Home_Page_Advt
Home_Page_Advt
Home_Page_Advt
Breaking News

ಕಡಬದಲ್ಲಿ ಎಂ.ಎಚ್ ಟ್ರೇಡರ್ಸ್ ಶುಭಾರಂಭ

ಕಡಬ-ಪಂಜ ರಸ್ತೆಯಲ್ಲಿನ ಮಧುರಾ ಕಾಂಪ್ಲೆಕ್ಸ್‌ನಲ್ಲಿ ಪ್ರಾರಂಭಗೊಂಡಿರುವ ನಿಪ್ಪೋನ್ ಪೈಂಟ್ಸ್‌ನ ಅಧಿಕೃತ ವಿತರಕ ಸಂಸ್ಥೆ ಪೈಂಟ್ಸ್ ಹಾಗೂ ಪೈಂಟಿಂಗ್ ಸಾಮಾಗ್ರಿಗಳ ಮಳಿಗೆ ಎಂ.ಎಚ್ ಟ್ರೇಡರ್‍ಸ್‌ನ ಉದ್ಘಾಟನಾ ಸಮಾರಂಭ ಸೆ. 19ರಂದು ನಡೆಯಿತು.

ಸಂಸ್ಥೆಯನ್ನು ಉದ್ಘಾಟಿಸಿದ ಜಿ.ಪಂ ಸದಸ್ಯ ಪಿ.ಪಿ ವರ್ಗೀಸ್ ಮಾತನಾಡಿ ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಉದ್ಯಮ ವ್ಯವಹಾರಗಳು ಅಭಿವೃದ್ಧಿಗೆ ಮಹತ್ತರ ಕೊಡುಗೆಗಳನ್ನು ನೀಡುತ್ತಿವೆ. ಉತ್ತಮ ತಂತ್ರಜ್ಞಾನ ,ಆಧುನಿಕ ವ್ಯವಸ್ಥೆಯೊಂದಿಗೆ ಉದ್ಯಮ ಸಂಸ್ಥೆಗಳು ಕಡಬ ಭಾಗದ ಜನರ ಅಶೋತ್ತರಗಳನ್ನು ಈಡೇರಿಸುವಲ್ಲಿ ಸಫಲವಾಗುತ್ತಿವೆ. ಬೇರೆ ಊರಿಂದ ಬಂದು ಇಲ್ಲಿ ವ್ಯಾಪಾರ ವ್ಯವಹಾರ ನಡೆಸಿದವರನ್ನು ಕಡಬದ ಜನತೆ ಪ್ರೋತ್ಸಾಹಿಸಿ ಬೆಳೆಸಿದ್ದಾರೆ. ಎಂ.ಎಚ್ ಟ್ರೇಡರ್‍ಸ್ ಕೂಡಾ ಜನರ ಬೇಕು ಬೇಡಗಳಿಗೆ ಸ್ಪಂದಿಸಿ ಉತ್ತಮ ಸಂಸ್ಥೆಯಾಗಿ ಮೂಡಿ ಬರಲಿ ಎಂದು ಹಾರೈಸಿದರು. ಅತಿಥಿಯಾಗಿ ಭಾಗವಹಿಸಿದ್ದ ತಾಲೂಕು ಪಂಚಾಯಿತಿ ಸದಸ್ಯ ಫಝಲ್ ಕೋಡಿಂಬಾಳ ಮಾತನಾಡಿ ಯಾವುದೇ ವ್ಯವಹಾರದಲ್ಲಿ ಜನರ ನಿರೀಕ್ಷೆ ಉತ್ತಮ ಸೇವೆ ಹಾಗೂ ಪಾರದರ್ಶಕತೆಯಾಗಿರುತ್ತದೆ. ಇದಕ್ಕೆ ಪೂರಕವಾಗಿ ಎಂ.ಎಚ್ ಟ್ರೇಡರ್‍ಸ್ ಜನ ವಿಶ್ವಾಸ ಗಳಿಸುವಲ್ಲಿ ಸಫಲವಾಗಬೇಕು. ಕಡಬದ ಜನತೆಯ ಪ್ರೀತಿ ವಿಶ್ವಾಸ ಗಳಿಸಿ ಯಶಸ್ಸು ಪಡೆಯುವಂತಾಗಲಿ ಎಂದರು.

ನೂಜಿಬಾಳ್ತಿಲ ಬೆಥನಿ ಪದವಿ ಪೂರ್ವ ಕಾಲೇಜಿನ ಸಂಚಾಲಕ ಸಕರಿಯಾಸ್ ನಂದಿಯಾಟ್ ಮಾತನಾಡಿ ದೇಶದ ಅಭಿವೃದ್ಧಿಯಲ್ಲಿ ಉದ್ಯಮ ಶೀಲತೆ ಪ್ರಮುಖ ಪಾತ್ರವಹಿಸುತ್ತದೆ. ಆದ್ದರಿಂದ ಉದ್ಯಮಿಗಳು ತಾವು ಬೆಳೆಯುವುದರೊಂದಿಗೆ ಸಮಾಜಕ್ಕೆ ಪೂರಕವಾಗಿರಬೇಕು ಎಂದರು. ಕಡಬ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಜನಾರ್ಧನ ಗೌಡ ಪಣೆಮಜಲು ಮಾತನಾಡಿ ಉತ್ತಮ ಗುಣಮಟ್ಟದ ಹಾಗೂ ನಲ್ಮೆಯ ಸೇವೆಯಿಂದ ಜನರ ವಿಶ್ವಾಸಗಳಿಸಬೇಕು ಎಂದರು. ಮಂಗಳೂರು ಡಿವಿಜನ್ ಮ್ಯಾನೇಜರ್ ಪ್ರಶಾಂತ್ ಕುಂದಾಪುರ ಮಾತನಾಡಿ 139 ವರ್ಷ ಇತಿಹಾಸ ಇರುವ ನಿಪ್ಪೋನ್ ಪೈಂಟ್ ಸಂಸ್ಥೆ ಜಗತ್ತಿನಲ್ಲಿ ಅತೀ ದೊಡ್ಡ ಪೈಂಟ್ ವ್ಯವಹಾರ ನಡೆಸುವ ಸಂಸ್ಥೆಯಾಗಿದೆ.

ರಾಸಾಯನಿಕ ರಹಿತ ಪೈಂಟ್ ಒದಗಿಸುವ ಭಾರತದ ಪ್ರಥಮ ಕಂಪೆನಿಯಾಗಿದೆ, ಹುಸೇನ್ ನೆಲ್ಯಾಡಿ ಅವರು ಕಡಬ ಪ್ರಥಮ ವಿತರಕರಾಗಿದ್ದಾರೆ ಎಂದರು. ಕಡಬ ಟೌನ್ ಜುಮ್ಮಾ ಮಸೀದಿಯ ಅಧ್ಯಕ್ಷ ಎಸ್.ಅಬ್ದುಲ್ ಖಾದರ್, ಮಂಗಳೂರಿನ ನೋಟರಿ ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ಎಸ್.ಡಿ.ಪಿ.ಐ ಜಿಲ್ಲಾ ಸಮಿತಿಯ ಸದಸ್ಯ ಆನಂದ ಮಿತ್ತಬೈಲ್, ನಿಪ್ಪೋನ್ ಪೈಂಟ್ಸ್‌ನ ಸೀನಿಯರ್ ರಿಟೈಲ್ ಕೆ.ಎಸ್ ಗುಣಪಾಲ ಆಳ್ವ, ಮತ್ತಿತರರು ಅತಿಥಿಗಳಾಗಿ ಶುಭ ಹಾರೈಸಿದರು. ಕಡಬ ಗ್ರಾ.ಪಂ ಅಧ್ಯಕ್ಷ ಬಾಬು ಮುಗೇರ, ಸದಸ್ಯರಾದ ಕೆ.ಎಂ ಹನೀಫ್, ಆದಂ ಕುಂಡೋಳಿ, ಎ.ಎಸ್ ಶರೀಫ್, ಮಧುರಾ ಕಾಂಪ್ಲೆಕ್ಸ್‌ನ ಮಾಲಕ ಚಿದಾನಂದ ಗೌಡ, ನಿಪ್ಪೋನ್ ಸಂಸ್ಥೆಯ ಪ್ರತಿನಿಧಿ ಕಿಶೋರ್ ಕುಮಾರ್, ಎಂ.ಎಚ್ ಟ್ರೇಡರ್‍ಸ್‌ನ ಮಾಲಕ ಹುಸೇನ್ ನೆಲ್ಯಾಡಿ, ಪಾಲುದಾರರಾದ ಅಬ್ದುಲ್ ರಶೀದ್ ನೆಲ್ಯಾಡಿ, ರಾಝಿಕ್ ನೆಲ್ಯಾಡಿ, ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು, ಕಡಬ ಪೇಪರ್ ಏಜೆಂಟ್ ಎನ್. ಅಬ್ಬಾಸ್ ಅತಿಥಿಗಳನ್ನು ಬರಮಾಡಿಕೊಂಡರು. ಕಡಬ ಗ್ರಾ.ಪಂ ಸದಸ್ಯ ಅಶ್ರಫ್ ಶೇಡಿಗುಂಡಿ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದ ಬಳಿಕ ಸಸಿ ನೆಡುವ ಮೂಲಕ ಪರಿಸರ ಸ್ನೇಹಿ ದಿನವನ್ನಾಗಿ ಆಚರಿಸಲಾಯಿತು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.