Home_Page_Advt
Home_Page_Advt
Home_Page_Advt
Breaking News

ಒಡಿಯೂರು ಐ.ಟಿ.ಐ.ಯಲ್ಲಿ ಇಂಜಿನಿಯರ್‍ಸ್ ಡೇ ಆಚರಣೆ ಪರಿಶ್ರಮದಿಂದ ಯಶಸ್ಸು ಸಾಧ್ಯ – ಒಡಿಯೂರು ಶ್ರೀ

ವಿಟ್ಲ: ವಿಜ್ಞಾನದಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಿರುವುದು ಸಹಜ. ವಿಜ್ಞಾನದಲ್ಲಿ ಪರಿಶ್ರಮದಿಂದ ಯಶಸ್ಸನ್ನು ಕಾಣಲು ಸಾಧ್ಯ. ಹಾಗೆಯೇ ದಕ್ಷತೆ, ಶಿಸ್ತನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಬದುಕಿನಲ್ಲಿ ನಾವು ಯಶಸ್ಸನ್ನು ಕಾಣಬಹುದು. ಆ ಮೂಲಕ ಸಮಾಜದಲ್ಲಿ ಉನ್ನತ ಮಟ್ಟಕ್ಕೇರಬಹುದು. ಬದುಕಿನ ಪ್ರತಿಯೊಂದು ಕ್ಷಣವು ನಮಗೆ ಪಾಠವಾಗಿರುತ್ತದೆ. ಗುಣಮಟ್ಟದ ಶಿಕ್ಷಣದಿಂದ ನಾವು ಹೆಚ್ಚು ಸಂಸ್ಕಾರವಂತರಾಗುತ್ತೇವೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಜಿ ಹೇಳಿದರು.
ಅವರು ಒಡಿಯೂರು ಶ್ರೀ ಗುರುದೇವ ಐ.ಟಿ.ಐ.ಯಲ್ಲಿ ಆಯೋಜಿಸಲಾದ “ಇಂಜಿನಿಯರ್‍ಸ್ ಡೇ” ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿ ಸರ್| ಎಂ. ವಿಶ್ವೇಶ್ವರಯ್ಯರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಇಂಜಿನಿಯರ್‍ಸ್ ಡೇಯ ಪ್ರಯುಕ್ತ ಏರ್ಪಡಿಸಲಾದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿದರು. ವಿಟ್ಲ ಲಯನ್ಸ್ ಕ್ಲಬ್‌ನ ಅಧ್ಯಕ್ಷ, ಸಿವಿಲ್ ಇಂಜಿನೀಯರ್ ಶೆಲ್ಟರ್ ಅಸೋಸಿಯೆಟ್ಸ್‌ನ ಪಾಲುದಾರ ಸಂತೋಷ್ ಕುಮಾರ್ ಶೆಟ್ಟಿ, ಮೆಸ್ಕಾಂ ಕನ್ಯಾನ ಶಾಖೆಯ ಶಾಖಾಧಿಕಾರಿ ಕಾರ್ತಿಕ್ ಸಿ.ಆರ್.,ಒಡಿಯೂರು ಶ್ರೀ ವಿವಿಧೊದ್ದೇಶ ಸೌಹಾರ್ದ ಸಹಕಾರಿಯ ನಿರ್ದೇಶಕ ಪಿ. ಲಿಂಗಪ್ಪ ಗೌಡ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾವಿಕಾಸ ಕೇಂದ್ರದ ಅಧ್ಯಕ್ಷೆ ಸರ್ವಾಣಿ ಪಿ. ಶೆಟ್ಟಿ, ಒಡಿಯೂರು ಶ್ರೀ ಗುರುದೇವ ಕೈಗಾರಿಕಾ ತರಬೇತಿ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಎಂ. ಅಶ್ವಥ್ ಉಪಸ್ಥಿತಿದ್ದರು. ಸಂಸ್ಥೆಯ ಪ್ರಾಚಾರ್ಯರಾದ ಕರುಣಾಕರ ಎನ್.ಬಿ. ಸ್ವಾಗತಿಸಿದರು. ವಿದ್ಯಾರ್ಥಿ ಮಹಮ್ಮದ್ ಇರ್ಷಾದ್ ವಂದಿಸಿ, ಸಲ್ಮಾನ್ ಫಾರಿಸ್ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.