Home_Page_Advt
Home_Page_Advt
Home_Page_Advt
Breaking News

ದಿಲೀಪ್ ವೇದಿಕ್‌ಗೆ ಕಾವ್ಯಶ್ರೀ ಪ್ರಶಸ್ತಿ ಪ್ರದಾನ


ಕಡಬ: ಸುಳ್ಯ ಚಂದನ ಸಾಹಿತ್ಯ ವೇದಿಕೆ, ದ.ಕ.ಮಾನವರು ಸಹೋದರರು ಸೌಹಾರ್ದ ವೇದಿಕೆ, ಲಾಲ್ ಬಹುದ್ದೂರ್ ಶಾಸ್ತ್ರೀ ಸಾಂಸ್ಕೃತಿಕ ಮತ್ತು ಕಲಾ ಸಂಘ ಹಾಗೂ ಪುತ್ತೂರು ಸಾಹಿತ್ಯ ಇದರ ಆಶ್ರಯದಲ್ಲಿ ಕುಂಬ್ರದಲ್ಲಿ ನಡೆದ ಸ್ನೇಹ ಸಮ್ಮಿಲನ 2019 ಕಾರ್ಯಕ್ರಮದಲ್ಲಿ ನೂಜಿಬಾಳ್ತಿಲದ ದಿಲೀಪ್ ವೇದಿಕ್ ಅವರಿಗೆ ಕಾವ್ಯ ಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು.

ದಿಲೀಪ್ ವೇದಿಕ್‌ರವರು ನೂಜಿಬಾಳ್ತಿಲದ ಯುವ ಸಾಹಿತಿ, ರಾಜ್ಯ ಕವಿವೃಕ್ಷ ಬಳಗದ ದ.ಕ. ಜಿಲ್ಲಾಧ್ಯಕ್ಷರಾಗಿದ್ದಾರೆ. ಸುಳ್ಯ ಸಮಾಜ ಚಿಂತಕ ಜಗದೀಶ್ ಪಡ್ಪುರವರು ದಿಲೀಪ್‌ರವರಿಗೆ ಕಾವ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ಭ್ರಷ್ಟಚಾರ ನಿಗ್ರಹದಳ ಹಾಗೂ ಅಪರಾಧ ಪತ್ತೆದಳದ ಅಧಿಕಾರಿ ಪ್ರಶಾಂತ್ ರೈ ಮರವಂಜ ಅಧ್ಯಕ್ಷತೆ ವಹಿಸಿದ್ದರು. ಮಾನವರು ಸಹೋದರರು ಸೌಹಾರ್ದ ವೇದಿಕೆ ಅಧ್ಯಕ್ಷ ಕೆ.ಎ. ಅಬ್ದುಲ್ ಅಝೀಝ್ ಪುಣಚ, ಕುಂಬ್ರ ಶಾರದಾ ವಿದ್ಯಾಲಯದ ಸಂಚಾಲಕಿ ಶಾರದಾ, ಸತ್ಯ ಶಾಂತ ಪ್ರತಿಷ್ಠಾನದ ಅಧ್ಯಕ್ಷ ಶಾಂತಾ ಕುಂಠಿಣಿ, ಯುವ ಲೇಖಕ ಮುಹಮ್ಮದ್ ಹಾರಿಸ್, ಜನನಿ ಸಾಹಿತ್ಯ ವೇದಿಕೆ ರಾಜ್ಯಾಧ್ಯಕ್ಷ ವಿಜಯ್‌ದಾಸ್ ನವಲಿ, ಯುವಕವಿ ಅನ್ಸಾರ್ ಕಾಟಿಪಳ್ಳ, ಯುವ ಉದ್ಯಮಿ ಸಂಶುದ್ಧೀನ್ ಎ.ಆರ್., ಚಂದನ ಸಾಹಿತ್ಯ ವೇದಿಕೆ ಅಧ್ಯಕ್ಷ ಎಚ್.ಭೀಮರಾವ್ ವಾಷ್ಠರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.