Home_Page_Advt
Home_Page_Advt
Home_Page_Advt
Breaking News

ನೆರೆ ಪೀಡಿತ ಪ್ರದೇಶದಲ್ಲಿ ಮಧುರ ಯುವ ಫ್ರೆಂಡ್ಸ್ ದುಗ್ಗಳ ಸಂಘದ ವತಿಯಿಂದ ಶ್ರಮದಾನ 

ಪುತ್ತೂರು : ಕೊಳ್ತಿಗೆ ಗ್ರಾಮ ದುಗ್ಗಳದ ಮಧುರ ಯುವ ಫ್ರೆಂಡ್ಸ್ ದುಗ್ಗಳ ಸಂಘದ ವತಿಯಿಂದ ಈ ವರ್ಷ ಸುರಿದ ಮಹಾ ಮಳೆಗೆ ಮನೆ, ಆಸ್ತಿ-ಪಾಸ್ತಿ‌ ಕಳೆದುಕೊಂಡು, ಹಾನಿಯುಂಟಾದ ಪ್ರದೇಶ ಚಾರ್ಮಾಡಿ, ಬೆಳ್ತಂಗಡಿ ತಾಲೂಕು ಮಲವಂತಿಗೆ ಗ್ರಾಮಕ್ಕೆ ಭೇಟಿ ನೀಡಿ ಕಲ್ಬೆಟ್ಟು ಆನಂದ ಗೌಡ ಎಂಬವರ ಮನೆಯಲ್ಲಿ, ಕೃಷಿ ಭೂಮಿಯಲ್ಲಿ ಶ್ರಮದಾನ ಕಾರ್ಯ‌ ಮಾಡಲಾಯಿತು.
ಶ್ರಮದಾನದ ಮೂಲಕ ಸಾಮಾಜಿಕ ಕಳಕಳಿಯ ಆಶಯದಂತೆ ನೊಂದವರ ಬಾಳಿಗೆ ಬೆಳಕಾಗುವ ವಿನೂತನ ಕಾರ್ಯದಲ್ಲಿ ತೊಡಗಿಸಿಕೊಂಡರು. ಈ ಸಂದರ್ಭದಲ್ಲಿ ಸ್ಥಳೀಯರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಅವಿನಾಶ್ ಬರಡಿಮಜಲು, ಅಭಿಲಾಷ್ ಬರಡಿಮಜಲು, ಯಶವಂತ್ ಮುಂಡಕಜೆ, ಜಯಪ್ರಕಾಶ್ ಆಂತಿಕಡಲು, ಮಧುಕೃಷ್ಣ ಮೂಲೆಮಜಲು, ಹರ್ಷಿತ್ ಮೂಲೆಮಜಲು, ಭರತ್ ಪುಂಡ್ಯಾವನ, ರಕ್ಷಿತ್ ಮೂಲೆಮಜಲು, ಶ್ರವಣ್ ಕರ್ತಡ್ಕ, ಸಂಘದ ಉಪಾಧ್ಯಕ್ಷರಾದ ಕಾರ್ತಿಕ್ ಬರಡಿಮಜಲು, ಕಾರ್ಯದರ್ಶಿ ಮಂಜುನಾಥ್ ದುಗ್ಗಳ ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.