Home_Page_Advt
Home_Page_Advt
Home_Page_Advt
Breaking News

ಎಪ್ರಿಲ್ 2020: ಶಾಂತಿಮೊಗರು ದೇವಸ್ಥಾನದ ಬ್ರಹ್ಮಕಲಶೋತ್ಸವ-ಸತೀಶ್ ಕುಮಾರ್

ಚಿತ್ರ/ವರದಿ: ಉಮಾಪ್ರಸಾದ್ ರೈ ನಡುಬೈಲು

 
ಪುತ್ತೂರು: 2020 ಎಪ್ರಿಲ್ ತಿಂಗಳಲ್ಲಿ 5 ದಿವಸಗಳ ಕಾಲ ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್‍ಯಕ್ರಮ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ತಿಳಿಸಿದರು.

ಅವರು ಅ. 6 ರಂದು ಶಾಂತಿಮೊಗರು ದೇವಾಲಯದ ವಠಾರದಲ್ಲಿ ದೇವಾಲಯದ ಬ್ರಹ್ಮಕಲಶೋತ್ಸವದ ಬಗ್ಗೆ ಜರಗಿದ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿ 2002ರಲ್ಲಿ ದೇವಾಲಯವು ಜೀರ್ಣೋದ್ಧಾರಗೊಂಡು, ಬ್ರಹ್ಮಕಲಶೋತ್ಸವ ನಡೆಯಿತು. ಇದೀಗ 18 ವರ್ಷಗಳ ಬಳಿಕ ಮತ್ತೇ ದೇವಾಲಯದ ಬ್ರಹ್ಮಕಲಶೋತ್ಸವ ನಡೆಯಲಿದೆ. ಬ್ರಹ್ಮಕಲಶೋತ್ಸವದ ಈ ಸಂದರ್ಭದಲ್ಲಿ ದೇವಾಲಯದ ವಿವಿಧ ಅಭಿವೃದ್ಧಿ ಕಾರ್‍ಯಗಳು ನಡೆಯಲಿದೆ. ದೇವಾಲಯದ ಸುತ್ತುಪೌಳಿಗೆ ಗ್ರಾನೈಟ್ ಅಳವಡಿಕೆ, ಎರಡು ಪಾಕಶಾಲೆ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸ ನಡೆಯಲಿದೆ.

ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಗೊಂಡ ಸವಣೂರು ಕೆ.ಸೀತಾರಾಮ ರೈಯವರು ಬ್ರಹ್ಮಕಲಶೋತ್ಸವ ಸಮಿತಿಗೆ ತನ್ನನ್ನು ಅಧ್ಯಕ್ಷರಾಗಿ ಅಯ್ಕೆಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ವೇದಿಕೆಯಲ್ಲಿ ಆಡಳಿತ ಸಮಿತಿಯ ಪ್ರಧಾನ ಕಾರ್‍ಯದರ್ಶಿ ಮದನ ಪೂಜಾರಿ ಕುದ್ಮಾರು, ದೇವಾಲಯ ಪ್ರಧಾನ ಅರ್ಚಕ ರಮಾನಂದ ಭಟ್, ಆಡಳಿತ ಸಮಿತಿಯ ಸದಸ್ಯರಾದ ರಾಮಯ್ಯ ಗೌಡ ನೂಜಿ, ಮೋಹಿನಿ ಪಿ.ಶೇಣವ, ನಿಟ್ಟೋಣಿ ಕೆಡೆಂಜಿ ಉಪಸ್ಥಿತರಿದ್ದರು. ಚೆನ್ನಪ್ಪ ಗೌಡ ನೂಜಿ, ಸತ್ಯನಾರಾಯಣ ಗೌಡ, ಲೋಕೇಶ್ ಬಿ.ಎನ್. ಬರೆಪ್ಪಾಡಿ, ತಾರಾನಾಥ ರೈ ನಗ್ರಿ, ಚಂದ್ರಶೇಖರ್ ಗೌಡ ಬರೆಪ್ಪಾಡಿ, ಜನಾರ್ಧನ ಗೌಡ ಕೂರ, ಮೇದಪ್ಪ ಗೌಡ ಕೂವೆತ್ತೋಡಿ, ದೇವರಾಜ್ ನೂಜಿರವರುಗಳು ಸಲಹೆ-ಸೂಚನೆ ನೀಡಿದರು.

ಸಭೆಯಲ್ಲಿ ವೆಂಟೇಶ್ ಭಟ್ ಕೊಯಕುಡೆ, ಜತ್ತಪ್ಪ ರೈ ಬರೆಪ್ಪಾಡಿ, ಐತ್ತಪ್ಪ ಗೌಡ ಕೂವೆತ್ತೋಡಿ, ಸುಂದರ ಗೌಡ ಡೆಬ್ಬೇಲಿ, ರವಿಕುಮಾರ್, ಸುಬ್ರಾಯ ಗೌಡ, ಕೆ.ಶಿವಪ್ಪ ಪೂಜಾರಿ, ಗೋಪಾಲಕೃಷ್ಣ, ಉಮೇಶ್ ಕೆರೆನಾರು, ವಿಶ್ವನಾಥ ಗೌಡ, ಶಿವಾನಂದ ಕೆ, ದಾಮೋದರ ನಾಕಿರಣ, ಬಾಲಕೃಷ್ಣ ಗೌಡ, ಉಮೇಶ್ ಸುಣ್ಣಾಜೆ, ಲವಕುಮಾರ್ ನೂಜಿ, ವಸಂತ ಕಾರ್ಲಾಡಿ, ವೆಂಕಪ್ಪ ಎರ್ಕಮೆ, ಮಹಾಬಲ ಎನ್, ಚಂದ್ರ ಗೌಡ ತೆಕ್ಕಿತಡಿ, ಬೆಳಿಯಪ್ಪ ಗೌಡ ತಾರಿತ್ತಾಡಿ, ಶಿವಪ್ಪ ಗೌಡ ಕಾಪೆಜಾಲು, ಕುಶಾಲಪ್ಪ ಗೌಡ, ಲಿಂಗಪ್ಪ ಗೌಡ, ಮೋನಪ್ಪ ಗೌಡ, ಆನಂದ ಗೌಡ ಅನ್ಯಾಡಿ, ಶಿವಪ್ರಸಾದ್, ಸೋಮಪ್ಪ ಗೌಡ, ದೇವಪ್ಪ ಗೌಡ, ಕೆ.ಮಾಧವ, ಮಾಯಿಲಪ್ಪ ಗೌಡ, ಬಾಲಚಂದ್ರ, ಪವನ್, ರವಿನಾಯ್ಕ ಎರ್ಕಮೆ, ಯತೀಶ್ ನಡುಮನೆ, ಜನಾರ್ಧನ ಎರ್ಕಮೆ, ಸಂಜೀವ ಗೌಡ ಕಾಪೆಜಾಲು, ವಿಶಾಲಾಕ್ಷ, ವಿಜಯ ಕುಮಾರ್, ತಾರಾನಾಥ ಕುದ್ಮಾರು, ಚಂದಪ್ಪ ಕೂರ, ವಿಮಲ ಅನ್ಯಾಡಿ, ಪುಷ್ಪಲತಾ, ಚಂದ್ರಶೇಖರ್ ಹೊಸವೊಕ್ಲು, ದಿವಾಕರ ಅರುವಾರ, ರವಿಕುಮಾರ್ ನಡುಮನೆ, ಭರತ್ ಕುಮಾರ್ ನಡುಮನೆ, ಪವನ್ ಕುಮಾರ್ ಸೌತೆಮಾರು, ಬಾಬು ಪೂಜಾರಿ ಕೆಲೆಂಬೇರಿ, ಜಗದೀಶ್ ಕೆಲೆಂಬರಿ, ಸಂದೇಶ್ ಕುಮಾರ್ ಸೌತೆಮಾರ್, ಯೋಗೀಶ್ ಬರೆಪ್ಪಾಡಿ, ಉಮೇಶ್ ಕಾರ್ಲಾಡಿ, ದೀಕ್ಷಿತ್, ಉಮಾಪ್ರಸಾದ್ ರೈ ನಡುಬೈಲು, ರಾಮಚಂದ್ರ ಬರೆಪ್ಪಾಡಿ ಸಹಿತ ಅನೇಕ ಮಂದಿ ಭಾಗಹಿಸಿದರು. ಆಡಳಿತ ಸಮಿತಿಯ ಜೊತೆ ಕಾರ್‍ಯದರ್ಶಿ ಶೂರಪ್ಪ ಗೌಡ ಪಟ್ಟೆತ್ತಾನ ವಂದಿಸಿದರು.

ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಸವಣೂರು ಕೆ.ಸೀತಾರಾಮ ರೈ, ಕಾರ್‍ಯದರ್ಶಿಯಾಗಿ ವೆಂಕಟೇಶ್ ಭಟ್ ಕೊಯಕುಡೆ, ಉಪಾಧ್ಯಕ್ಷರುಗಳಾಗಿ ನರಸಿಂಹ ಪ್ರಸಾದ್ ಪಾಂಗಾಣ್ಣಾಯ ಕೂವೆತ್ತೋಡಿ, ಚಂದ್ರಶೇಖರ್ ರಾಶಿ ಕಾಂಪ್ಲೆಕ್ಸ್ ಬರೆಪ್ಪಾಡಿ, ಜೊತೆ ಕಾರ್‍ಯದರ್ಶಿಯಾಗಿ ಭರತ್ ಕುಮಾರ್ ನಡುಮನೆ ಹಾಗೂ ಕೋಶಾಧಿಕಾರಿಯಾಗಿ ಯಶೋಧರ ಕೆಡೆಂಜಿರವರುಗಳು ಆಯ್ಕೆಯಾದರು, ಈ ಸಂದರ್ಭದಲ್ಲಿ ಸ್ವಾಗತ ಸಮಿತಿ, ವಿವಿಧ ಸಮಿತಿಗಳನ್ನು ರಚನೆಮಾಡಲಾಯಿತು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.