Home_Page_Advt
Home_Page_Advt
Home_Page_Advt
Breaking News

ಪ.ಪೂ ಕಾಲೇಜುಗಳ ತಾ|ಮಟ್ಟದ ಕ್ರೀಡಾಕೂಟ: ಫಿಲೋಮಿನಾದ ವಿನೀತ್, ಪ್ರಣಮ್ಯ, ನೇಹರವರಿಗೆ ವೈಯಕ್ತಿಕ ಪ್ರಶಸ್ತಿ

ಪುತ್ತೂರು: ಶ್ರೀ ಸೀತಾರಾಘವ ಪದವಿ ಪೂರ್ವ ಕಾಲೇಜು ಪೆರ್ನಾಜೆ ಇದರ ಆಶ್ರಯದಲ್ಲಿ ಪುತ್ತೂರಿನ ಕೊಂಬೆಟ್ಟು ಕ್ರೀಡಾಂಗಣದಲ್ಲಿ ಜರಗಿದ ಪದವಿ ಪೂರ್ವ ಕಾಲೇಜುಗಳ ಪುತ್ತೂರು ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಬಾಲಕರ ಹಾಗೂ ಬಾಲಕಿಯರ ತಂಡಗಳೆರಡೂ ಸಮಗ್ರ ಚಾಂಪಿಯನ್ ಪ್ರಶಸ್ತಿಯನ್ನು ಪಡೆದಿದ್ದು, ಕಾಲೇಜಿನ ವಿನೀತ್ ಜಿ.ಆರ್ ಬಾಲಕರ ವಿಭಾಗದಲ್ಲಿ ಮತ್ತು ಬಾಲಕಿಯರ ವಿಭಾಗದಲ್ಲಿ ನೇಹ ಹಾಗೂ ಪ್ರಣಮ್ಯ ಶೆಟ್ಟಿ ಹೊಸ ವೈಯಕ್ತಿಕ ಚಾಂಪಿಯನ್‌ಗಳಾಗಿ ಮೂಡಿ ಬಂದಿದ್ದಾರೆ.

ಬಾಲಕರ ವಿಭಾಗದಲ್ಲಿ ಪ್ರಥಮ ವಾಣಿಜ್ಯ ವಿಭಾಗದ ವಿದ್ಯಾರ್ಥಿ ವಿನೀತ್ ಜಿ.ಆರ್.ರವರು ಹ್ಯಾಮರ್ ಎಸೆತದಲ್ಲಿ ಚಿನ್ನ, ಡಿಸ್ಕಸ್ ಎಸೆತದಲ್ಲಿ ಚಿನ್ನ, ಶಾಟ್‌ಫುಟ್‌ನಲ್ಲಿ ಬೆಳ್ಳಿ, ಬಾಲಕಿಯರ ವಿಭಾಗದಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಪ್ರಣಮ್ಯ ಶೆಟ್ಟಿರವರು ಡಿಸ್ಕಸ್ ಎಸೆತದಲ್ಲಿ ಚಿನ್ನ, ಜಾವೆಲಿನ್ ಎಸೆತದಲ್ಲಿ ಚಿನ್ನ, ಶಾಟ್‌ಫುಟ್‌ನಲ್ಲಿ ಚಿನ್ನ ಹಾಗೂ ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ನೇಹಾರವರು ೧೦೦ಮೀ, ೨೦೦ಮೀ ಓಟದಲ್ಲಿ ಚಿನ್ನ, ತ್ರಿವಿಧ ಜಿಗಿತದಲ್ಲಿ ಚಿನ್ನ, ೪*೪೦೦ಮೀ ರಿಲೇಯಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದಾರೆ.

ವಿನೀತ್ ಜಿ.ಆರ್‌ರವರು ಪರ್ಲಡ್ಕ ಬಾಲವನ ಬಳಿಯ ನಿವಾಸಿ ರಾಮಚಂದ್ರ ಜಿ ಹಾಗೂ ಸುನೀತಾ ಎಂ.ರವರ ಪುತ್ರ. ಪ್ರಣಮ್ಯರವರು ಕೈಕಾರ ನಿವಾಸಿ ಗಂಗಾಧರ ಶೆಟ್ಟಿ ಹಾಗೂ ಶುಭಲಕ್ಷ್ಮಿ ಶೆಟ್ಟಿರವರ ಪುತ್ರಿ. ನೇಹರವರು ದರ್ಬೆ ಸುಧಾಮೆ ಪಾಂಗಳಾಯ ನಿವಾಸಿ ಬಾಲಕೃಷ್ಣ ಎಂ ಹಾಗೂ ಕುಸುಮಾವತಿರವರ ಪುತ್ರಿಯಾಗಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲ ವಂ|ವಿಜಯ್ ಲೋಬೋ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಪ್ರಕಾಶ್ ಡಿ’ಸೋಜ, ರಾಜೇಶ್ ಮೂಲ್ಯರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.