧ್ಯಕ್ಷ ಪದ್ಮನಾಭ ಶೆಟ್ಟಿ ದೀಪಬೆಳಗಿಸಿ ಉದ್ಘಾಟಿಸಿದರು.

ಜನಜಾಗೃತಿ ರಾಜ್ಯ ಸಲಹಾ ಸಮಿತಿ ಸದಸ್ಯ ಸಾಜ ರಾಧಾಕೃಷ್ಣ ಆಳ್ವ, ಯೋಜನಾಧಿಕಾರಿ ಜನಾರ್ದನ ಎಸ್ ಮತ್ತು ಕೇಂದ್ರ ಒಕ್ಕೂಟದ ಅಧ್ಯಕ್ಷ ರಾಮಣ್ಣ ಗೌಡ ಗುಂಡೋಳೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಲಯದ ಎಲ್ಲಾ ವಲಯಾಧ್ಯಕ್ಷರು ಜನಜಾಗೃತಿ ವೇದಿಕೆ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಗಾಂಧಿ ಜಯಂತಿ ಕಾರ್ಯಕ್ರಮವನ್ನು ನೆಲ್ಯಾಡಿ ವಲಯದಲ್ಲಿ ನಡೆಸುವುದು, ನವಜೀವನ ಸಮಿತಿ ಬಲವರ್ಧನೆಗೆ ಮಾಸಿಕ ಸಭೆಯನ್ನು ಪ್ರತಿ ತಿಂಗಳು ನಡೆಸುವುದು, ಮದ್ಯವರ್ಜನ ಶಿಬಿರವನ್ನು ಅರಿಯಡ್ಕ ವಲಯದಲ್ಲಿ ನಡೆಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಯಿತು. 9 ವಲಯಗಳ 6 ತಿಂಗಳ ಸಾಧನ ವರದಿಯನ್ನು ಎಲ್ಲಾ ವಲಯದ ಮೇಲ್ವಿಚಾರಕರು ಮಂಡಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.