Home_Page_Advt
Home_Page_Advt
Home_Page_Advt
Breaking News

ನೆಹರು ನಗರ ನಿವಾಸಿ ಜನಾರ್ದನ ಪೂಜಾರಿ ನಿಧನ

ಪುತ್ತೂರು:  ನೆಹರು ನಗರ ರಕ್ತೇಶ್ವರಿ ವಠಾರ  ನಿವಾಸಿ ಜನಾರ್ದನ ಪೂಜಾರಿ (ವ79) ವರು ಅ.8 ರಂದು ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಮೃತರು ಟ್ಯಾಂಕರ್ ಚಾಲಕರಾಗಿದ್ದು, ಕೆಲವು ವರ್ಷಗಳ ಹಿಂದೆ ನಿವೃತ್ತಿ ಜೀವನ ಸಾಗಿಸುತ್ತಿದ್ದರು. 

ಮೃತರ ಮನೆಗೆ ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ  ಶಕುಂತಲಾ ಟಿ ಶೆಟ್ಟಿ, ಮಾಜಿ ನಗರಸಭಾ ಸದಸ್ಯ ಸೋಮಪ್ಪ ಸಪಲ್ಯ, ನಗರಸಭಾ ಸದಸ್ಯ ಶಿವರಾಮ ಸಪಲ್ಯ, ರಕ್ತೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಶಶಿಧರ ಸಪಲ್ಯ, ಶ್ಯಾಂ ಪ್ರಸಾದ್, ಸುದರ್ಶನ್ ಮುರ, ನವೀನ್ ನಾಯ್ಕ್, ಸಂದೇಶ್ , ಶಿವಪ್ರಸಾದ್ ಸೇರಿದಂತೆ ಹಲವು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

ಮೃತರು ಪತ್ನಿ ಯಮುನಾ, ಮೂರು ಹೆಣ್ಣು ಮಕ್ಕಳು, ಎರಡು ಗಂಡು ಮಕ್ಕಳು, ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳನ್ನು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ. 

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.