Home_Page_Advt
Home_Page_Advt
Home_Page_Advt
Breaking News

ಅ.10: ಸವಣೂರಿನಲ್ಲಿ ರಕ್ತದಾನ ಶಿಬಿರ


ಸವಣೂರು: ಧ್ವನಿ,ಬೆಳಕು ಮತ್ತು ಶಾಮಿಯಾನ ಸಂಯೋಜಕರ ಒಕ್ಕೂಟ ಪುತ್ತೂರು, ರೋಟರ್ಯಾಕ್ಟ್ ಕ್ಲಬ್ ಸ.ಪ್ರಥಮ ದರ್ಜೆ ಕಾಲೇಜು ಬೆಳಂದೂರು,ಶ್ರೀ ಕ್ಲಿನಿಕಲ್ ಲ್ಯಾಬೋರೇಟರಿ ಸವಣೂರು ಇವುಗಳ ಸಂಯುಕ್ತ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇದರ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಮತ್ತು ವರ್ಗೀಕರಣ ಶಿಬಿರ ಅ.10ರಂದು ನಡೆಯಲಿದೆ.

ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಕೆ.ಸೀತಾರಾಮ ರೈ ಉದ್ಘಾಟಿಸುವರು. ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು ಅಧ್ಯಕ್ಷತೆ ವಹಿಸುವರು. ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇದರ ವೈದ್ಯಾಧಿಕಾರಿ ಡಾ.ರಾಮಚಂದ್ರ ಭಟ್ ಮಾಹಿತಿ ನೀಡುವರು.

ಅತಿಥಿಗಳಾಗಿ ಧ್ವನಿವರ್ದಕ ಮತ್ತು ದೀಪಾಲಂಕಾರ ಮ್ಹಾಲಕರ ಸಂಘದ ಜಿಲ್ಲಾಧ್ಯಕ್ಷ ರಾಜಶೇಖರ ಶೆಟ್ಟಿ ಕುಡ್ತಮುಗೇರು,ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕ ಗಿರಿಶಂಕರ ಸುಲಾಯ,ಜನಜಾಗೃತಿ ವೇದಿಕೆಯ ಸವಣೂರು ವಲಯದ ಮಾಜಿ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ,ಸವಣೂರು ಯುವಕ ಮಂಡಲದ ಅಧ್ಯಕ್ಷ ತಾರಾನಾಥ ಸವಣೂರು,ಸವಣೂರು ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅರ್ತಿಕೆರೆ,ಧ್ವನಿ,ಬೆಳಕು ಮತ್ತು ಶಾಮಿಯಾನ ಸಂಯೋಜಕರ ಪುತ್ತೂರು ತಾ.ಒಕ್ಕೂಟದ ಗೌರವಾಧ್ಯಕ್ಷ ಹೆನ್ರಿ ಡಿಸೋಜ,ಅನ್ವರ್ ವೆರೈಟಿ ಕಡಬ ,ಬೆಳಂದೂರು ಕಾಲೇಜಿನ ಪ್ರಾಚಾರ್ಯೆ ಪ್ರೋ.ಪದ್ಮನಾಭ ಕೆ ಪಾಲ್ಗೊಳ್ಳುವರು ಎಂದು ಧ್ವನಿ,ಬೆಳಕು ಮತ್ತು ಶಾಮಿಯಾನ ಸಂಯೋಜಕರ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು,ಕಾರ್ಯದರ್ಶಿ ಮನೋಹರ ರೈ ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.