Home_Page_Advt
Home_Page_Advt
Home_Page_Advt
Breaking News

ಉಪ್ಪಿನಂಗಡಿ 25ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಾಪನ, ಶೋಭಾಯಾತ್ರೆ

ಉಪ್ಪಿನಂಗಡಿ: ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಉಪ್ಪಿನಂಗಡಿ ಇದರ ವತಿಯಿಂದ ೨೫ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಕಾರ್‍ಯಕ್ರಮ 5 ದಿನಗಳ ಕಾಲ ವಿವಿಧ  ಧಾರ್ಮಿಕ, ಸಾಂಸ್ಕೃತಿಕ ಕಾರ್‍ಯಕ್ರಮಗಳೊಂದಿಗೆ ನಡೆದು ಅ. ೮ರಂದು ರಾತ್ರಿ ಶೋಭಾ ಯಾತ್ರೆಯೊಂದಿಗೆ ಸಮಾಪನಗೊಂಡಿತು.

ಅ. ೮ ಸಮಾಪನ ದಿವಸದಂದು ಬೆಳಿಗ್ಗೆ ಶ್ರೀ ದೇವಿಯ ಮುಂದೆ ೩ ವರ್ಷ ಮೇಲ್ಪಟ್ಟ ಮಕ್ಕಳಿಗೆ ಪ್ರಥಮ ಅಕ್ಷರ ಅಭ್ಯಾಸ ಕಲಿಕೆ, ಮಧ್ಯಾಹ್ನ ಪೂಜೆ, ದೇವಳದ ವತಿಯಿಂದ ಸಾರ್ವಜನಿಕ ಅನ್ನ ಸಂತರ್ಪಣೆ, ಈ ಮಧ್ಯೆ ವಿವಿಧ ಭಜನಾ ತಂಡದಿಂದ ಭಜನಾ ಕಾರ್‍ಯಕ್ರಮ ನಡೆಯಿತು.

ಆಕರ್ಷಕ ಶೋಭಾ ಯಾತ್ರೆ:
ಸಂಜೆಯ ಬಳಿಕ ಶ್ರೀ ಶಾರದಾ ದೇವಿಯ ಶೋಭಾ ಯಾತ್ರೆ ನಡೆಯಿತು. ರಾಮನಗರದಿಂದ ಹೊರಟ ಮೆರವಣಿಗೆ ಗಾಂಧಿಪಾರ್ಕ್, ಬ್ಯಾಂಕ್ ರಸ್ತೆಗಾಗಿ ಹಳೆ ಬಸ್ಟೇಂಡ್, ಹೊಸ ಬಸ್ ನಿಲ್ದಾಣ ವೃತ್ತ, ರಥಬೀದಿಯಾಗಿ ಸಾಗಿ ಸಂಗಮ ಕ್ಷೇತ್ರದಲ್ಲಿ ಶ್ರೀ ಶಾರದಾ ದೇವಿಯ ವಿಗ್ರಹ ಜಲಸ್ತಂಭನ ಮಾಡಲಾಯಿತು. ಅರ್ಚಕ ಸುಬ್ರಹ್ಮಣ್ಯ ಭಟ್ ಪೂಜಾ ವಿಧಿ ವಿಧಾನ ನೆರವೇರಿಸಿದರು.

ಮೆರವಣಿಗೆಯಲ್ಲಿ ಭಜನೆ, ನಾಸಿಕ್ ಬೇಂಡ್, ಸ್ತಬ್ಧ ಚಿತ್ರ, ಹುಲಿ ವೇಷ, ತಾಲೀಮು ಪ್ರದರ್ಶನ ಆಕರ್ಷಕವಾಗಿತ್ತು. ಗಾಂಧಿ ಪಾರ್ಕ್ ಬಳಿ ಬಾನಂಗಳದಲ್ಲಿ ವಿಶೇಷ ಸುಡುಮದ್ದು ಪ್ರದರ್ಶನ ನಡೆಯಿತು. ಮೆರವಣಿಗೆಯ ಉದ್ದಕ್ಕೂ ರಸ್ತೆ ಬದಿಯಲ್ಲಿ ಮನೆ ಮಂದಿ ಶ್ರೀ ದೇವಿಗೆ ಆರತಿ ಬೆಳಗಿ ಪುನೀತರಾದರು.

ಮೆರವಣಿಗೆಯಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ರಾಮಚಂದ್ರ ಮಣಿಯಾಣಿ, ಪದಾಧಿಕಾರಿಗಳಾದ ಎನ್. ಉಮೇಶ್ ಶೆಣೈ, ಅಶೋಕ್ ರೈ ನೆಕ್ಕರೆ, ರಾಜಗೋಪಾಲ ಹೆಗ್ಡೆ, ಪುಷ್ಪರಾಜ್ ಶೆಟ್ಟಿ, ಚಂದ್ರಶೇಖರ ಮಡಿವಾಳ, ತಾಲ್ಲೂಕು ಪಂಚಾಯಿತಿ ಸದಸ್ಯೆ ಶ್ರೀಮತಿ ಸುಜಾತಕೃಷ್ಣ, ಸ್ಥಳೀಯ ಪ್ರಮುಖರಾದ ಯು. ರಾಮ, ಜಯಂತ ಪೊರೋಳಿ ಮೊದಲಾದವರು ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.