‘ಕಾಶ್ಮೀರ ವಿಚಾರದಲ್ಲಿ ಮೋದಿ ನಿರ್ಣಯ ಅತ್ಯುತ್ತಮವಾದದು’ – ವಿವೇಕಾನಂದ ಕಾನೂನು ಕಾಲೇಜಿನಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಪ್ರೊ. ಪ್ರೇಮ ಶೇಖರ್

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕಾಶ್ಮೀರ ಸಮಸ್ಯೆಯಇತ್ಯರ್ಥ ವಿಚಾರದಲ್ಲಿ ಮೋದಿ ನಡೆ ಪ್ರಶಂಸನೀಯ.ಈ ನಿರ್ಧಾರದಿಂದ ವಿಶ್ವಮಟ್ಟದಲ್ಲಿ ಭಾರತದಘನತೆ ಹೆಚ್ಚಿದೆಎಂದುರಾಜಕೀಯ ವಿಶ್ಲೇಶಕರು, ಅಂಕಣಕಾರರು ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್‌ನರಾಜ್ಯಅಧ್ಯಕ್ಷರಾದ ಪ್ರೊ.ಪ್ರೇಮ ಶೇಖರ ಹೇಳಿದರು.ಅವರು ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಸೆ.21 ರಂದು ನಡೆದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಅವರು, ಭೂಲೋಕದ ಸ್ವರ್ಗಎಂದುಖ್ಯಾತಿ ಪಡೆದಿದ್ದ ಕಾಶ್ಮೀರ, ಇಷ್ಟೊಂದು ಸಮಸ್ಯೆಗಳಿಗೆ ಗುರಿಯಾಗಿದ್ದು ಬೇಸರದ ವಿಚಾರ.೧೯೪೭ರಲ್ಲಿ ದೇಶವಿಭಜನೆಯ ಸಮಯದಲ್ಲಿಭಾರತದರಾಜಕೀಯ ನಾಯಕರತಪ್ಪು ನಡೆಯಿಂದಾಗಿ ಕಾಶ್ಮೀರ ಇಷ್ಟೊಂದು ಸಮಸ್ಯೆಗಳಿಗೆ ಗುರಿಯಾಗಬೇಕಾಯಿತು.ಆದರೆ ೧೯೬೫ರಲ್ಲಿ ಲಾಲ್ ಬಹುದ್ದೂರ್ ಶಾಸ್ತ್ರಿ ಮತ್ತು ೧೯೭೧ರಲ್ಲಿ ಇಂದಿರಾಗಾಂಧಿಯವರಚಾಣಾಕ್ಷತೆ, ಕಾಶ್ಮೀರ ಮತ್ತಷ್ಟು ಸಮಸ್ಯೆಗಳಿಗೆ ಈಡಾಗುವುದನ್ನು ತಪ್ಪಿಸಿತು ಎಂದು ಹೇಳಿದರು.
ನಂತರ ಮಾತು ಮುಂದುವರಿಸಿ, ನರೇಂದ್ರ ಮೋದಿಯವರುಅಧಿಕಾರಕ್ಕೆ ಬಂದ ನಂತರ ಭಾರತದ ವಿದೇಶ ನೀತಿಯ ದಿಕ್ಕು ಬದಲಾಯಿತು.ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನವನ್ನುಒಂಟಿಯಾಗಿಸುವ ಪ್ರಯತ್ನವನ್ನು ಸತತವಾಗಿ ಮೋದಿ ಮಾಡಿದರು.ಇದರಿಂದ ಪಾಕಿಸ್ತಾನಕ್ಕೆ ದಿಕ್ಕು ತೋಚದಂತೆಆಯಿತು.ಈ ಹಂತದಲ್ಲಿ ೩೭೦ನೇ ವಿಧಿ ರದ್ದು ಮಾಡುವ ಮೂಲಕ ಭಾರತ ಮತ್ತೊಮ್ಮೆ ಪ್ರಾಬಲ್ಯವನ್ನು ಸಾಧಿಸಿದೆ.ಇದು ನರೇಂದ್ರ ಮೋದಿಯ ದಿಟ್ಟ ನಾಯಕತ್ವಕ್ಕೆ ಸಾಕ್ಷಿಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ತಾಲ್ಲೂಕು ಪಂಚಾಯತ್‌ ಅಧ್ಯಕ್ಷರಾದ  ರಾಧಾಕೃಷ್ಣ ಬೋರ್ಕರ್ ಮಾತನಾಡಿ, ಕಾಶ್ಮೀರದಲ್ಲಿ ಸಾಕಷ್ಟು ಬದಲಾವಣೆಗಳು ಆಗುತ್ತಿರುವ ಈ ಕಾಲಘಟ್ಟದಲ್ಲಿಇಂತಹ ವಿಚಾರ ಸಂಕಿರಣಗಳು ನಡೆಯಬೇಕಾದಅವಶ್ಯಕತೆಯಿದೆ.ಈ ನಿಟ್ಟಿನಲ್ಲಿ ವಿವೇಕಾನಂದ ಕಾನೂನು ಕಾಲೇಜಿನಕಾರ್ಯ ಶ್ಲಾಘನೀಯಎಂದು ಹೇಳಿದರು.

ವಿವೇಕಾನಂದ ವಿದ್ಯಾವರ್ಧಕ ಸಂಘದಉಪಾಧ್ಯಕ್ಷರಾದಡಾ. ಸುಧಾಎಸ್. ರಾವ್‌ಕಾರ್ಯಕ್ರಮದಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಸ್ತುತ ಸನ್ನಿವೇಶದಲ್ಲಿ, ಕಾಶ್ಮೀರದ ಕುರಿತು ಮಾಹಿತಿಯನ್ನು ನೀಡುವುದು ಅನಿವಾರ್ಯ.ನಾವೆಲ್ಲರೂ ಈ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.ಕಾನೂನು ಕಾಲೇಜಿನ ಸಂಚಾಲಕರಾದ  ವಿಜಯನಾರಾಯಣ ಕೆ.ಎಂ., ಕಾನೂನು ಅಧ್ಯಯನ ವಿಭಾಗದ ನಿರ್ದೇಶಕರಾದಡಾ. ಬಿ. ಕೆ ರವೀಂದ್ರ, ಪ್ರಾಂಶುಪಾಲರಾದ  ಅಕ್ಷತಾ ಎ. ಪಿ.ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾನೂನು ಕಾಲೇಜಿನಉಪನ್ಯಾಸಕರಾದಕುಮಾರ್‌ಎಸ್. ಸ್ವಾಗತಿಸಿ, ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.