Home_Page_Advt
Home_Page_Advt
Home_Page_Advt
Breaking News

ಸಣ್ಣ ಕೈಗಾರಿಕಾ ಸಹಕಾರ ಸಂಘದ ಮಹಾಸಭೆ

  • ರೂ.1068ಲಕ್ಷ ಲಾಭ
  • ಶೇ.16 ಡಿವಿಡೆಂಡ್

ಪುತ್ತೂರು:ಸಣ್ಣ ಕೈಗಾರಿಕಾ ಅಭಿವೃದ್ಧಿ ಸಹಕಾರ ಸಂಘವು ೨೦೧೮-೧೯ನೇ ಸಾಲಿನಲ್ಲಿ ೧೦,೬೮,೬೬೪ ಲಾಭಾಂಶಗಳಿಸಿ ಸದಸ್ಯರಿಗೆ ಶೇ.೧೬ಡಿವಿಡೆಂಡ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಟಿ.ವಿ ರವೀಂದ್ರ ಮಹಾಸಭೆಯಲ್ಲಿ ಘೋಷಣೆ ಮಾಡಿದರು.

ಸಭೆಯು ಸೆ.21ರಂದು ಸಂಘದ ಸಭಾಭವನದಲ್ಲಿ ನಡೆಯಿತು. ಪುತ್ತೂರು, ಸುಳ್ಯ, ಬೆಳ್ತಂಗರಿ ಹಾಗೂ ಬಂಟ್ವಾಳ ತಾಲೂಕುಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಕಾರಿ ಸಂಘವು ವರ್ಷಾಂತ್ಯಕ್ಕೆ ೨೭,೫೯,೩೩೮ ಪಾಲು ಬಂಡವಾಳವನ್ನು ಹೊಂದಿದೆ. ವರ್ಷಾಂತ್ಯಕ್ಕೆ ರೂ.೩,೫೩,೦೦,೮೮೫.೫೬ ಠೇವಣಾತಿಯಿದೆ. ಒಟ್ಟು ರೂ.೧,೪೬,೬೪,೯೧೩ನ್ನು ವಿವಿಧ ಬ್ಯಾಂಕ್‌ಗಳಲ್ಲಿ ವಿನಿಯೋಗಿಸಲಾಗಿದೆ. ವರದಿ ವರ್ಷದಲ್ಲಿ ರೂ.೨,೩೫,೨೧,೦೮೮ಗಳನ್ನು ವಿವಿಧ ರೂಪದಲ್ಲಿ ಸಾಲ ನೀಡಿದ್ದು ವರ್ಷಾಂತ್ಯಕ್ಕೆ ರೂ.೩,.೯,೧೪,೯೬೨ ಸಾಲ ಹೊರಬಾಕಿಯಿರುತ್ತದೆ. ರೂ.೧೨,೭೫,೮೧೧.೮೧ನ್ನು ವಿವಿಧ ಬ್ಯಾಂಕ್‌ಗಳಲ್ಲಿ ಸಂಚಯ ಹಾಗೂ ಚಾಲ್ತಿ ಖಾತೆಯಲ್ಲಿ ಜಮೆಯಿಡಲಾಗಿದೆ. ಸಂಘದಲ್ಲಿ ಒಟ್ಟ ರೂ.೨೦,೮೫೦೪೬೧.೬೦ವಿವಿಧ ಚರ ಹಾಗೂ ಸ್ಥಿರ ಸೊತ್ತುಗಳ ಸಂಘದಲ್ಲಿದೆ. ಲೆಕ್ಕಪರಿಶೋಧನೆಯಲ್ಲಿ ಸಂಘವು `ಎ’ ಶ್ರೇಣಿಯನ್ನು ಪಡೆದುಕೊಂಡಿದೆ ಎಂದರು.

ನಿರ್ದೇಶಕರಾದ ಪ್ರೇಮಾನಂದ ಡಿ., ಗಿರೀಶ್ ಭಾರದ್ವಾಜ್, ರವಿರಾಜ ಭಟ್, ಮೀನಾಕ್ಷಿ ಕೆ., ಪಿ.ಎಸ್ ಕೃಷ್ಣಮೋಹನ್, ಸುಧೀರ್ ಶೆಟ್ಟಿ, ಕೇಶವ ಬಿ., ಜಗನ್ನಾಥ ರೈ ಸುಳ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ನಿರ್ದೇಶಕ ಮಹಾಲಕ್ಷ್ಮೀ ಪ್ರಾರ್ಥಿಸಿದರು. ಉಪಾಧ್ಯಕ್ಷ ಪ್ರಸನ್ನ ಕುಮಾರ್ ರೈ ಸ್ವಾಗತಿಸಿದರು. ಕಾರ್ಯದರ್ಶಿ ಈಶ್ವರ ಭಟ್ ಎಂ. ಲೆಕ್ಕಪತ್ರ ಮಂಡಿಸಿದರು. ಲೆಕ್ಕಿಗ ರಘುನಾಥ ರೈ ಕಾರ್ಯಕ್ರಮ ನಿರೂಪಿಸಿ, ನಿರ್ದೇಶಕ ಮೋಹನ್ ಕುಮಾರ್ ಬೊಳ್ಳಾಡಿ ವಂದಿಸಿದರು. ಸಿಬಂದಿ ಜಗದೀಶ್ ಹಾಗೂ ಪಿಗ್ಮಿಸಂಗ್ರಾಹಕ ಮುರಳಿ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.