ಕೆಯ್ಯೂರು ನವರಾತ್ರಿ ಉತ್ಸವದಲ್ಲಿ ಮನರಂಜಿಸಿದ ಕೊಂಬೆಟ್ಟು ಶಾಲಾ ಮಕ್ಕಳ ಕುಂಚನರ್ತನ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ೯ ದಿನಗಳ ಕಾಲ ನಡೆದ ಸಂಭ್ರಮದ ನವರಾತ್ರಿ ಉತ್ಸವದಲ್ಲಿ ೬ ನೇ ದಿನವಾದ ಅ.೫ ರಂದು ಕೊಂಬೆಟ್ಟು ಸರಕಾರಿ ಪ್ರೌಢ ಶಾಲಾ ಮಕ್ಕಳ ಕುಂಚನರ್ತನ ವಿಶೇಷ ಕಾರ್ಯಕ್ರಮ ನಡೆಯಿತು. ಸುಶ್ರಾವ್ಯವಾದ ಗಾಯನ, ತಬಲ-ಮೃದಂಗಗಳ ವಾದನದೊಂದಿಗೆ ಮಕ್ಕಳ ಕೈಯ್ಯಲ್ಲಿದ್ದ ಕುಂಚಗಳಿಂದ ಅರಳಿದ ಗಣಪತಿ, ಶಾರದೆಯ ಚಿತ್ರಣ ನೋಡುನೋಡುತ್ತಿದ್ದಂತೆಯೇ ನೋಡುಗರ ಕಣ್ಣು ತುಂಬಿ ಬರುವಂತೆ ಮಾಡಿತು.

ಉಪ ಪ್ರಾಂಶುಪಾಲೆ ಮರ್ಸಿ ಮಮತಾ ಮೋನಿಸ್ ಇವರ ಮಾರ್ಗದರ್ಶನ, ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ ಹಾಗೂ ಸರ್ವ ಸದಸ್ಯರು, ಪೋಷಕರ ಸಹಕಾರ ಹಾಗೂ ಚಿತ್ರಕಲಾ ಶಿಕ್ಷಕ ಜಗನ್ನಾಥ ಅರಿಯಡ್ಕರ ಸಂಯೋಜನೆಯಲ್ಲಿ ಮೂಡಿ ಬಂದ ಈ ಕುಂಚ ನರ್ತನ ಗಾನ ವಾದನ, ಚಿತ್ರ ಕುಣಿತಗಳೊಂದಿಗೆ ಜನರ ಮನಸ್ಸಿಗೆ ಮುದನೀಡಿತು. ಸುಮಾರು ೫೪ ಮಕ್ಕಳು ತಮ್ಮ ತಂಡದೊಂದಿಗೆ ಪ್ರದರ್ಶಿಸಿದ ಈ ಕಾರ್‍ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿ ಸುಧಾಂಶು ಆಚಾರ್ಯ ಸ್ಥಳದಲ್ಲಿ ಗಣಪತಿ ಹಾಗೂ ಶಾರದೆಯ ಬಹುವರ್ಣದ ಚಿತ್ರಣ ಬಿಡಿಸಿದರು ಇದಕ್ಕೆ ಹಿನ್ನಲೆಯಾಗಿ ಸಂಗೀತದಲ್ಲಿ ಸಂಜಯ್ ನೆಲ್ಲಿತ್ತಾಯ ,ಮೃದಂಗದಲ್ಲಿ ವಿಶ್ವಮಿಹಿರ, ತಬಲ ಕಶ್ಯಪ್, ಕೀಬೋರ್ಡ್ ಜಿತೇಶ್ ಸಹಕರಿಸಿದರು.

ತುಳುನಾಡಿನ ಹುಲಿ ಕುಣಿತ. ಸುಮಾರು ೧೧ ಮಕ್ಕಳ ನೈಜ ವರ್ಣದ ಹುಲಿವೇಷದ ಕುಣಿತ ಮನರಂಜಿಸಿತು. ಉತ್ತರ ಕರ್ನಾಟಕದ ವೀರಗಾಸೆ , ಅಬ್ಬರದ ತಾಸೆಯ ಪೆಟ್ಟು, ಅಚ್ಚುಕಟ್ಟಿನ ಒಡಪು ಹಾಗೂ ಲಯಬದ್ಧ ನರ್ತನಗಳೊಂದಿಗೆ ನಡೆದ ವೀರಭದ್ರನ ಕುಣಿತ ಸೇರಿದ ಜನ ಸಮೂಹಕ್ಕೆ ಹೊಸ ರಂಜನೆಯನ್ನು ನೀಡಿತು. ಶ್ರೀ ಹರಿಯ ದಶಾವತಾರ. ವಿಷ್ಣುವಿನ ವಿವಿಧ ಅವತಾರಗಳನ್ನು ಕೊಳಲನಾದದಲ್ಲಿ ೭ ಮಕ್ಕಳು ಪ್ರಸ್ತುತ ಪಡಿಸಿದ ರೀತಿ ಮನರಂಜನೀಯವಾಗಿತ್ತು.

ಸರಕಾರಿ ಶಾಲೆಯೊಂದರ ಮಕ್ಕಳು ಪ್ರದರ್ಶಿಸಿದ ಕುಂಚ ನರ್ತನ ಎಂಬ ಸಾಂಸ್ಕೃತಿಕ ಗುಚ್ಛ ಬಹಳ ಚೆನ್ನಾಗಿತ್ತು ಹಾಗೂ ಮೌಲ್ಯಭರಿತವಾಗಿತ್ತು. ಸರಕಾರಿ ಶಾಲೆಗಳ ಪ್ರತಿಭಾ ಶಕ್ತಿ ಏನೆಂಬುದನ್ನು ಕೊಂಬೆಟ್ಟು ಶಾಲಾ ಮಕ್ಕಳು ತೋರಿಸಿ ಕೊಟ್ಟಿದ್ದಾರೆ – ಚಂದ್ರಶೇಖರ ರೈ, ಅಧ್ಯಕ್ಷರು ನವರಾತ್ರಿ ಉತ್ಸವ ಸಮಿತಿ ಕೆಯ್ಯೂರು

ಸುಮಾರು ೨ ಗಂಟೆಗಳ ಕಾಲ ನಡೆದ ಈ ಕುಂಚ ನರ್ತನ ಕಾರ್ಯಕ್ರಮದಲ್ಲಿ ಮುಖ್ಯವಾಗಿ ಚಿತ್ರ ರಚನೆ, ವಾದನ, ಗಾಯನ ಕುಣಿತ, ಜನಪದ ನೃತ್ಯ, ಭಕ್ತಿ ನೃತ್ಯಗಳೊಂದಿಗೆ ಹಲವು ಕಾರ್ಯಕ್ರಮಗಳು ನಡೆಯಿತು. ಗಾಯನ, ವಾದನ, ಚಿತ್ರ, ಕುಣಿತ ಎಲ್ಲವೂ ಸರಕಾರಿ ಶಾಲೆಯೊಂದರ ಮಕ್ಕಳಿಂದಲೇ ಮೂಡಿಬಂತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.