ಕುಂಬ್ರ: ಅಪಾಯಕಾರಿ ಸರಕಾರಿ ಆವರಣಗೋಡೆ ತೆರವು ಮಾಡುವಂತೆ ಮನೆ ಮಾಲೀಕರಿಂದ ಇಲಾಖೆಗೆ ಮನವಿ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ರಸ್ತೆ ನಿರ್ಮಾಣದ ವೇಳೆ ಇಲಾಖೆ ನಿರ್ಮಿಸಿದ ಆವರಣಗೋಡೆ ಕುಸಿಯುವ ಭೀತಿಯಲ್ಲಿದ್ದು ಕಳೆದ 3 ವರ್ಷಗಳಿಂದ ಮನೆ ಮಂದಿ ಆತಂಕದಿಂದ ದಿನದೂಡುತ್ತಿದ್ದಾರೆ. ಆವರಣಗೋಡೆ ತೆರವು ಮಾಡಿ ಅಥವಾ ಹೊಸ ಆವರಣ ಗೋಡೆಯನ್ನು ನಿರ್ಮಾಣ ಮಾಡಿ ಎಂದು ಎರಡು ವರ್ಷದಿಂದ ಇಲಾಖೆಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನ ವಾಗಿಲ್ಲ ಎಂದು ಮನೆ ಮಾಲಿಕರು ಪುತ್ತೂರು ಸಹಾಯಕ ಕಮೀಷನರ್‌ಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯ ಶೇಕಮಲೆಯಿಂದ ದರ್ಬೆತ್ತಡ್ಕಕ್ಕೆ ತೆರಳುವ ರಸ್ತೆಯ ಪ್ರವೇಶದ ಬಳಿ ಈ ತಡೆಗೋಡೆಯನ್ನು ನಿರ್ಮಾಣ ಮಾಡಲಾಗಿದೆ. ನಾಲ್ಕು ವರ್ಷಗಳ ಹಿಂದೆ ಕಾಂಕ್ರೀಟ್‌ನಿಂದ ಈ ಗೋಡೆ ನಿರ್ಮಾಣ ಮಾಡಲಾಗಿದೆ. ಗೋಡೆ ನಿರ್ಮಾಣ ಮಾಡುವಾಗ ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ನಡೆಸದೇ ಇರುವ ಕಾರಣ ಆವರಣ ಗೋಡೆಯ ಅಡಿಭಾಗದಲ್ಲಿ ಕುಸಿತ ಉಂಟಾಗಿದ್ದು ಧರೆಯ ಬದಿಯಲ್ಲಿ ರುವ ಕಾರಣ ಆವರಣಗೋಡೆ ಮನೆ ಗೋಡೆಗೆ ಬೀಳುವ ಸಾಧ್ಯತೆ ಇದೆ. ಇಲ್ಲಿರುವ ಮನೆಯ ಒಂದು ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಇದ್ದು ಇನ್ನೊಂದು ಭಾಗದಲ್ಲಿ ಶೇಕಮಲೆ-ದರ್ಬೆತ್ತಡ್ಕ ಜಿ.ಪಂ. ರಸ್ತೆ ಇದೆ. ಜಿ.ಪಂ. ರಸ್ತೆ ಅಗಲೀಕರಣ ವೇಳೆ ರಸ್ತೆಯು ಮನೆಯ ಅಂಚಿನವರೆಗೂ ಬಂದಿದ್ದು ಅರ್ಧ ಭಾಗದಲ್ಲಿ ಮಾತ್ರ ಆವರಣಗೋಡೆ ನಿರ್ಮಾಣ ಮಾಡಿದ್ದು ಉಳಿದ ಭಾಗದಲ್ಲಿ ಸುಮಾರು ೩೦ ಮೀ. ಉದ್ದಕ್ಕೆ ಹಾಗೇ ಬಿಡಲಾಗಿದೆ. ಕಳೆದ ೨ ವರ್ಷಗಳ ಹಿಂದೆ ಜೀಪೊಂದು ಚಾಲಕನ ನಿಯಂತ್ರಣ ತಪ್ಪಿ ಮನೆಯಂಗಳ ಕ್ಕೆ ಬಿದ್ದು ಮನೆ ಮಂದಿ ಅಪಾಯದಿಂದ ಪಾರಾಗಿದ್ದರು. ಕಾಮಗಾರಿ ನಡೆಸುವ ವೇಳೆ ಆಗುವ ಎಡವಟ್ಟಿನಿಂದಾಗಿ ಕೌಡಿಚ್ಚಾರ್ ಮಡ್ಯಂಗಳ ರಸ್ತೆ ಬದಿಯಲ್ಲಿದ್ದ ಕೆರೆಯನ್ನು ಮುಚ್ಚದೇ ಇರುವ ಕಾರಣ ಕಾರು ಬಿದ್ದು ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದನ್ನು ನೆನಪಿಸಿಕೊಳ್ಳಬಹುದು.

ಅಪಾಯಕಾರಿ ಸ್ಥಿತಿಯಲ್ಲಿರುವ ಆವರಣಗೋಡೆಯನ್ನು ಪರಿಶೀಲನೆ ಮಾಡುವಂತೆ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್‌ಗೆ ಸೂಚನೆಯನ್ನು ನೀಡಿದ್ದೇನೆ. ಅಪಾಯಕಾರಿ ಆವರಣಗೋಡೆಯನ್ನು ತೆರವು ಮಾಡಿ ಹೊಸ ಆವರಣಗೋಡೆ ನಿರ್ಮಾಣ ಮಾಡುವಲ್ಲಿ ಪರಿಶೀಲನೆ ಮಾಡುತ್ತೇನೆ-ಎಚ್.ಕೆ. ಕೃಷ್ಣಮೂರ್ತಿ, ಸಹಾಯಕ ಕಮಿಷನರ್, ಪುತ್ತೂರು

ಆವರಣಗೋಡೆಯ ಕಾರಣದಿಂದ ನಮಗೆ ನೆಮ್ಮದಿಯಿಂದ ನಿದ್ದೆ ಮಾಡದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆ ಗೋಡೆಗೆ ತಾಗಿಕೊಂಡೇ ರಸ್ತೆ ನಿರ್ಮಾಣ ಮಾಡಿದರೂ ಇಲಾಖೆ ಆವರಣಗೋಡೆ ನಿರ್ಮಾಣ ಮಾಡದೇ ಇರುವುದು ನಮಗೆ ಅಚ್ಚರಿಯನ್ನು ಉಂಟುಮಾಡಿದೆ. ಕಲ್ಲು ಕಟ್ಟಿಯಾದರೂ ಆವರಣಗೋಡೆಯನ್ನು ನಿರ್ಮಾಣ ಮಾಡಬಹುದಿತ್ತು. ಮಕ್ಕಳು ಮನೆಯಂಗಳದಲ್ಲಿ ಆಟವಾಡುವಾಗ ಅಪಾಯ ಉಂಟಾಗುವ ಸಾಧ್ಯತೆ ಇದೆ-ಎಸ್.ಪಿ. ಬಶೀರ್ ಶೇಕಮಲೆ, ಮನೆ ಮಾಲಿಕರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.