Home_Page_Advt
Home_Page_Advt
Home_Page_Advt
Breaking News

ನಿರ್ಗತಿಕ ಅಜ್ಜಿಯನ್ನು ಆಸ್ಪತ್ರೆಗೆ ದಾಖಲಿಸಲು ನೆರವಾದ ಯುವಕರು

   

ಪುತ್ತೂರು: ಸಮಾಜದಲ್ಲಿ ಭಿಕ್ಷುಕರೋ, ನಿರ್ಗತಿಕರನ್ನೋ ಕಂಡರೆ ಕಂಡೂ ಕಾಣದಂತೆ ಹೋಗುವವರ ಮಧ್ಯೆ ಇಲ್ಲೊಂದು ಯುವಕರ ತಂಡ ನಿರ್ಗತಿಕ ಅಜ್ಜಿಗೆ ನೆರವಾಗಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಎಲ್ಲಿಂದಲೋ ಬಂದ ನಿರ್ಗತಿಕ‌ ಮಹಿಳೆಯೋರ್ವಾಕೆ ಬೆಟ್ಟಂಪಾಡಿ ಗ್ರಾಮದ ಕೇಸರಿನಗರ ಮಿತ್ತಡ್ಕ ಬಸ್ ನಿಲ್ದಾಣದಲ್ಲಿ ಸೆ. 21 ರಂದು ಉಳಿದಿದ್ದರು.

 

 

 

ಒಂದು ಕಾಲು ಊನವಾಗಿ ನಡೆಯಲಾರದೆ ಬಸ್ ನಿಲ್ದಾಣದಲ್ಲಿ ನರಕ ಯಾತನೆ ಪಡುತ್ತಿದ್ದರು.‌ ಹತ್ತಿರ ಹೋಗದಷ್ಟು ಅಸಹ್ಯ ದುರ್ವಾಸನೆ ಬರುತ್ತಿದ್ದ‌ ಕಾರಣ ಯಾರೊಬ್ಬರೂ ಆಕೆಯನ್ನು ಉಪಚರಿಸಲು ಹೋಗಿರಲಿಲ್ಲ.‌ ಸಮಾಜದಲ್ಲಿ ಇಂತಹವರನ್ನು ಕಂಡಾಗ ಯಾರು ಮುಂದೆ ಬಂದು ಆಕೆಗೆ ಆಸರೆಯಾಗಬೇಕಿತ್ತೋ ಅಂತಹ ಒಂದು ಇಲಾಖೆಗೆ ಸಂಬಂಧಿಸಿದವರೂ ನೋಡಿ ಹಾಗೇ ಬಿಟ್ಟುಹೋಗಿದ್ದರೆನ್ನಲಾಗಿದೆ.

ಈ ಮಧ್ಯೆ ಮಧ್ಯಾಹ್ನ ಸ್ಥಳೀಯ ಮನೆಯವರು ಆಕೆಗೆ ಊಟ ನೀಡಿದ್ದರು. ಬೇಕರಿ ಲೈನ್ ಸೇಲ್‌ನವರು ಬ್ರೆಡ್ ನೀರು ನೀಡಿ ಉಪಚರಿಸಿದ್ದರು. ಸಂಜೆ ವೇಳೆ ಸ್ಥಳೀಯ ಕೇಸರಿ ಮಿತ್ರವೃಂದದ ಯುವಕರ ತಂಡ ಈಕೆಯನ್ನು ನೋಡಿ ಮರುಕಪಟ್ಟು ತಕ್ಷಣ 108 ಸಹಾಯವಾಣಿಗೆ ಕರೆ ಮಾಡಿ ಆಂಬುಲೆನ್ಸ್ ತರಿಸಿದ್ದರು. ಆಕೆಗೆ ಆಹಾರ ಕೊಟ್ಟು ಊನವಾಗಿದ್ದ ಕಾಲಿಗೆ ಬಟ್ಟೆ ಸುತ್ತಿ ಪ್ರಾಥಮಿಕ ಶುಶ್ರೂಷೆ ಮಾಡಿ ಆಂಬುಲೆನ್ಸ್ ಗೆ ಹತ್ತಿಸಿ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಅಲ್ಲಿನ ವೈದ್ಯಾಧಿಕಾರಿಗಳು ಪರೀಕ್ಷಿಸಿ ಹೆಚ್ಚಿನ ಚಿಕಿತ್ಸೆಗಾಗಿ ಅಲ್ಲಿಂದ ಆಕೆಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.  ಯುವಕರು ಆಕೆಯನ್ನು ಪ್ರಶ್ನಿಸಿದ್ದಾಗ ಆಕೆ ‘ತಾನು ಬೆಂಗಳೂರಿನವಳು’ ಎಂದು ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಎಲ್ಲೋ ಬೀದಿಯಲ್ಲಿ ಸುತ್ತುತ್ತಾ ಯಾರಿಗೂ ಬೇಡವಾಗಿ ಸಮಾಜದ ಮುಖ್ಯವಾಹಿನಿಯಿಂದ ಪ್ರತ್ಯೇಕಿಸಲ್ಪಟ್ಟು ಮಾನಸಿಕ ಅಸ್ವಸ್ಥರಾಗಿ ತಿರುಗುತ್ತಾ ಸಾಗುವ ಮಹಿಳೆಗೆ ನೆರವಾದ ಯುವಕರ ತಂಡ ಶ್ಲಾಘನೆಗೆ ಪಾತ್ರವಾಗಿದೆ.

ಕೇಸರಿ‌ ಮಿತ್ರವೃಂದ ಕೇಸರಿನಗರ ಇದರ ಸದಸ್ಯರಾದ ಯೋಗೀಶ್ ಮಿತ್ತಡ್ಕ, ಲಿತೇಶ್ ಮಿತ್ತಡ್ಕ, ಪ್ರಶಾಂತ್ ಮಿತ್ತಡ್ಕ, ಯತೀಶ್ ಗೌಡ ಮಿತ್ತಡ್ಕ, ಶೇಖರ ಗೌಡ, ಹರೀಶ್ ಗೌಡ ಮತ್ತಿತರರು ತಂಡದಲ್ಲಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.