ನರಿಮೊಗರು ಸಾಂದೀಪನಿ ಶಾಲೆಗೆ ಐ.ಎಸ್.ಒ. ಪ್ರಮಾಣ ಪತ್ರ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ನರಿಮೊಗರು ಸಾಂದೀಪನಿ ಗ್ರಾಮೀಣ ವಿದ್ಯಾ ಸಂಸ್ಥೆಗೆ ಐ.ಎಸ್,ಒ. 9001:2015 ಪ್ರಮಾಣ ಪತ್ರ ಲಭಿಸಿದೆ ಎಂದು ಸಂಸ್ಥೆಯ ಸ್ಥಾಪಕಾಧ್ಯಕ್ಷ ಜಯರಾಮ ಕೆದಿಲಾಯ ಶಿಬರ ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ. ಅವರು, ಶೈಕ್ಷಣಿಕ ಸಂಸ್ಥೆಯು ಎಲ್ಲಾ ಕ್ಷೇತ್ರಗಳಲ್ಲಿ ಸುಧಾರಿಸಲು ಮತ್ತು ಮೇಲ್ವಿಚಾರಣೆ ಮಾಡಲು ಪ್ರಾಯೋಗಿಕ ಮತ್ತು ಕಾರ್ಯಾಸಾಧ್ಯವಾದ ಗುಣಮಟ್ಟ ನಿರ್ವಹಣಾ ವ್ಯವಸ್ಥೆಯನ್ನು ಒದಗಿಸಿದಕ್ಕೆ ಈ ಸರ್ಟಿಫೀಕೆಟ್ ದೊರೆತಿದೆ. ಸ್ವಿಝರ್ ಲ್ಯಾಂಡ್ ನ ಒಎಸ್ಎಸ್ ಸರ್ಟಿಫಿಕೇಶನ್ ಸರ್ವಿಸ್ ಸಂಸ್ಥೆ  ಈ ಪ್ರಮಾಣಪತ್ರವನ್ನು ನೀಡಿದೆ‌.
ತಾಲೂಕಿನಲ್ಲಿ ಈ ಪ್ರಮಾಣ ಪತ್ರ ಪಡೆದ ಪ್ರಪ್ರಥಮ ಶಾಲೆ ನಮ್ಮದಾಗಿದೆ. ಎಲ್ ಕೆಜಿಯಿಂದ ಹತ್ತನೇ ತರಗತಿ ತನಕ ಪ್ರಸ್ತುತ 1212 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಚಾಲಕ ಭಾಸ್ಕರ ಆಚಾರ್ ಹಿಂದಾರು, ಕಾರ್ಯದರ್ಶಿ ಕೃಷ್ಣಪ್ರಸಾದ್ ಕೆದಿಲಾಯ, ನಿರ್ದೇಶಕರಾದ ಸುಬ್ರಾಯ ಬಿ.ಎಸ್. ಹರೀಶ್ ಪುತ್ತೂರಾಯ, ವೇಣುಗೋಪಾಲ್, ಮುಖ್ಯೋಪಾಧ್ಯಾಯಿನಿ ಜಯಮಾಲಾ ವಿ.ಎನ್., ಶಾಲಾ ಹಿತೈಷಿ ಲಕ್ಷ್ಮೀ ನಾರಾಯಣ ಕಡಂಬಳಿತ್ತಾಯ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.