Home_Page_Advt
Home_Page_Advt
Home_Page_Advt
Breaking News

ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಮಾಡಿದ್ದ ಸಂಕಲ್ಪದಂತೆ ಬಿಜೆಪಿ ಕಾರ್ಯಕರ್ತ ಅವೀಕ್ಷಿತ್ ರೈಯವರಿಂದ ಶ್ರೀಕ್ಷೇತ್ರ ಹನುಮಗಿರಿಗೆ ಪಾದಯಾತ್ರೆ

ಕಾವು: ಕಳೆದ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಪೂರ್ಣ ಬಹುಮತ ಪಡೆಯಬೇಕು, ನರೇಂದ್ರ ಮೋದಿಯವರು 2ನೇ ಅವಧಿಗೆ ಪ್ರಧಾನಿಯಾಗಬೇಕು ಮತ್ತು ಮಂಗಳೂರು ಸಂಸದರಾಗಿ ನಳಿನ್ ಕುಮಾರ್ ಕಟೀಲ್‌ರವರು ಹ್ಯಾಟ್ರಿಕ್ ಜಯಗಳಿಸಬೇಕೆಂದು ಬಿಜೆಪಿ ಯುವ ಕಾರ್ಯಕರ್ತ ಅವೀಕ್ಷಿತ್ ರೈಯವರು ಮಾಡಿದ್ದ ಪಾದಯಾತ್ರೆಯ ಸಂಕಲ್ಪದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ಪಾದಯಾತ್ರೆ ಮಾಡಿ ಹರಕೆ ಸಮರ್ಪಿಸಿದ್ದು, ಅ.7ರಂದು ಶ್ರೀಕ್ಷೇತ್ರ ಹನುಮಗಿರಿಗೂ ಪಾದಯಾತ್ರೆಯ ಮೂಲಕ ಭೇಟಿ ನೀಡಿ ದೇವರ ದರ್ಶನ ಪಡೆದು ಹರಕೆ ಸಮರ್ಪಿಸಿದ್ದಾರೆ.

ಮೂಲತಃ ಮಂಗಳೂರಿನವರಾಗಿರುವ ಅವೀಕ್ಷಿತ್ ರೈಯವರು ಬಿಜೆಪಿಯ ಯುವ ಕಾರ್ಯಕರ್ತರಾಗಿದ್ದು ಕಳೆದ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷವು ಪೂರ್ಣ ಬಹುಮತ ಪಡೆದು ನರೇಂದ್ರ ಮೋದಿಯವರು ೨ನೇ ಅವಧಿಗೆ ಪ್ರಧಾನಿಯಾಗಬೇಕು ಮತ್ತು ಮಂಗಳೂರು ಸಂಸದರಾಗಿ ನಳೀನ್ ಕುಮಾರ್ ಕಟೀಲ್‌ರವರು ೩ನೇ ಬಾರಿಗೆ ಜಯಗಳಿಸಬೇಕೆಂದು ಪಾದಯಾತ್ರೆಯ ಸಂಕಲ್ಪ ಮಾಡಿದ್ದರು. ಚುನಾವಣೆ ಕಳೆದು ಫಲಿತಾಂಶ ಹೊರಬಿದ್ದಾಗ ಅವೀಕ್ಷಿತ್ ರೈಯವರ ಸಂಕಲ್ಪದಂತೆ ನಳೀನ್ ಕುಮಾರ್ ಕಟೀಲ್‌ರವರು ಹ್ಯಾಟ್ರಿಕ್ ಜಯಗಳಿಸಿ, ಬಿಜೆಪಿಯು ಪೂರ್ಣ ಬಹುಮತದೊಂದಿಗೆ ಮೋದಿಯವರು ೨ನೇ ಅವಧಿಗೆ ಪ್ರಧಾನಿ ಪಟ್ಟ ಅಲಂಕರಿಸಿದರು. ಇದೀಗ ತಾನು ಮಾಡಿದ ಸಂಕಲ್ಪದಂತೆ ವಿವಿಧ ಧಾರ್ಮಿಕ ಕ್ಷೇತ್ರಗಳಿಗೆ ನವರಾತ್ರಿಯ ಶುಭಸಂದರ್ಭದಲ್ಲಿ ಅ.೪ಂದು ಮಂಗಳೂರಿನಿಂದ ಪಾದಯಾತ್ರೆ ಆರಂಭಿಸಿದ ಅವೀಕ್ಷಿತ್ ರೈಯವರು ೩ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ವಿಜಯದಶಮಿಂದು ಪಾದಯಾತ್ರೆ ಸಮಾಪ್ತಿಗೊಳಿಸಿದ್ದಾರೆ. ಮೊದಲಿಗೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಸನ್ನಿಧಿಗೆ ಭೇಟಿ ನೀಡಿ ದರ್ಶನ ಪಡೆದು ಬಳಿಕ ಪೊಳಲಿ ಶ್ರೀ ರಾಜರಾಜೇಶ್ವರಿ ಅಮ್ಮನವರ ದರ್ಶನ ಪಡೆದರು.

ಶ್ರೀಕ್ಷೇತ್ರ ಹನುಮಗಿರಿಗೂ ಪಾದಯಾತ್ರೆಯ ಭೇಟಿ:
ಕಟೀಲು ಮತ್ತು ಪೊಳಲಿ ಅಮ್ಮನವರ ದರ್ಶನ ಪಡೆದ ಅವೀಕ್ಷಿತ್ ರೈಯವರು ಬಳಿಕ ಶ್ರೀಕ್ಷೇತ್ರ ಹನುಮಗಿರಿಗೂ ಪಾದಯಾತ್ರೆಯ ನಡೆಸಿ ಅ.7ರಂದು ಕ್ಷೇತ್ರಕ್ಕೆ ಆಗಮಿಸಿ ಶ್ರೀ ಪಂಚಮುಖಿ ಆಂಜನೇಯ ಮತ್ತು ಶ್ರೀ ಕೋದಂಡರಾಮ ದೇವರ ದರ್ಶನ ಪಡೆದು ತಮ್ಮ ಹರಕೆ ಸಮರ್ಪಿಸಿದರು.

ಗೌರವಾರ್ಪಣೆ:
ಪಾದಯಾತ್ರೆಯ ಮೂಲಕ ಹನುಮಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದ ಅವೀಕ್ಷಿತ್ ರೈಯವರಿಗೆ ಕ್ಷೇತ್ರದ ವತಿಯಿಂದ ಗೌರವಾರ್ಪಣೆ ಸಲ್ಲಿಸಲಾಯಿತು. ಆಂಜನೇಯನ ಸನ್ನಿಧಿಯಲ್ಲಿ ವಿಶೇಷ ರಂಗಪೂಜೆ ನಡೆಸಿ, ಪ್ರಾರ್ಥನೆ ಸಲ್ಲಿಸಿ, ದೇವರ ಪ್ರಸಾದ ನೀಡಿ ಗೌರವಿಸಲಾಯಿತು. ಶ್ರೀಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ ಮತ್ತು ಧರ್ಮದರ್ಶಿ ಶಿವರಾಮ ಪಿ.ರವರು ಅವೀಕ್ಷಿತ್ ರೈಯವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಾರ್ಪಣೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವೀಕ್ಷಿತ್ ರೈಯವರ ತಾಯಿ ಮತ್ತು ಮನೆಯವರು ಜತೆಗಿದ್ದರು. ಪರಮ ವೈಭವದ ಭಾರತಕ್ಕಾಗಿ, ಅಭಿವೃದ್ಧಿಯ ಭಾರತಕ್ಕಾಗಿ ಅವೀಕ್ಷಿತ್ ರೈಯವರಿಂದ ಇನ್ನಷ್ಟು ದೇಶಸೇವೆಯ, ರಾಷ್ಟ್ರಾಭಿಮಾನದ ಮನಸ್ಸು, ಸಂಕಲ್ಪಗಳು ಈಡೇರಲಿ, ಆ ಶಕ್ತಿಯನ್ನು ಆಂಜನೇಯ, ಕೋದಂಡರಾಮ ದೇವರು ಕರುಣಿಸಲಿ ಎಂದು ನನ್ಯ ಅಚ್ಚುತ ಮೂಡೆತ್ತಾಯರು ಶುಭಾಶೀರ್ವಾದ ಮಾಡಿದರು.

2014ರಲ್ಲೂ ಪಾದಯಾತ್ರೆ ಮಾಡಿದ್ದರು:
ಬಿಜೆಪಿ ಕಾರ್ಯಕರ್ತ ಅವೀಕ್ಷಿತ್ ರೈಯವರು ೨೦೧೪ರಲ್ಲೂ ಇದೇ ಮಾದರಿಯಲ್ಲಿ ಪಾದಯಾತ್ರೆಯ ಸಂಕಲ್ಪ ಮಾಡಿ ಹರಕೆ ಸಮರ್ಪಿಸಿದ್ದರು. ೨೦೧೪ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಮೊದಲ ಬಾರಿಗೆ ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿದ್ದಾಗ ಅವರು ಪೂರ್ಣಬಹುಮತದೊಂದಿಗೆ ಪ್ರಧಾನಿಯಾಬೇಕೆಂದು ಅವೀಕ್ಷಿತ್ ರೈಯವರು ಪಾದಯಾತ್ರೆಯ ಸಂಕಲ್ಪ ಮಾಡಿ, ಈ ಬಾರಿಯಂತೆ ೩ಕ್ಷೇತ್ರಗಳಿಗೂ ಪಾದಯಾತ್ರೆ ಮಾಡಿ ದೇವರ ದರ್ಶನ ಮಾಡಿ ಹರಕೆ ಸಮರ್ಪಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.