Home_Page_Advt
Home_Page_Advt
Home_Page_Advt
Breaking News

ಅಡ್ಡಹೊಳೆ-ಬಿ.ಸಿ.ರೋಡ್ ರಾ.ಹೆ.ದುರವಸ್ಥೆ: ಡಾಮರು ಹಾಕಿ ಪ್ಯಾಚ್‌ವರ್ಕ್, ಮಳೆ ನಿಂತ ಬಳಿಕ ಮರು ಡಾಮರೀಕರಣ

  • ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಉದ್ದೇಶಿತ ಪ್ರತಿಭಟನೆ ಹಿಂತೆಗೆತ: ಜಿ.ಪಂ.ಸದಸ್ಯರ ಸ್ಪಷ್ಟನೆ

ನೆಲ್ಯಾಡಿ: ರಾಷ್ಟ್ರೀಯ ಹೆದ್ದಾರಿ 75ರ ಅಡ್ಡಹೊಳೆ-ಬಿ.ಸಿ.ರೋಡ್ ನಡುವಿನ ಚತುಷ್ಪಥ ರಸ್ತೆ ಕಾಮಗಾರಿಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣಗೊಂಡಿದ್ದ ಹೊಂಡಗಳನ್ನು ಮುಚ್ಚುವ ಕಾಮಗಾರಿಯನ್ನು ಎಲ್ ಆಂಡ್ ಟಿ ಕಂಪನಿಯವರು ಆರಂಭಿಸಿದ್ದು ಮುಂದೆ ಡಾಮರು ಹಾಕಿ ಪ್ಯಾಚ್‌ವರ್ಕ್ ಹಾಗೂ ಮಳೆ ನಿಂತ ಬಳಿಕ ಹೊಂಡ ಮುಚ್ಚಿರುವ ಜಾಗದಲ್ಲಿ ಮರು ಡಾಮರೀಕರಣಗೊಳಿಸುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಸೆ.23ರಂದು ನಡೆಸಲು ಉದ್ದೇಶಿಸಿದ್ದ ರಾಷ್ಟ್ರೀಯ ಹೆದ್ದಾರಿ ತಡೆ ಪ್ರತಿಭಟನೆ ಹಿಂತೆಗೆದುಕೊಳ್ಳಲಾಗಿದೆ ಎಂದು ಜಿ.ಪಂ.ಸದಸ್ಯರಾದ ಸರ್ವೋತ್ತಮ ಗೌಡ ಹಾಗೂ ಪಿ.ಪಿ.ವರ್ಗೀಸ್‌ರವರು ತಿಳಿಸಿದ್ದಾರೆ.

ಮಂಗಳೂರು-ಬೆಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ ೭೫ರ ಶಿರಾಡಿ ಗ್ರಾಮದ ಅಡ್ಡಹೊಳೆಯಿಂದ ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ತನಕ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಎಲ್ ಆಂಡ್ ಟಿ ಕಂಪನಿಯವರು ಮೂರು ವರ್ಷದ ಹಿಂದೆಯೇ ಹೆದ್ದಾರಿ ನಿರ್ಮಾಣ ಕಾಮಗಾರಿ ಆರಂಭಿಸಿದ್ದರೂ ಇಲ್ಲಿಯವರೆಗೂ ಪೂರ್ಣಗೊಂಡಿಲ್ಲ. ಹೆದ್ದಾರಿ ಅಗೆದು ಮೋರಿ ಅಳವಡಿಸಿ ಮುಚ್ಚಲಾಗಿದ್ದರೂ ಅಲ್ಲಿ ಈಗ ಡಾಮರು ಎದ್ದು ಹೊಂಡ ನಿರ್ಮಾಣಗೊಂಡಿದೆ. ಅಲ್ಲದೇ ಅಪೂರ್ಣ ಕಾಮಗಾರಿಯಿಂದಾಗಿ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಅಲ್ಲಲ್ಲಿ ಹೊಂಡ ನಿರ್ಮಾಣಗೊಂಡಿರುವುದರಿಂದ ಸುಗಮ ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ. ಇದರಿಂದಾಗಿ ಹೆದ್ದಾರಿಯಲ್ಲಿ ಪದೇ ಪದೇ ಅಪಘಾತಗಳು ನಡೆಯುತ್ತಿದ್ದು ಜೀವಹಾನಿಯೂ ಸಂಭವಿಸಿದೆ. ಆದ್ದರಿಂದ ಸೆ.೧೮ರೊಳಗೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಗುಂಡಿಗಳನ್ನು ಮುಚ್ಚದೇ ಇದ್ದಲ್ಲಿ ಸೆ.೨೩ರಂದು ನೆಲ್ಯಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿ ಜಿ.ಪಂ.ಸದಸ್ಯರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡರವರ ನೇತೃತ್ವದ ನೆಲ್ಯಾಡಿಯ ಕಾಂಗ್ರೆಸ್ ಮುಖಂಡರ ನಿಯೋಗವೊಂದು ಸೆ.೧೩ರಂದು ಮಂಗಳೂರಿನಲ್ಲಿ ಜಿಲ್ಲಾಧಿಕಾರಿಯವರಿಗೆ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳಿಗೆ ಮನವಿ ಮಾಡಿ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸೆ.೧೪ರಂದು ನೆಲ್ಯಾಡಿ ಗ್ರಾ.ಪಂ.ಕಚೇರಿಗೆ ಭೇಟಿ ನೀಡಿದ ಎಲ್ ಆಂಡ್ ಟಿ ಕಂಪನಿಯ ಅಧಿಕಾರಿಗಳ ತಂಡವೊಂದು ಜಿ.ಪಂ.ಸದಸ್ಯರುಗಳೊಂದಿಗೆ ಮಾತುಕತೆ ನಡೆಸಿ ಸೆ.೧೬ರಿಂದ ನೆಲ್ಯಾಡಿಯಿಂದ ಗುಂಡಿ ಮುಚ್ಚುವ ಕಾಮಗಾರಿ ಆರಂಭಿಸಿತ್ತು.
ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಭೇಟಿ:
ಸೆ.೨೦ರಂದು ಸಂಜೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಾಸನ ವಿಭಾಗದ ಸೂಪರಿಂಟೆಂಡ್ ಸೋಮಶೇಖರ್‌ರವರು ನೆಲ್ಯಾಡಿಗೆ ಆಗಮಿಸಿದ್ದು ಜಿ.ಪಂ.ಸದಸ್ಯರೊಂದಿಗೆ ಮಾತುಕತೆ ನಡೆಸಿದರು. ಈಗಾಗಲೇ ಜಲ್ಲಿ ಹಾಕಿ ಹೊಂಡ ಮುಚ್ಚುವ ಕಾಮಗಾರಿ ಆರಂಭಿಸಿದ್ದು ಸೋಮವಾರದಿಂದ ಡಾಮರು ಹಾಕಿ ಪ್ಯಾಚ್‌ವರ್ಕ್ ಮಾಡಲಾಗುವುದು. ಮಳೆ ಸಂಪೂರ್ಣ ನಿಂತ ಬಳಿಕ ಪ್ಯಾಚ್‌ವರ್ಕ್ ಮಾಡಿದ ಜಾಗದಲ್ಲಿ ಮರು ಡಾಮರೀಕರಣ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಸೆ.೨೧ರಂದು ಪುತ್ತೂರಿನಲ್ಲಿ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲೂ ಹೆದ್ದಾರಿ ದುರಸ್ತಿ ವಿಚಾರ ಪ್ರಸ್ತಾಪಿಸಿದ್ದು ಜಲ್ಲಿ ಹಾಕಿ ಹೊಂಡ ಮುಚ್ಚಿರುವ ಜಾಗದಲ್ಲಿ ಡಾಮರು ಹಾಕಿ ಪ್ಯಾಚ್‌ವರ್ಕ್ ಮಾಡಲಾಗುವುದು. ಮಳೆ ನಿಂತ ಬಳಿಕ ಮರು ಡಾಮರೀಕರಣ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೆ.೨೩ರಂದು ನಡೆಸಲು ಉದ್ದೇಶಿಸಿದ್ದ ರಾಷ್ಟ್ರೀಯ ಹೆದ್ದಾರಿ ತಡೆ ಪ್ರತಿಭಟನೆ ಹಿಂತೆಗೆದುಕೊಳ್ಳಲಾಗಿದೆ ಎಂದು ಪಿ.ಪಿ.ವರ್ಗೀಸ್ ಹಾಗೂ ಸರ್ವೋತ್ತಮ ಗೌಡರವರು ತಿಳಿಸಿದ್ದಾರೆ.

===============================================================================

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.