Home_Page_Advt
Home_Page_Advt
Home_Page_Advt
Breaking News

ವಿಗ್‌ನಲ್ಲಿ 1.13 ಕೆಜಿ ಚಿನ್ನ ಸಾಗಿಸಲು ಯತ್ನಿಸಿದ ಆರೋಪಿ ಅಂದರ್!!

ಪ್ರಾಣಿಗಳ ಮುಖವಾಡಗಳನ್ನು ಧರಿಸಿ ಆಭರಣ ಮಳಿಗೆಯನ್ನು ದೋಚಿದ ಪ್ರಕರಣ ಮಾಸುವ ಮುನ್ನವೇ ಮತ್ತೊಂದುವಿಶಿಷ್ಟರೀತಿಯ ಸ್ಮಗಿಂಗ್ ಸಂಗತಿಯು ಎಲ್ಲರನ್ನೂ ಹೌಹಾರುವಂತೆ ಮಾಡಿದೆ. ಈಗಿನ ಯುವ ಟ್ರೆಂಡ್ ಶೋಕಿಗಾಗಿ ಚಿತ್ರ ವಿಚಿತ್ರ ಹೇರ್‌ಸ್ಟೈಲ್ ಮಾಡಿಕೊಂಡರೆ, ಇಲ್ಲೊಬ್ಬ ಆರೋಪಿವಿಚಿತ್ರ ಕೇಶವಿನ್ಯಾಸ ಮಾಡಿಸಿಕೊಂಡು 1.13 ಕೆಜಿ ಚಿನ್ನವನ್ನು ಸಾಗಣೆ ಮಾಡಲು ಹೋಗಿ ಕಸ್ಟಮ್ಸ್ ಅಧಿಕಾರಿಗಳಿಗೆ ತಗಲಾಕಿಕೊಂಡಿದ್ದಾನೆ. ಕೇರಳ ಮೂಲದ ಮಲ್ಲಪ್ಪುರಂನ ನೌಶಾದ್ ಯುಎಇಯ ಶಾರ್ಜಾದಿಂದ ವಿಮಾನದಲ್ಲಿ 1.13 ಕೆಜಿ ತೂಕದ ಚಿನ್ನವನ್ನು ಸಾಗಿಸಲು ತನ್ನ ನೆತ್ತಿಯ ಮಧ್ಯದ ಸುತ್ತ ಕೂದಲನ್ನು ಬೋಳಿಸಿಕೊಂಡು, ತಲೆಯ ಮಧ್ಯಭಾಗದಲ್ಲಿ ವಿಗ್ ತರಿಸಿಕೊಂಡು ಅದರಲ್ಲಿ ಚಿನ್ನ ಕಳ್ಳಸಾಗಣಿಕೆಗೆ ಯತ್ನಿಸಿದ್ದಾನೆ. ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ನೌಶಾದ್‌ನ ಕೇಶವಿನ್ಯಾಸದ ಬಗ್ಗೆ ಅನುಮಾನಗೊಂಡು ಪರಿಶೀಲಿಸಿದಾಗ ಆತ ಧರಿಸಿದ್ದ ವಿಗ್ ಕೆಳಗೆ 1.13 ಕೆಜಿ ಚಿನ್ನದ ರೀತಿಯ ಪೇಸ್ಟ್ ಪತ್ತೆಯಾಗಿದೆ. ತಕ್ಷಣ ಆತನನ್ನು ಬಂಧಿಸಿರುವ ಕಸ್ಟಮ್ ಅಧಿಕಾರಿಗಳು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.