ಸೆ.22: ಬೆಟ್ಟಂಪಾಡಿ ಯಕ್ಷಗಾನ ಬಯಲಾಟ ಸೇವಾ ಸಮಿತಿಯ ಮಹಾಸಭೆ

Puttur_Advt_NewsUnder_1
Puttur_Advt_NewsUnder_1


ನಿಡ್ಪಳ್ಳಿ: ಯಕ್ಷಗಾನ ಬಯಲಾಟ ಸೇವಾ ಸಮಿತಿ ಬೆಟ್ಟಂಪಾಡಿ 1986 ರಲ್ಲಿ ಆರಂಭವಾಗಿ ಇದೀಗ 34 ವರ್ಷ ತುಂಬಿದ್ದು ಊರ ಪರವೂರ ಯಕ್ಷಗಾನ ಪ್ರೇಮಿಗಳ, ಭಕ್ತಾದಿಗಳ ಸಹಕಾರದಿಂದ ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ಈ ಸೇವಾ ಕಾರ್ಯಕ್ರಮವನ್ನು ಇನ್ನಷ್ಟು ಹೆಚ್ಚು ಸಂಭ್ರಮದಿಂದ ಜರುಗಿಸಬೇಕೆಂದು ಭಕ್ತಾದಿಗಳ ಅಭಿಪ್ರಾಯವಾಗಿದೆ.

ಆದುದರಿಂದ ಈ ಬಗ್ಗೆ ನಾವೆಲ್ಲ ಸೇರಿ ಚರ್ಚಿಸಬೇಕಾಗಿದ್ದು ಮುನ್ನಡೆಸಲು ಉತ್ಸಾಹಿ ಯುವಕರ ಸಮಿತಿ ರಚಿಸುವ ಅವಶ್ಯಕತೆಯನ್ನು ಮನಗಂಡು ಸೂಕ್ತ ವ್ಯವಸ್ಥೆಗಳ ಬಗ್ಗೆ  ನಿರ್ಧಾರ ಕೈಗೊಳ್ಳಲು ಸೆ.22 ರಂದು ಸಂಜೆ 3 ಗಂಟೆಗೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಸಮಿತಿಯ ಮಹಾಸಭೆ ನಡೆಸುವುದೆಂದು ತಿರ್ಮಾನಿಸಲಾಗಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುವಂತೆ ಸಮಿತಿಯ ಅಧ್ಯಕ್ಷ ಡಾ.ಯಂ. ಶ್ರೀಕೃಷ್ಣ ಭಟ್ ವಿನಂತಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.