ಫಿಲೋಮಿನಾದಲ್ಲಿ ಕಾನೂನು ಅರಿವು ಕಾರ್ಯಕ್ರಮ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಭಾರತೀಯ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳಿಗೆ ಪೂಜನೀಯ ಸ್ಥಾನವನ್ನು ಕಲ್ಪಿಸಲಾಗಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಕಂಡು ಕೊಂಡ ಸಂವಿಧಾನ ನಮ್ಮದು. ಜಗತ್ತಿನ ಯಾವ ಜಾಗಕ್ಕೆ ಹೋದರೂ ತಲೆಯೆತ್ತಿ ನಿಲ್ಲುವ ಗೌರವದ ಸ್ಥಾನ ನಮಗಿದೆ ಎಂದು ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶ ಮತ್ತು ಎಸಿಜೆಎಮ್ ಹಾಗೂ ಪುತ್ತೂರು ತಾಲೂಕು ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷ ಮುಂಜುನಾಥ ಹೇಳಿದರು.

ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಪುತ್ತೂರು ತಾಲೂಕು ಕಾನೂನು ಸೇವೆಗಳ ಸಮಿತಿ, ಪುತ್ತೂರು ವಕೀಲರ ಸಂಘ(ರಿ) ಮತ್ತು ಸಂತ ಫಿಲೋಮಿನಾ ಕಾಲೇಜಿನ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆ ಹಾಗೂ ಐಕ್ಯೂಎಸಿ ಘಟಕ ಆಶ್ರಯದಲ್ಲಿ ಮಹಿಳಾ ದೌರ್ಜನ್ಯ, ಸಾಮಾಜಿಕ ಜಾಲತಾಣಗಳು ಮತ್ತು ಯುವಜನತೆ ಕುರಿತು ಕಾನೂನು ಅರಿವು ಕಾರ್ಯಕ್ರಮವನ್ನು ಸೆಪ್ಟೆಂಬರ್ ೨೧ರಂದು ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಉದ್ಘಾಟಿಸಿ, ಮಾತನಾಡಿದರು. ನಮ್ಮ ದೇಶದಲ್ಲಿ ಮಹಿಳಾ ದೌರ್ಜನ್ಯ ಸತತ ನಡೆಯುತ್ತಿರುವುದು ಕಟು ಸತ್ಯ. ಇದು ಮಹಿಳೆಯರಿಂದಲೇ ಇರಬಹುದು, ಅಥವಾ ಪುರುಷರಿಂದಲೂ ಇರಬಹುದು. ಇದಕ್ಕೆ ನಾನಾ ರೀತಿಯ ಆರ್ಥಿಕ, ಸಾಮಾಜಿಕ ಕಾರಣಗಳಿರಬಹುದು. ಮಹಿಳೆಯರಿಗೆ ಕಾನೂನಿನಲ್ಲಿ ಸಾಕಷ್ಟು ರಕ್ಷಣೆಯನ್ನು ಒದಗಿಸಲಾಗಿದೆ. ಆದರೆ ಎಲ್ಲವನ್ನೂ ಕಾನೂನಿನಲ್ಲಿ ತಡೆಗಟ್ಟಲು ಸಾಧ್ಯವಿಲ್ಲ. ಮನುಷ್ಯ ಮನುಷ್ಯನಾಗಿ ಜೀವಿಸಲು ಕಲಿತಾಗ ಮಾತ್ರ ಇಂತಹ ದುಷ್ಕೃತ್ಯಗಳನ್ನು ತಡೆಗಟ್ಟಲು ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯ ಪ್ರೊ. ಲಿಯೋ ನೊರೊನ್ಹಾ ಮಾತನಾಡಿ, ಮಹಿಳೆ ಇಲ್ಲದ ಮನೆ, ಸಮಾಜ ಊಹಿಸಲೂ ಅಸಾಧ್ಯ. ಮಹಿಳೆಯರು ಎಂದಿಗೂ ದುರ್ಬಲರಲ್ಲ. ಮಹಿಳೆಯರಲ್ಲಿ ಪುರುರಿಗಿಂತಲೂ ಮಿಗಿಲಾದ ಶಕ್ತಿ ಸಾಮರ್ಥ್ಯ ಅಡಗಿದೆ. ತಾಳ್ಮೆ ಅನ್ನುವುದು ಮಹಿಳೆಯರಲ್ಲಿ ಕಂಡು ಬರುವ ವಿಶೇಷ ಗುಣ. ಸಮಾಜದಲ್ಲಿ ಎಂತಹ ಸಂದಿಗ್ಧ ಪರಿಸ್ಥಿತಿ ಎದುರಾದಗಲೂ, ಮಹಿಳೆಯರ ಮುಂದಾಳತ್ವದಲ್ಲಿ ಅದನ್ನು ಪರಿಹರಿಸಲು ಸುಲಭ ಸಾಧ್ಯ. ಮಹಿಳೆಯರು ಸಂಕಷಕ್ಕ್ಟೆ ಎದುರಾದಾಗ ಪರಿಹರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲೆ ಅಡಗಿದೆ ಎಂದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪ್ರಧಾನ ವ್ಯವಹಾರಿಕ ನ್ಯಾಯಾಧೀಶರು ಮತ್ತು ಜೆಎಮ್‌ಎಫ್‌ಸಿ ಹಾಗೂ ಪುತ್ತೂರು ತಾಲೂಕು ಕಾನೂನು ಸೇವೆಗಳ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರಕಾಶ್ ಪಿ ಎಮ್, ಸಂತ ಫಿಲೋಮಿನಾ ಕಾಲೇಜಿನ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಸಂಯೋಜಕಿ ಪ್ರೇಮಲತಾ ಕೆ, ಕೆಎಸ್‌ಎಸ್‌ಎಪಿ ಅಧ್ಯಕ್ಷೆ ರಾಣಿ ಪುಷ್ಪಲತಾ ದೇವಿ, ನೋಟರಿ ಹಾಗೂ ನ್ಯಾಯವಾದಿ ಸಾಯಿರಾ ಕೆ ಝುಬೇರ್ ಉಪಸ್ಥಿತರಿದ್ದರು.

ಬಳಿಕ ಜರಗಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮಹಿಳಾ ದೌರ್ಜನ್ಯ’ ಕುರಿತು ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಮನೋಹರ್ ಕೆ ವಿ ಮತ್ತು ‘ಸಾಮಾಜಿಕ ಜಾಲತಾಣಗಳು ಮತ್ತು ಯುವಜನತೆ’ ಕುರಿತು ನ್ಯಾಯವಾದಿ ಅನೀಶ್ ಕೃಷ್ಣ ಬೆಟ್ಟ ಉಪನ್ಯಾಸ ನೀಡಿದರು. ಎನ್‌ಎಸ್‌ಸಿಡಿಎಫ್ ಕಾರ್ಯದರ್ಶಿ ದಿನಕರ್ ಡಿ ಬಂಗೇರ ಕಾರ್ಯಕ್ರಮ ಸಂಯೋಜನೆಯಲ್ಲಿ ಸಹಕರಿಸಿದರು.

ವರ್ಷಾ ಮತ್ತು ತಂಡದವರು ಪ್ರಾರ್ಥಿಸಿದರು. ಎನ್‌ಎಸ್‌ಸಿಡಿಎಫ್ ಅಧ್ಯಕ್ಷ ಗಂಗಾಧರ್ ಗಾಂಧಿ ಸ್ವಾಗತಿಸಿ, ವಂದಿಸಿದರು. ಮಲ್ಲಿಕಾ ಅಜಿತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.