Home_Page_Advt
Home_Page_Advt
Home_Page_Advt
Breaking News

ಉಪ್ಪಿನಂಗಡಿ-ದುರ್ಗಾಗಿರಿಯ ಶ್ರೀ ದುರ್ಗಾ ಭಜನಾ ಮಂದಿರದಲ್ಲಿ ನವರಾತ್ರಿ ಉತ್ಸವ

 
ಉಪ್ಪಿನಂಗಡಿ: ಶ್ರೀ ದುರ್ಗಾ ಭಜನಾ ಮಂದಿರದ ದುರ್ಗಾಗಿರಿಯಲ್ಲಿ ಸೆಪ್ಟೆಂಬರ್ 29ರಿಂದ ಆಕ್ಟೋಬರ್ 8ರವರೆಗೆ ನವರಾತ್ರಿ ಭಜನಾ ಸೇವೆಯು ನಡೆಯಿತು. ಭೀಮ್ ಭಟ್ ಅರ್ತಿಲ, ರಾಜೀವ್ ಹೆಗ್ಡೆ ನಿನ್ನಿಕಲ್ಲು, ಕೃಷ್ಣಪ್ಪ ಕುಲಾಲ್ ಅರ್ತಿಲ, ಶೀನಪ್ಪ ನಾಯ್ಕ್ ಅರ್ತಿಲ, ವಿಶ್ವನಾಥ್ ಶೆಟ್ಟಿ ಕಂಗ್ವೆ, ಲೋಕೇಶ್ ಬೆತ್ತೋಡಿ, ಪದ್ಮನಾಭ ಸಂಕೇಶ, ವೆಂಕಟರಮಣ ಭಟ್ ಪಾತಾಳ, ಭಾಸ್ಕರ್ ಕುಲಾಲ್ ನೂಜಿ, ಧರ್ಣಪ್ಪ ಗೌಡ ಮತ್ತು ಹೊನ್ನಪ್ಪ ಗೌಡ ವರೆಕ್ಕ, ವಿಘ್ನೇಶ್ವರ ಭಟ್ ನೂಜಿ, ಸಂಕಪ್ಪ ಗೌಡ ನೂಜಿ, ಶ್ರೀ ದುರ್ಗಾ ಯುವಕ ಮಂಡಲದ ಸದಸ್ಯರಿಂದ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು, ಸ್ವ-ಸಹಾಯ ಸಂಘಗಳಾದ ಸಹಸ್ರಲಿಂಗೇಶ್ವರ, ಸಹಸ್ರ, ದುರ್ಗಾಪರಮೇಶ್ವರಿ, ದುರ್ಗಾಶ್ರೀ, ನಾಗಶ್ರೀ, ಮಹಾಗಣಪತಿ, ಮಹಾಕಾಳಿ, ಮಾತೃಶ್ರೀ, ಅಂಬಿಕೆ ಮತ್ತು ದುರ್ಗಾಗಿರಿ ತಂಡಗಳ ಸದಸ್ಯರಿಂದ ಭಜನಾ ಸೇವೆಗಳು ನಡೆಯಿತು.

ಶ್ರೀ ದುರ್ಗಾ ಯುವಕ ಮಂಡಲ ದುರ್ಗಾಗಿರಿ ಸದಸ್ಯರ ನೇತೃತ್ವದಲ್ಲಿ ಮಂದಿರದ ವಠಾರದಲ್ಲಿ ವಾಹನಗಳಿಗೆ ಆಯುಧ ಪೂಜೆ ನಡೆಯಿತು. ವಿಜಯದಶಮಿಯಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಗತಿ ಬಂಧು, ಸ್ವ-ಸಹಾಯ ಸಂಘಗಳ ಸದಸ್ಯರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.