ತಾ|ರಬ್ಬರ್ ಬೆಳೆಗಾರರ ಮಾರಾಟ, ಸಂಸ್ಕರಣ ಸಹಕಾರಿ ಸಂಘದ ಮಹಾಸಭೆ

Puttur_Advt_NewsUnder_1
Puttur_Advt_NewsUnder_1
  • 25.21 ಕೋಟಿ ರೂ.,ವ್ಯವಹಾರ, 54.61 ಲಕ್ಷ ರೂ. ಲಾಭ-ಬಿ.ಪ್ರಸಾದ್ ಕೌಶಲ್ ಶೆಟ್ಟಿ

ನೆಲ್ಯಾಡಿ: ನೆಲ್ಯಾಡಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ 2018-19ನೇ ಸಾಲಿನ ವಾರ್ಷಿಕ ಮಹಾಸಭೆ ಸೆ.19ರಂದು ಬೆಳಿಗ್ಗೆ ನೆಲ್ಯಾಡಿಯ ಕೇಂದ್ರ ಕಚೇರಿಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಬಿ.ಪ್ರಸಾದ್ ಕೌಶಲ್ ಶೆಟ್ಟಿಯವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. 2018-19ನೇ ಸಾಲಿನಲ್ಲಿ ಸಂಘವು 25,21,94,243 ರೂ.ವ್ಯವಹಾರ ನಡೆಸಿದ್ದು ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಸತತ ಪ್ರಯತ್ನದಿಂದ ವ್ಯಾಪಾರದಲ್ಲಿ 54,61,296 ರೂ.ಲಾಭಗಳಿಸಿದೆ. 2018-19ನೇ ಸಾಲಿನಲ್ಲಿ ಸಂಘವು 21.76 ಲಕ್ಷ ರೂ.ನಿವ್ವಳ ಲಾಭಗಳಿಸಿದ್ದು ವರದಿ ವರ್ಷದಲ್ಲಿ 32.84 ಲಕ್ಷ ರೂ.ಹೆಚ್ಚು ಲಾಭಗಳಿಸಿದೆ. ಖಾಸಗಿ ವ್ಯಾಪಾರಿಗಳ ಸ್ಪರ್ಧೆ ಇದ್ದರೂ ಅತ್ಯುತ್ತಮ ಧಾರಣೆ, ಗುಣಮಟ್ಟದ ಸೇವೆ ನೀಡುವ ಮೂಲಕ ಹೆಚ್ಚು ರಬ್ಬರ್ ಖರೀದಿ ಮಾಡುವಲ್ಲಿ ಸಂಘ ಯಶಸ್ವಿಯಾಗಿದೆ. ವರದಿ ಸಾಲಿನಲ್ಲಿ ಎಂಆರ್‌ಎಫ್ ಟಯರ್ ಕಂಪನಿಯೊಂದಿಗೆ ವ್ಯವಹಾರ ಮಾಡಿದ್ದು ಸಂಘದ ರಬ್ಬರಿಗೆ ಸ್ಥಿರವಾದ ಬೇಡಿಕೆ ಇರುವಂತೆ ನೋಡಿಕೊಂಡಿದ್ದೇವೆ ಎಂದು ಬಿ.ಪ್ರಸಾದ್ ಕೌಶಲ್ ಶೆಟ್ಟಿ ಹೇಳಿದರು. ಸಂಘವು ನೆಲ್ಯಾಡಿಯಲ್ಲಿ ಪ್ರಧಾನ ಕಚೇರಿ ಹೊಂದಿದ್ದು ಕಡಬ, ಪುತ್ತೂರಿನಲ್ಲಿ ಶಾಖೆಗಳಿವೆ. ಇಚ್ಲಂಪಾಡಿ, ಕೆಯ್ಯೂರು ಹಾಗೂ ಈಶ್ವರಮಂಗಲದಲ್ಲಿ ರಬ್ಬರ್ ಖರೀದಿ ಕೇಂದ್ರಗಳಿವೆ. ಸಂಘದಲ್ಲಿ ವರ್ಷಾಂತ್ಯಕ್ಕೆ 1700 ಎ ತರಗತಿ ಸದಸ್ಯರಿದ್ದು, 4,89,550 ರೂ.ಪಾಲು ಬಂಡವಾಳವಿದೆ. 7.80 ಕೋಟಿ ರೂ.ಠೇವಣಿ ಇದೆ. ವರದಿ ವರ್ಷದಲ್ಲಿ 92.02 ಲಕ್ಷ ರೂ.ಮೌಲ್ಯದ ರಬ್ಬರ್ ಕೃಷಿ ಸಲಕರಣೆ, ರಾಸಾಯನಿಕ ಹಾಗೂ 24,29,91,776 ರೂ.ಮೌಲ್ಯದ ಕಚ್ಚಾ ರಬ್ಬರ್ ಮಾರಾಟ ಮಾಡಲಾಗಿದೆ ಎಂದು ಬಿ.ಪ್ರಸಾದ್ ಕೌಶಲ್ ಶೆಟ್ಟಿಯವರು ಮಾಹಿತಿ ನೀಡಿದರು.

ಅತೀ ಹೆಚ್ಚು ತೆರಿಗೆ ಪಾವತಿ:
ವರದಿ ವರ್ಷದಲ್ಲಿ ಸಂಘವು ಸರಕಾರಕ್ಕೆ 1,13,53,074 ರೂ. ತೆರಿಗೆ ಪಾವತಿಸಿದೆ. ಇದರು ಪುತ್ತೂರು ತಾಲೂಕಿನಲ್ಲಿ ಸಹಕಾರ ಸಂಘವೊಂದು ಸರಕಾರಕ್ಕೆ ಪಾವತಿಸಿರುವ ಅತ್ಯಧಿಕ ತೆರಿಗೆ ಮೊತ್ತವಾಗಿದೆ ಎಂದು ಬಿ.ಪ್ರಸಾದ್ ಕೌಶಲ್ ಶೆಟ್ಟಿ ಹೇಳಿದರು.

ಯೋಜನೆಗಳು:
ಪ್ರಧಾನ ಕಚೇರಿಯಲ್ಲಿ ರಾಸಾಯನಿಕ ಗೊಬ್ಬರ ದಾಸ್ತಾನು ಕೊಠಡಿ ನಿರ್ಮಾಣದ ಯೋಜನೆ ಹಾಕಿಕೊಳ್ಳಲಾಗಿದೆ. ಸದಸ್ಯರಿಗೆ ಕಚ್ಚಾ ರಬ್ಬರ್ ಸಂಘಕ್ಕೆ ಮಾರಾಟ ಮಾಡಲು ಅನುಕೂಲಕರವಾದ ಸ್ಥಳಗಳಲ್ಲಿ ಹಂತ ಹಂತವಾಗಿ ರಬ್ಬರ್ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು, ಸಂಘವು ನಡೆಸುತ್ತಿರುವ ಎಲ್ಲಾ ಶಾಖೆಗಳನ್ನು, ಖರೀದಿ ಕೇಂದ್ರಗಳನ್ನು ಕಂಪ್ಯೂಟರೀಕರಣಗೊಳಿಸಿ ಆನ್‌ಲೈನ್ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ. ಸಂಘವು ವ್ಯವಹಾರವು ಮುಖ್ಯವಾಗಿ ಠೇವಣಾತಿ ಹಾಗೂ ಪಡಕೊಂಡ ಸಾಲಗಳಿಂದಲೇ ನಡೆಯುತ್ತಿದ್ದು ಪಾಲು ಬಂಡವಾಳ ಹೆಚ್ಚಿಸುವ ಅಗತ್ಯವಿದೆ ಎಂದು ಬಿ.ಪ್ರಸಾದ್ ಕೌಶಲ್ ಶೆಟ್ಟಿ ಹೇಳಿದರು.

ಸಲಹೆ/ಸೂಚನೆ:
ಖಾಸಗಿಯಾಗಿ ರಬ್ಬರ ಖರೀದಿ ವ್ಯವಹಾರ ಮಾಡುತ್ತಿರುವ ಕೆಲವರು ಈ ಬಗ್ಗೆ ಪರವಾನಿಗೆ ಪಡೆದುಕೊಳ್ಳದೇ ಇರುವುದು ಗಮನಕ್ಕೆ ಬಂದಿದೆ. ನಮ್ಮ ಸಂಘವು ಸರಕಾರಕ್ಕೆ ಕೋಟ್ಯಾಂತರ ರೂ.ತೆರಿಗೆ ಪಾವತಿ ಮಾಡಿ ವ್ಯವಹಾರ ನಡೆಸುತ್ತಿದೆ. ಪರವಾನಿಗೆ ಪಡೆದುಕೊಳ್ಳದೇ ರಬ್ಬರ್ ಖರೀದಿ,ಮಾರಾಟ ಮಾಡುತ್ತಿರುವ ಖಾಸಗಿಯವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಭೆಯಲ್ಲಿ ಕೇಳಿಬಂತು. ರಬ್ಬರ್ ಟ್ಯಾಪಿಂಗ್‌ಗೆ ಕಾರ್ಮಿಕರ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಸಂಘದ ವತಿಯಿಂದ ಸದಸ್ಯರಿಗೆ ರಬ್ಬರ್ ಟ್ಯಾಪಿಂಗ್ ಬಗ್ಗೆ ತರಬೇತಿ ನೀಡುವ ಕೆಲಸ ಆಗಬೇಕೆಂದು ಸದಸ್ಯರು ಆಗ್ರಹಿಸಿದರು. ಸದಸ್ಯರುಗಳಾದ ಮೂಲಚಂದ್ರ, ಶಿವರಾಮ ಶರ್ಮ, ಎ.ಜೆ.ಚಾಕೋ, ತಾ.ಪಂ.ಸದಸ್ಯ ಗಣೇಶ್ ಕೈಕುರೆ, ಉಪ್ಪಿನಂಗಡಿ ಸಿ.ಎ.ಬ್ಯಾಂಕ್ ಅಧ್ಯಕ್ಷ ಯಶವಂತ ಮತ್ತಿತರರು ಸಲಹೆ,ಸೂಚನೆ ನೀಡಿದರು.

ಸಭಾಭವನ ಉದ್ಘಾಟನೆ:
ಮಹಾಸಭೆ ಆರಂಭಕ್ಕೆ ಮೊದಲು ಸಂಘದ ನೂತನ ಸಭಾಭವನವನ್ನು ಅಧ್ಯಕ್ಷ ಬಿ.ಪ್ರಸಾದ್ ಕೌಶಲ್ ಶೆಟ್ಟಿಯವರು ಉದ್ಘಾಟಿಸಿದರು. ಉಪಾಧ್ಯಕ್ಷ ರೋಯ್ ಅಬ್ರಹಾಂ, ನಿರ್ದೇಶಕರುಗಳಾದ ಸಿ.ಜೋರ್ಜ್‌ಕುಟ್ಟಿ, ಎನ್.ವಿ.ವ್ಯಾಸ, ಸತ್ಯಾನಂದ ಬಿ., ರಮೇಶ ಕಲ್ಪುರೆ, ಸುಭಾಷ್ ನಾಯಕ್ ಎನ್., ಗಿರೀಶ್ ಸಾಲಿಯಾನ್ ಬಿ., ಶ್ರೀರಾಮ ಪಕ್ಕಳ, ಜಯರಾಮ ಬಿ., ಅರುಣಾಕ್ಷಿ, ಗ್ರೇಸಿ ನೈನಾನ್, ಬೈರ ಮುಗೇರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಶಶಿಪ್ರಭಾ ಕೆ.,ವರದಿ, ಜಮಾಖರ್ಚಿನ ವಿವರ ಮಂಡಿಸಿದರು. ಉಪಾಧ್ಯಕ್ಷ ರಾಯ್ ಅಬ್ರಹಾಂ ವಂದಿಸಿದರು. ಸಿಬ್ಬಂದಿ ಜನಾರ್ದನ ಬಿ.ಎಲ್.ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ರಮಾದೇವಿ, ನಿಶ್ಮಿತಾ, ವಾಣಿ, ಗಣೇಶ, ಆದರ್ಶ್ ಕೆ.ಯು., ಸ್ವಾತಿ, ಶಕುಂತಳಾ, ಮನೋಹರ, ಸುಜಾತ, ಗಣೇಶ ಪೂಜಾರಿ, ಸಂತೋಷ್, ಎ.ಎಸ್.ನಾಗೇಶ್, ಬಾಲಕೃಷ್ಣ, ರುಕ್ಮಯ ಗೌಡ, ಪ್ರತೀಕ್ಷಾ, ನಾಗೇಶ್‌ರವರು ಸಹಕರಿಸಿದರು.

                ಸಭಾಭವನ ಉದ್ಘಾಟನೆ

ಅಧ್ಯಕ್ಷರಿಗೆ ಸನ್ಮಾನ:
ದ.ಕ.ಜಿಲ್ಲಾ ಸಹಕಾರಿ ಯೂನಿಯನ್‌ನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡ ಸಂಘದ ಅಧ್ಯಕ್ಷ ಬಿ.ಪ್ರಸಾದ್ ಕೌಶಲ್ ಶೆಟ್ಟಿಯವರನ್ನು ಆಡಳಿತ ಮಂಡಳಿ ನಿರ್ದೇಶಕರ ಹಾಗೂ ಸಿಬ್ಬಂದಿಗಳ ಪರವಾಗಿ ಸನ್ಮಾನಿಸಲಾಯಿತು.

ಸದಸ್ಯರಿಗೆ ಗೌರವಾರ್ಪಣೆ:
2019-20ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಕಚ್ಚಾ ರಬ್ಬರ್ ಹಾಕಿದ ಸದಸ್ಯರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ನೆಲ್ಯಾಡಿ ಕೇಂದ್ರ ಕಚೇರಿಗೆ ಅತೀ ಹೆಚ್ಚು ಕಚ್ಚಾ ರಬ್ಬರ್ ಹಾಕಿದ ಇಬ್ರಾಹಿಂ ಕೆ.ಎ., ವಾಯುಪ್ರಭ ಹೆಗ್ಡೆ, ಪ್ರವೀಣ್ ಕುಮಾರ್ ಜಿ., ಕಡಬ ಶಾಖೆಗೆ ಅತೀ ಹೆಚ್ಚು ಕಚ್ಚಾ ರಬ್ಬರ್ ಹಾಕಿದ ಮದುಸೂಧನ್ ಕೈಕುರೆ, ಕೆ.ಎಸ್.ರಾಜು, ಟಿ.ಜಿ.ಮ್ಯಾಥ್ಯು, ಪುತ್ತೂರು ಶಾಖೆಗೆ ಅತೀ ಹೆಚ್ಚು ರಬ್ಬರ್ ಹಾಕಿದ ತಿಲೋತ್ತಮ ಎಸ್ ರೈ, ವೇಣುಗೋಪಾಲ್ ಪಿ., ಅರ್ಜುನ್ ಎಸ್.ಕೆ., ಈಶ್ವರ ಮಂಗಲ ಶಾಖೆಗೆ ಅತೀ ಹೆಚ್ಚು ಕಚ್ಚಾ ರಬ್ಬರ್ ಹಾಕಿದ ನವೀನ್ ಕುಮಾರ್, ವಿಕ್ರಮ ರೈ, ಝೌರ ಇಸ್ಮಾಯಿಲ್, ಕೆಯ್ಯೂರು ಖರೀದಿ ಕೇಂದ್ರಕ್ಕೆ ಅತೀ ಹೆಚ್ಚು ರಬ್ಬರ್ ಹಾಕಿದ ರಶ್ಮಿ ಎಮ್. ರೈ, ಎನ್.ಮೋಹನ ರೈ, ಎ.ಕೆ.ಜಯರಾಮ ರೈ, ಇಚಿಲಂಪಾಡಿ ಖರೀದಿ ಕೇಂದ್ರಕ್ಕೆ ಅತೀ ಹೆಚ್ಚು ಕಚ್ಚಾ ರಬ್ಬರ್ ಹಾಕಿದ ಗಿರೀಶ್ ಸಾಲಿಯಾನ್ ಬಿ., ಪಾಪಚ್ಚನ್ ಒ ಹಾಗೂ ಸತ್ಯಾನಂದ ಬಿ.,ಇವರನ್ನು ಗೌರವಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.