Home_Page_Advt
Home_Page_Advt
Home_Page_Advt
Breaking News

ಅವೈಜ್ಞಾನಿಕ ರಸ್ತೆ ಕಾಮಗಾರಿಗಳು – ಆರೋಪ: ಅ.10ಕ್ಕೆ ನೆಲ್ಯಾಡಿಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ

ಪುತ್ತೂರು: ರಾಷ್ಟ್ರೀಯ ಹೆದ್ದಾರಿ 75ರಲ್ಲಿ ದ.ಕ.ಜಿಲ್ಲೆ ಶೀರಾಡಿ ಗ್ರಾಮದ ಅಡ್ಡಹೊಳೆ ಎಂಬಲ್ಲಿರುವ ಬಂಟ್ವಾಳ ತಾಲೂಕು ಬಿ.ಸಿರೋಡ್ ತನಕ ಕೈಗೆತ್ತಿಕೊಂಡ ರಸ್ತೆ ಕಾಮಗಾರಿಗಳು ತೀರಾ ಅವೈಜ್ಞಾನಿಕವಾಗಿದ್ದು, ಅಲ್ಲಲ್ಲಿ ದೊಡ್ಡ ಹೊಂಡಗಳು ನಿರ್ಮಾಣ ಆಗಿದ್ದು ಅದನ್ನು ದುರಸ್ಥಿಗೊಳಿಸಿದೆ ನಿತ್ಯ ಸಾರ್ವಜನಿಕರಿಗೆ, ವಾಹನ ಸವಾರರಿಗೆ ತೊಂದರೆ ಉಂಟಾಗುತ್ತಿದೆ ಎಂದು ನೆಲ್ಯಾಡಿಯ ರಾಷ್ಟ್ರೀಯ ಹೆದ್ದಾರಿ ೭೫ರ ಹೋರಾಟ ಸಮಿತಿ ಆರೋಪಿಸಿದ್ದು, ಆ.೧೦ರಂದು ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ನೆಲ್ಯಾಡಿ ರಾಷ್ಟ್ರೀಯ ಹೆದ್ದಾರಿ ೭೫ರ ಹೋರಾಟ ಸಮಿತಿ ಅಧ್ಯಕ್ಷ ಫಾ| ವರ್ಗೀಸ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಈಗಾಗಲೇ ಕೇಂದ್ರ ಸರಕಾರದಿಂದ ಚತುಷ್ಪತ ರಸ್ತೆಯಾಗಿ ಮಂಜೂರುಗೊಂಡಿರುವ ಈ ರಸ್ತೆಯಲ್ಲಿ ಬಹುತೇಕ ಭೂಸ್ವಾಧೀನ ಪ್ರಕ್ರಿಯೆ ಮುಗಿದಿದೆ. ಎಲ್.ಆಂಡ್ ಟಿ ಆವರಿಗೆ ರಸ್ತೆ ನಿರ್ಮಾಣದ ಗುತ್ತಿಗೆ ನೀಡಲಾಗಿದ್ದು, ಅವರು ಕಳೆದ ಮೂರು ವರ್ಷಗಳಿಂದ ರಸ್ತೆ ಬದಿಯಲ್ಲಿ ಯಾವುದೇ ತಾಂತ್ರಿಕ ರೂಪುರೇಷೆಗಳಿಲ್ಲದೆ ರಸ್ತೆ ಅಗೆದು ಹಾಕಿ. ಕಾಮಗಾರಿಯನ್ನೂ ನಿಲ್ಲಿಸಿದ್ದಾರೆ. ಇದರಿಂದಗಿ ಸಂಚಾರಕ್ಕೆ ಅಡ್ಡಿಯುಂಟಾಗಿದ್ದು, ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ತುರ್ತು ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಅನೇಕ ಮಂದಿ ವಾಹನ ಸವಾರರು ಬಿದ್ದು ತೀವ್ರ ಸ್ವರೂಪದ ಗಾಯಗಳಾಗಿವೆ. ಈ ಕುರಿತುಇ ಎಲ್.ಆಂಡ್ ಟಿ ಕಂಪೆನಿಯವರಿಗೆ, ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ನಮ್ಮ ಮನವಿಗೆ ಸ್ಪಂಧಿಸದೆ ಬೇಜವಾಬ್ದಾರಿಯಿಂದ ರಾಷ್ಟ್ರೀಯ ಹೆದ್ದಾರಿಯನ್ನು ದುಸ್ಥಿತಿಗೆ ತಲುಪಿಸಿದ್ದಾರೆ. ರಸ್ತೆ ಮಾರ್ಗ ಮಾಡಲು ಗುಡ್ಡ ಪ್ರದೇಶವನ್ನು ಅಗೆದ ಪರಿಣಾಮ ಗುಡ್ಡಕುಸಿತ ಕಾಣುತ್ತಿದೆ. ರಸ್ತೆಯ ಅಂಚಿನಲ್ಲಿರುವ ಮರಗಳು ರಸ್ತೆಗೆ ಉರುಳಿ ಬೀಳುತ್ತಿವೆ ಎಂದ ಅವರು ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳು ಯಾವುದೆ ಕ್ರಮ ಕೈಗೊಂಡಿಲ್ಲ. ಹಾಗಾಗಿ ನಾವು ಪ್ರತಿಭಟನೆ ಮಾರ್ಗ ಹಿಡಿದ್ದೇವೆ. ಇದು ರಾಜಕೀಯ ರಹಿತ ಪ್ರತಿಭಟನೆಯಾಗಿದ್ದು, ಸುಮಾರು ೧ ಗಂಟೆಗಳ ಕಾಲ ರಸ್ತೆ ತಡೆ ಮಾಡಲಿದ್ದೇವೆ ಸಂಬಂಧಪಟ್ಟ ಅಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಬಂದು ಸರಿಯಾದ ಮಾಹಿತಿ ನೀಡಬೇಕು. ಅಲ್ಲಿಯ ತನಕ ಪ್ರತಿಭಟನೆ ಕೈಬಿಡುವುದಿಲ್ಲ ಎಂದು ಹೇಳಿದರು.

23 ಸಂಘ ಸಂಸ್ಥೆಗಳು ಬೀದಿಗಿಳಿದು ಹೋರಾಟ:
ನೆಲ್ಯಾಡಿ ಭಾಗದ ಸುಮಾರು ೨೩ ಸಂಘ ಸಂಸ್ಥೆಗಳು ಬೀದಿಗಿಳಿದು ಹೋರಾಟ ನಡೆಸಲು ತೀರ್ಮಾನಿಸಿದ್ದೇವೆ ಎಂದು ನೆಲ್ಯಾಡಿ ಗ್ರಾ.ಪಂ ಮಾಜಿ ಅಧ್ಯಕ್ಷ ಜಯನಂದ ಅವರು ಹೇಳಿದರು. ಸುಮಾರು ಮೂರರಿಂದ ೫ಸಾವಿರದಷ್ಟು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಲಿದ್ದಾರೆ. ಪ್ರತಿಭಟನೆ ನಡೆಸುವ ಸ್ಥಳಕ್ಕೆ ಇಲಾಖಾ ಅಧಿಕಾರಿಗಳು ಬಂದು ರಸ್ತೆಯ ಕುರಿತು ಮಾಹಿತಿ ನೀಡಬೇಕು. ಅಲ್ಲಿಯ ತನಕ ಹೆದ್ದಾರಿ ಬಂದ್ ಮಾಡಲಾಗುವುದು. ಬೆಳಿಗ್ಗೆ ಗಂಟೆ ೧೦ಕ್ಕೆ ನೆಲ್ಯಾಡಿ ಗಾಂಧಿ ಮೈದಾನದಲ್ಲಿ ಸೇರಿ ಅಲ್ಲಿಂದ ಮೆರವಣಿಗೆ ಮೂಲಕ ನೆಲ್ಯಾಡಿ ಆಟೋ ನಿಲ್ದಾಣದಲ್ಲಿ ಸೇರಿ ಪ್ರತಿಭಟನೆ ನಡೆಸಲಾಗುವುದು. ಬಳಿಕ ಹೆದ್ದಾರಿ ಬಂದ್ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿಯ ಕಾರ್ಯದರ್ಶಿ ಜೋನ್ ಕೆ.ಜೆ, ವರ್ತಕ ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ ಹೆಚ್.ಇ, ಹೋರಾಟ ಸಮಿತಿಯ ಫಾ ಆದರ್ಶ್ ಜೋಸೆಫ್, ದ.ಕ.ನೀತಿ ಸಂಘಟನಾ ಕಾರ್ಯದರ್ಶಿ ಪ್ರಮೋದ್ ಅವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.