22 ವರ್ಷಗಳ ಹಿಂದೆ ವೈದ್ಯಲೋಕಕ್ಕೆ ಸವಾಲಾಗಿದ್ದ ಬಾಲಕ: ಕಿಡ್ನಿ ಸಮಸ್ಯೆಯ ಪ್ರಾಣ ಸಂಕಟದಿಂದ ಬಳಲುತ್ತಿರುವ ಯುವಕ, ದಾನಿಗಳಿಂದ ನೆರವು ಬಯಸಿರುವ ಕುಟುಂಬ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಅಯ್ಯೋ ವಿಧಿಯೇ?! ಎಂದೆನಿಸಲಾರದು ಈ ಯುವಕನ ಸ್ಥಿತಿ ನೋಡಿದರೆ. ಮಗನ ಸ್ಥಿತಿ ನೋಡಿ ನಿತ್ಯ ಕಣ್ಣೀರಿಡುವ ಹೆತ್ತವರನ್ನು ಕಂಡರೆ ಮರುಕ ಹುಟ್ಟುತ್ತದೆ. ಪ್ರಾಣ ಸಂಕಟದಿಂದ ಬಳಲುತ್ತಿರುವ ಈ ಯುವಕ ಕಳೆದ 22 ವರ್ಷಗಳಿಂದ ಆಗಿಂದಾಗೆ ಕಿಡ್ನಿ ಸಮಸ್ಯೆಯಿಂದ ನರಕ ಸದೃಶ ಜೀವನ ಸಾಗಿಸುತ್ತಿದ್ದಾರೆ. ಪುತ್ತೂರಿನ ನರಿಮೊಗರು ಗ್ರಾಮದ ಕೆದ್ಕಾರ್ ಮೋನಪ್ಪ ಗೌಡರ ಪುತ್ರ ಪುನೀತ್‌ರವರು ನೋಡಲು ಎಲ್ಲರಂತಿದ್ದರೂ ಅಸಾಮಾನ್ಯ ಖಾಯಿಲೆಯಿಂದ ಬಳಲುತ್ತಿದ್ದಾರೆ. ಹುಟ್ಟುವಾಗಲೇ ಈತನಿಗೆ ಮೂತ್ರಕೋಶ ಮತ್ತು ಜನನಾಂಗವಿಲ್ಲ. 5 ವರ್ಷ ವಯಸ್ಸಿನ ಬಾಲಕನ ವಿಚಿತ್ರ ಪರಿಸ್ಥಿತಿಯನ್ನು ಕಂಡು ವೈದ್ಯಲೋಕ ನಿಬ್ಬೆರಗಾಗಿತ್ತು. ಆದರೂ ಸವಾಲಾಗಿ ಸ್ವೀಕರಿಸಿದ್ದ ವೈದ್ಯರು ಈತನಿಗೆ ಅಪರೇಷನ್ ಮಾಡಿಸಿ ಯಶಸ್ವಿಯಾಗಿದ್ದರು. ಬಳಿಕ ಹೊಕ್ಕಳಿನ ಬಳಿ ಸಣ್ಣ ರಂಧ್ರದ ಮೂಲಕ ಪೈಪ್‌ನಲ್ಲಿ ಮೂತ್ರ ಹೊರ ತೆಗೆಯಲಾಗುತ್ತಿತ್ತು. ಅಷ್ಟೇ ಆಗಿದ್ದರೆ ಜೀವನ ಸಾಗಿಸುತ್ತಿದ್ದರೋ ಏನೋ ? ಬಳಿಕದ ದಿನಗಳಲ್ಲಿ ನಿತ್ಯ ಕಿಡ್ನಿ ಸಮಸ್ಯೆ ಕಾಡಲಾರಂಭಿಸಿತು. ಹಲವು ಬಾರಿ ಡಯಲಿಸಿಸ್ ಮಾಡಿದರೂ ಪದೇ ಪದೇ ಕಿಡ್ನಿ ಸಮಸ್ಯೆ ತಲೆದೋರುತ್ತಿದೆ. ಇತ್ತೀಚೆಗಿನ ವರ್ಷಗಳಲ್ಲಿ ವರ್ಷದ ಹೆಚ್ಚಿನ ದಿನಗಳನ್ನು ಆಸ್ಪತ್ರೆಯಲ್ಲಿಯೇ ಕಳೆಯುವಂತಾಗಿದೆ. ಕೂಲಿ ಮಾಡಿ ಬದುಕುತ್ತಿರುವ ಮೋನಪ್ಪ ಗೌಡರಂತೂ ಮಗನ ಜೊತೆ ಆಸ್ಪತ್ರೆಯಲ್ಲಿಯೇ ಇರುವಂತಾಗಿದೆ.

ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖಲಾಗಿರುವ ಪುನೀತ್

ಪ್ರಸ್ತುತ ಕಳೆದ ಒಂದು ತಿಂಗಳಿನಿಂದ ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಒಂದು ಆಪರೇಷನ್ ಆಗಿದೆ. 1 ಲಕ್ಷಕ್ಕೂ ಮಿಕ್ಕಿ ಖರ್ಚಾಗಿದೆ. ಮುಂದಿನ ಆಪರೇಷನ್‌ಗೆ ಸಾಕಷ್ಟು ಹಣ ಬೇಕಾಗಬಹುದು ಎಂದು ವೈದ್ಯರು ಹೇಳಿದ್ದಾರೆ. ಈಗಾಗಲೇ ಇದ್ದ ಹಣ, ದಾನಿಗಳಿಂದ ಬಂದ ಹಣ ಬರಿದಾಗಿ ಹೆತ್ತವರು ಅಸಹಾಯಕ ಪರಿಸ್ಥಿತಿಯಲ್ಲಿದ್ದಾರೆ. ಇವರ ಚಿಕಿತ್ಸೆಗೆ ನೆರವಾಗುವವರು ಅವರ ಬ್ಯಾಂಕ್ ಖಾತೆಗೆ ಜಮೆ ಮಾಡಬಹುದಾಗಿದೆ.

ವಿಳಾಸ: ಮೋನಪ್ಪ ಗೌಡ ಕೆದ್ಕಾರು, ನರಿಮೊಗರು, ಪುತ್ತೂರು ತಾಲೂಕು, ದ.ಕ.
ಮೊಬೈಲ್: 8496827014, 9980575433
ಬ್ಯಾಂಕ್ ಖಾತೆ ಸಂಖ್ಯೆ:  01342250113343
ಬ್ಯಾಂಕ್ ಹೆಸರು: ಸಿಂಡಿಕೇಟ್ ಬ್ಯಾಂಕ್, ಪುತ್ತೂರು
IFSC Code : SYNB0000134

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.