ಪಾಂಗಳಾಯಿ: ಮನೆ ಮ್ಹಾಲಕ ಚಂದ್ರಶೇಖರರವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ!!

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನಗರದ ಪಾಂಗಳಾಯಿಯಲ್ಲಿರುವ ಮನೆಯ ಮ್ಹಾಲಕನೋರ್ವನ ಮೃತದೇಹ ತನ್ನ ಮನೆಯ ಕೋಣೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಸೆ.18ರಂದು ಸಂಜೆ ವೇಳೆ ಪತ್ತೆಯಾಗಿದೆ.

ಈ ಹಿಂದೆ ಮುಖ್ಯರಸ್ತೆಯಲ್ಲಿ ಹಿಂದು ಮಿಲಿಟರಿ ಹೋಟೆಲ್‌ನ ನಡೆಸುತ್ತಿದ್ದ ಪಾಂಗಳಾಯಿ ದಿ. ಬಾಬು ಬಂಗೇರರವರ ಪುತ್ರ ಚಂದ್ರಶೇಖರ(57.ವ)ಮೃತಪಟ್ಟವರು. ಬಾಬು ಬಂಗೇರರವರ 5 ಹೆಣ್ಣು ಹಾಗೂ 5 ಗಂಡು ಮಕ್ಕಳಲ್ಲಿ ಏಳನೇಯವರಾಗಿದ್ದ ಚಂದ್ರಶೇಖರ ಅವಿವಾಹಿತರಾಗಿದ್ದರು. ವೃತ್ತಿಯಲ್ಲಿ ಟೈಲರ್ ಕೆಲಸ ಮಾಡುತ್ತಿದ್ದ ಅವರು ಕಳೆದ ಕೆಲವು ವರ್ಷಗಳಿಂದ ವೃತ್ತಿಯನ್ನು ಬಿಟ್ಟು ತಮ್ಮ ಮೂಲ ಮನೆಯಲ್ಲಿ ಏಕಾಂಗಿಯಾಗಿಯೇ ಜೀವಿಸುತ್ತಿದ್ದರು. ತಮ್ಮ ಕುಟುಂಬದ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದೇ ಮನೆಯಲ್ಲಿಯೇ ಇರುತ್ತಿದ್ದು ಅವರು ಮಾನಸಿಕ ಖಾಯಿಲೆಗೆ ಒಳಗಾಗಿದ್ದರು. ಅವರ ಸಹೋದರ ಹಾಗೂ ಸಹೋದರಿಯರು ಜೀವನ ನಿರ್ವಹಣೆಗೆ ಬೇಕಾದ ಖರ್ಚುಗಳನ್ನು ನೀಡುತ್ತಿದ್ದರು. ಯಾರೇ ಮನೆಗೆ ಬಂದರೂ ಬಾಗಿಲು ತೆಗೆಯುತ್ತಿರಲಿಲ್ಲ. ಸೆ.9ರಂದು ಚಂದ್ರಶೇಖರರವರ ಸಹೋದರ ಬೆಂಗಳೂರಿನಲ್ಲಿರುವ ಪ್ರಭಾಕರರವರು ಮನೆಗೆ ಬಂದಿದ್ದು ಆರೋಗ್ಯವನ್ನು ವಿಚಾರಿಸಿದ್ದರು. ಈ ಸಂದರ್ಭದಲ್ಲಿ ಅವರಿಗೆ ಕಾಲು ನೋವು ಇದ್ದು ಚಿಕಿತ್ಸೆಗೆ ಬರುವಂತೆ ಒತ್ತಾಯಿಸಿದ್ದರೂ ಅವರು ಹೋಗದೇ ಮನೆಯಲ್ಲಿಯೇ ಇದ್ದರು ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ.

ಕಳೆದ ಎರಡು ದಿನಗಳಿಂದ ಮನೆ ಸುತ್ತ ವಾಸನೆ ಬರುತ್ತಿದ್ದು ಯಾವುದೋ ಪ್ರಾಣಿಗಳು ಸತ್ತಿರಬಹುದು ಎಂದು ಪಕ್ಕದ ಮನೆಯವರು ಮನೆ ಸುತ್ತ ಹುಡುಕಾಟ ನಡೆಸಿದ್ದರು. ಸೆ.18ರಂದು ತಮ್ಮ ಮನೆಯ ಕೆಳಗಡೆಯಿರುವ ಚಂದ್ರಶೇಖರರವರ ಮನೆಯಿಂದ ಅಧಿಕವಾಗಿ ವಾಸನೆ ಬರತೊಡಗಿದ್ದು ಅನುಮಾನದಿಂದ ಮನೆ ಪಕ್ಕಕ್ಕೆ ಹೋದಾಗ ಕಿಟಕಿಯ ಮೂಲಕ ಒಮ್ಮೆಲೆ ನೊಣಗಳ ಬರತೊಡಗಿದೆ. ಕಿಟಕಿಯಿಂದ ಇಣುಕಿ ನೋಡಿದಾಗ ಮನೆಯ ಕೋಣೆಯಲ್ಲಿ ಮೃತ ದೇಹ ನೆಲದ ಮೇಲೆ ಕೊಳೆತೆ ಸ್ಥಿತಿಯಲ್ಲಿ ಕಂಡುಬಂದಿದೆ. ಬಳಿಕ ಅವರ ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ನಗರ ಠಾಣಾ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮನೆ ಬಾಗಿಲಿಗೆ ಒಳಗಿನಿಂದ ಚಿಲಕ ಹಾಕಲಾಗಿದ್ದು ಬಾಗಿಲನ್ನು ಒಡೆದು ತೆಗೆಯಲಾಗಿದೆ. ಮನೆ ಕೋಣೆಯೊಳಗೆ ಮಂಚ ಹಾಗೂ ಚೆಯರ್‌ನ ಮಧ್ಯೆ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳದಲ್ಲಿ ಚಪ್ಪಲ್ ಕೂಡ ಪತ್ತೆಯಾಗಿದೆ. ಸಾವಿಗೆ ನಿಖರ ಮಾಹಿತಿ ಲಭ್ಯವಾಗಿಲ್ಲ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.