ಪತ್ರಕರ್ತ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವುದು ಮುಖ್ಯ: ಅಶೋಕ್

Puttur_Advt_NewsUnder_1
Puttur_Advt_NewsUnder_1


ಪುತ್ತೂರು: ಕಾಲ ಬದಲಾದಂತೆ ಪತ್ರಿಕೋದ್ಯಮದ ತಂತ್ರಜ್ಞಾನಗಳು ಬದಲಾಗುತ್ತಿದೆ. ಆ ಬದಲಾವಣೆಗೆ ಪ್ರತಿಯೊಬ್ಬ ಪತ್ರಕರ್ತ ಹೊಂದಿಕೊಳ್ಳಬೇಕು. ಆಗ ಮಾತ್ರ ಆತನು ಹೊಸ ಹೊಸ ವಿಷಯಗಳನ್ನು ಜನರಿಗೆ ತಿಳಿಸಲು ಸಾಧ್ಯವಾಗುತ್ತದೆ. ಇದರಿಂದ ಆತನ ಅನುಭವವು ಹೆಚ್ಚುವುದಲ್ಲದೆ ಜ್ಞಾನವು ವೃದ್ಧಿಯಾಗುತ್ತದೆ ಎಂದು ದಿಗ್ವಿಜಯ ವಾಹಿನಿಯ ಉಡುಪಿ ಜಿಲ್ಲಾ ವರದಿಗಾರ ಅಶೋಕ್ ಅಭಿಪ್ರಾಯಪಟ್ಟರು.

ಅವರು ಇಲ್ಲಿನ ವಿವೇಕಾನಂದ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಬುಧವಾರ ಮಾತನಾಡಿದರು.

ಸಮಾಜದಲ್ಲಿ ಸತ್ಯಾಂಶವನ್ನು ಜನರಿಗೆ ತಿಳಿಸುವುದು ಮಾಧ್ಯಮ. ಆದ್ದರಿಂದ ಪ್ರತಿಯೊಬ್ಬ ವರದಿಗಾರ ಸಿಕ್ಕ ವಿಷಯಗಳನ್ನು ಪರಿಶೀಲನೆ ಮಾಡಬೇಕು. ಆಗ ಮಾತ್ರ ವಿಷಯವನ್ನು ಚೊಕ್ಕದಾಗಿ ಬರೆದು ಸಾಮಾನ್ಯ ಭಾಷೆಯಲ್ಲಿ ಜನರಿಗೆ ತಿಳಿಸಲು ಸಾಧ್ಯವಾಗುತ್ತದೆ. ಪತ್ರಕರ್ತನಾದವನು ಮಾತುಗಾರಿಕೆ, ಬರವಣಿಗೆ ಮತ್ತು ಜ್ಞಾನದಲ್ಲಿ ನಿಪುಣತೆ ಹೊಂದಿರಬೇಕು. ಅದು ಮಾತ್ರವಲ್ಲದೆ ಸಿಕ್ಕ ಅವಕಾಶಗಳನ್ನು ಸದುಪಯೋಗ ಮಾಡುವ ಕಲೆ ಇರಬೇಕು. ಆಗ ಪತ್ರಿಕೋದ್ಯಮದಲ್ಲಿ ಬೆಳೆಯಲು ಸಾಧ್ಯ ಎಂದು ಹೇಳಿದರು.

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ರಾಕೇಶ್‌ಕುಮಾರ್ ಕಮ್ಮಜೆ ಸ್ವಾಗತಿಸಿದರು. ಉಪನ್ಯಾಸಕಿ ಭವ್ಯಾ ಪಿ.ಆರ್. ನಿಡ್ಪಳ್ಳಿ ವಂದಿಸಿದರು. ವಿದ್ಯಾರ್ಥಿ ತೇಜಶ್ರೀ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.