Home_Page_Advt
Home_Page_Advt
Home_Page_Advt
Breaking News

ವಿಹೆಚ್‌ಪಿ, ಬಜರಂಗ ದಳ ಪ್ರತಿಭಟನೆ ಪ್ರಚಾರ ಫಲಕದಲ್ಲಿ ಕ್ರೈಸ್ತರ ಶಿಲುಬೆ, ಜಪಮಾಲೆಗೆ ಅಪಮಾನ ಆರೋಪ-ಎಸ್ಪಿ., ಡಿ.ಸಿ.ಗೆ ದೂರು, ಕ್ರಮಕ್ಕೆ ಆಗ್ರಹ

ಉಪ್ಪಿನಂಗಡಿ: ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ದಳ ಸೆ. 26ರಂದು ಮುಲ್ಕಿಯಲ್ಲಿ ಕ್ರೈಸ್ತರ ವಿರುದ್ಧ ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯ ಪ್ರಚಾರ ಫಲಕಗಳಲ್ಲಿ ಕ್ರೈಸ್ತರ ಪವಿತ್ರ ಶಿಲುಬೆ ಮತ್ತು ಜಪಮಾಲೆಯನ್ನು ಅಪಮಾನಗೊಳಿಸಲಾಗಿದ್ದು, ಅಪಾದಿತ ಸಂಘಟನೆಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಕರ್ನಾಟಕ ಸಿರೋ ಮಲಬಾರ್ ಕೆಥೋಲಿಕ್ ಅಸೋಸಿಯೇಶನ್ ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ದ.ಕ. ಜಿಲ್ಲಾಧಿಕಾರಿಗೆ ಮನವಿ ನೀಡಿ ಆಗ್ರಹಿಸಿದೆ.

ಕ್ರೈಸ್ತರ ಪವಿತ್ರ ಶಿಲುಬೆ ಮತ್ತು ಜಪಮಾಲೆಯನ್ನು ಅಪಮಾನಗೊಳಿಸಲಾದ ಪ್ರಚಾರ ಫಲಕಗಳು ಎಲ್ಲೆಡೆ ರಾರಾಜಿಸುತ್ತಿದ್ದು, ಫಲಕಗಳಲ್ಲಿ ಹಾಕಲಾಗಿರುವ ಚಿತ್ರಗಳು ಮತ್ತು ಬರಹಗಳು ಕ್ರೈಸ್ತ ವಿರೋಧಿ ಪ್ರಚೋಧನೆಕಾರಿ ಹೇಳಿಕೆಗಳಾಗಿದ್ದು, ಇದರಿಂದಾಗಿ ಕ್ರೈಸ್ತ ಸಮುದಾಯದ ಧಾರ್ಮಿಕ ಭಾವನೆಗಳಿಗೆ ದಕ್ಕೆ ಉಂಟಾಗಿದ್ದು, ಈ ನಿಟ್ಟಿನಲ್ಲಿ ಆರೋಪಿತ ಸಂಘಟನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಕ್ರೈಸ್ತ ಸಮುದಾಯದಲ್ಲಿ ನೆಲೆಗೊಂಡಿರುವ ಅಭದ್ರತೆಯನ್ನು ಹೋಗಲಾಡಿಸಿ ಶಾಂತಿಯುತ ಬಾಳ್ವೆಗೆ ಅನುವು ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ.

ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ದ.ಕ. ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿರುವ ನಿಯೋಗದಲ್ಲಿ ಆಲ್ ಇಂಡಿಯಾ ಕೆಥೋಲಿಕ್ ಎಸೋಸಿಯೇಶನ್ ಅಧ್ಯಕ್ಷ ಲೆನ್ಸಿ ಡೆಕೋನ, ಕರ್ನಾಟಕ ಸಿರೋ ಮಲಬಾರ್ ಕೆಥೋಲಿಕ್ ಅಸೋಸಿಯೇಶನ್ ಅಧ್ಯಕ್ಷ ಸೆಬಾಸ್ಟಿಯನ್ ಕೆ.ಕೆ. ಶಿರಾಡಿ, ಜಿಲ್ಲಾ ಅಧ್ಯಕ್ಷ ಜೋಸ್ ಕೆ.ಜೆ., ನಿರ್ದೇಶಕ ಧರ್ಮಗುರು ಬಿನೋಯಿ, ನೆಲ್ಯಾಡಿ ಘಟಕದ ಅಧ್ಯಕ್ಷ ತೋಮಸ್ ಮಟ್ಟಂ, ಉಪಾಧ್ಯಕ್ಷ ಜಾರ್ಜ್ ಸಿ.ವಿ., ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರದೀಪ್ ಕೆ.ಸಿ., ರೋಲ್ಫ್ ಡಿ’ಕೋಸ್ತ, ಲ್ಯಾನ್ಸಿ ಡಿ’ಕುನ್ನ, ಸುಶೀಲ್ ನೊರೋನ್ನ, ಸುನಿಲ್ ವಾಸ್, ನವೀನ್ ಬ್ರಾಗ್ಸ್, ಹೆರ್ರಿ ರೇಗೋ, ವಿಕ್ಟರ್ ಕೊರಿಯ, ಅಜಯ್ ಪೈಡ್ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.