ವಿಶ್ವ ಓಝೋನ್ ದಿನಾಚರಣೆಯ ಅಂಗವಾಗಿ ಎಸ್‌ಕೆಎಸ್‌ಎಸ್‌ಎಫ್ ಸ್ವಚ್ಛತೆ

Puttur_Advt_NewsUnder_1
Puttur_Advt_NewsUnder_1

ಕಡಬ :ವಿಶ್ವ ಓಝೋನ್ ದಿನಾಚರಣೆ ಪ್ರಯುಕ್ತ ಎಸ್‌ಕೆಎಸ್‌ಎಸ್‌ಎಫ್ ಜಿಲ್ಲಾ ಸಮಿತಿಯ ನಿರ್ದೇಶನದಂತೆ ಎಸ್‌ಕೆಎಸ್‌ಎಸ್‌ಎಪ್ ಕಡಬ ವಲಯ ಹಾಗೂ ಕಡಬ ವಿಕಾಯ ವತಿಯಿಂದ ಸೆ.18ರಂದು ಕಡಬ ಸಮುದಾಯ ಆರೋಗ್ಯ ಕೇಂದ್ರದ ವಠಾರ ಸ್ವಚ್ಚಗೊಳಿಸಲಾಯಿತು.

ಜಿ.ಪಂ ಸದಸ್ಯ ಪಿ.ಪಿ ವರ್ಗೀಸ್ ಸ್ವಚ್ಚತೆಗೆ ಚಾಲನೆ ನೀಡಿ ಮಾತನಾಡಿ ನಮ್ಮ ಆರೋಗ್ಯ ಇಲಾಖೆ ಪರಿಸರ ಸ್ವಚ್ಚತೆಯೊಂದಿಗೆ ಇಡೀ ಸಮಾಜವನ್ನು ಸ್ವಚ್ಚಗೊಳಿಸುವ ಮೂಲಕ ಸ್ವಚ್ಚ ಸಮಾಜ ನಿರ್ಮಾಣವಾಗಲಿ ಎಂದು ಹಾರೈಸಿದರು. ತಾಲೂಕು ಆರೋಗ್ಯ ಇಲಾಖಾಧಿಕಾರಿ ಅಶೋಕ್ ಕುಮಾರ್ ರೈ ಸ್ವಚ್ಚತೆಯಲ್ಲಿ ತೊಡಗಿಸಿಕೊಂಡ ಎಲ್ಲರ ಕಾರ್‍ಯವನ್ನು ಶ್ಲಾಘನಿಸಿದರು.

ಕಡಬ ಗ್ರಾ.ಪಂ ಅಧ್ಯಕ್ಷ ಬಾಬು ಮುಗೇರ , ಪಂ ಅಬಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ, ಕಡಬ ಅಡಿಕೆ ವರ್ತಕ ಸಂಘದ ಅಧ್ಯಕ್ಷ ಅಬ್ದುಲ್ ಖಾದರ್ , ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ|ಸುಚಿತ್ರಾ ರಾವ್ ,ಡಾ|ತ್ರಿಮೂರ್ತಿ ಸ್ವಚ್ಚತೆ ಬಗ್ಗೆ ಮಾತನಾಡಿ ಎಲ್ಲರು ಸ್ವಚ್ಚತೆಯಲ್ಲಿ ಕೈಜೋಡಿಸಬೇಕೆಂದರು.

ಕಡಬ ವಲಯ ಎಸ್‌ಕೆಎಸ್‌ಎಸ್ , ಕಡಬ ವಲಯ ವಿಕಾಯ ಪದಾಧಿಕಾರಿಗಳು ಸದಸ್ಯರು, ಆರೋಗ್ಯ ಇಲಾಖಾ ಸಿಬ್ಬಂದಿಗಳು ಭಾಗವಹಿಸಿದ್ದರು. ಕಡಬ ಎಸ್‌ಕೆಎಸ್‌ಎಸ್‌ಎಪ್ ವಲಯಾಧ್ಯಕ್ಷ ಅಶ್ರಪ್ ಶೇಡಿಗುಂಡಿ, ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.