Home_Page_Advt
Home_Page_Advt
Home_Page_Advt
Breaking News

ದರ್ಬೆತ್ತಡ್ಕ ಅಯಪ್ಪ ಭಜನಾ ಮಂದಿರದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ

ಪುತ್ತೂರು:  ದರ್ಬೆತ್ತಡ್ಕ ಶ್ರೀ ಅಯಪ್ಪ ಭಜನಾ ಮಂದಿರದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿಯ ಪೂರ್ವಭಾವಿ ಸಭೆ ದರ್ಬೆತ್ತಡ್ಕ ಸ.ಉ.ಹಿ. ಪ್ರಾ. ಶಾಲೆಯಲ್ಲಿ ಅ. 6ರಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ  ಬಾಲಕೃಷ್ಣ ರೈ ಸೇರ್ತಾಜೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

ಡಿ. 5 ಮತ್ತು6ರಂದು ನಡೆಯಲಿರುವ ಪುನಃ ಪ್ರತಿಷ್ಠೆಯ ವಿವಿಧ ಸಮಿತಿಗಳ ಸಂಚಾಲಕರು ಮತ್ತು ಸದಸ್ಯರ ವಿವರ ನೀಡಲಾಯಿತು. ಬ್ರಹ್ಮಕಲಶ ಸಮಿತಿ ಕಾರ್ಯದರ್ಶಿ ಪ್ರಕಾಶ್ಚಂದ್ರ ರೈ ಕೈಕಾರ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹರಿನಾರಾಯಣ ಎಂ, ಕಾರ್ಯದರ್ಶಿ ವಾಸು ಮಣಿಯಾಣಿ ಕುರಿಂಜ , ಉಪಾಧ್ಯಕ್ಷ ಶ್ರೀಧರ ಮಣಿಯಾಣಿ ಪೊನ್ನೆತ್ತಳ್ಕ , ಗೌರವ ಸಲಹೆಗಾರ ತಾರಾನಾಥ ರೈ ಸೇರ್ತಾಜೆ, ಶಾಲಾ ಮುಖ್ಯಗುರು ಯು.ಬಿ. ಚರುಂಬ, ಎಸ್.ಡಿ.ಎಂ.ಸಿ. ಅಧ್ಯಕ್ಷ ಕೊರಗಪ್ಪ ನಾಯ್ಕ, ಗ್ರಾ.ಪಂ. ಸದಸ್ಯ ಸದಾನಂದ ಮಣಿಯಾಣಿ, ಡಾ| ಅನಿಲ್ ಕುಮಾರ್ ರೈ ದರ್ಬೆ, ಪ್ರೊಫೆಸರ್ ಶಿವಕುಮಾರ್ ಜಿ.ಎಸ್, ಸಚಿನ್ ರೈ ಪಾಪೆಮಜಲು, ಸಮಿತಿಯ ಪ್ರಧಾನ ಸಂಚಾಲಕ ನಾಗೇಶ್ ಮಣಿಯಾಣಿ ಕೊಪ್ಪಳ ಉಪಸ್ಥಿತರಿದ್ದರು. ಹರಿನಾರಾಯಣ ಎಂ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಯಪ್ಪ ಭಕ್ತ ಸಮಿತಿಯ ಅಧ್ಯಕ್ಷ ಶಿವರಾಮ ಮಣಿಯಾಣಿ ಸ್ವಾಗತಿಸಿ, ವಾಸು ಮಣಿಯಾಣಿ ವಂದಿಸಿದರು. ಶಿಕ್ಷಕ ವಿಶ್ವನಾಥ ಗೌಡ ಬೊಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.