Home_Page_Advt
Home_Page_Advt
Home_Page_Advt
Breaking News

ಇಸ್ರೋ ಪ್ರಪಲ್ಷನ್ ಕಾಂಪ್ಲೆಕ್ಸ್ ನಲ್ಲಿ ವಿವಿಧ ಹುದ್ದೆಗಳಿಗೆ ನೇಮಕ

ಖಾಲಿ ಹುದ್ದೆಗಳ ವಿವರ: 34

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೋ) ಪ್ರಮುಖ ಘಡಕವಾಗಿರುವ, ಉಡಾವಣಾ ವಾಹನಗಳ ಅಭಿವೃದ್ಧಿಯಲ್ಲಿ ತೊಡಗಿರುವ ಇಸ್ರೋ ಪ್ರಪಲ್ಷನ್ ಕಾಂಪ್ಲೆಕ್ಸ್ ನಲ್ಲಿ ಖಾಲಿ ಇರುವ ಸೈಂಟಿಫಿಕ್ ಅಸಿಸ್ಟೆಂಟ್, ಟೆಕ್ನಿಕಲ್ ಅಸಿಸ್ಟೆಂಟ್, ಫಾರ್ಮಸಿಸ್ಟ್ ಸೇರಿದಂತೆ ವಿವಿಧ ಹುದ್ದೆಗಳಿಗೆ ನೇಮಕ ನಡೆಯಲಿದೆ. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಈ ಘಟಕವಿದ್ದು, ಇಲ್ಲಿ ಕಾರ್ಯನಿರ್ವಹಿಸಲು ಇಚ್ಚಿಸುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಹತೆ :
ಸೈಂಟಿಫಿಕ್ ಅಸಿಸ್ಟೆಂಟ್ ಹುದ್ದೆಗೆ ಕೆಮಿಸ್ಟ್ರಿಯಲ್ಲಿ ಬಿಎಸ್ಸಿ ಮಾಡಿದವರು ಅರ್ಜಿ ಸಲ್ಲಿಸಬಹುದಾಗಿದೆ. ಮೆಕ್ಯಾನಿಕಲ್ ಅಥವಾ ಎಲೆಕ್ಟ್ರಾನಿಕ್ಸ್ ನಲ್ಲಿ ಡಿಪ್ಲೊಮಾ ಮಾಡಿದವರು ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಕೇಟರಿಂಗ್ ಸೂಪರ್ ವೈಸರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಹೋಟೆಲ್ ಮ್ಯಾನೇಜ್ ಮೆಂಟ್/ ಹೋಟೆಲ್ ಮ್ಯಾನೇಜ್ ಮೇಂಟ್ ಮತ್ತು ಕೇಟರಿಂಗ್ ಟೆಕ್ನಾಜಲಿ, ಹಾಸ್ಪಿಟಾಲಿಟಿ ಆ್ಯಂಡ್ ಹೊಟೆಲ್ ಅಡ್ಮಿನಿಸ್ಟ್ರೇಷನ್/ ಕೇಟರಿಂಗ್ ಸೈನ್ಸ್ ಆ್ಯಂಡ್ ಹೋಟೆಲ್ ಮ್ಯಾನೇಜ್ ಮೆಂಟ್ ನಲ್ಲಿ ಪದವಿ ಜೊತೆಗೆ ಒಂದು ವರ್ಷದ ಸೇವಾನುಭವ ಹೊಂದಿರಬೇಕು. ಹೋಟೆಲ್ ಮ್ಯಾನೇಜ್ ಮೆಂಟ್ ನಲ್ಲಿ ಪಿಜಿ ಡಿಪ್ಲೊಮಾ ಮತ್ತು ಎರಡು ವರ್ಷಗಳ ಸೇವಾನುಭವ ಅಥವಾ ಕೇಟರಿಂಗ್ ನಲ್ಲಿ ಡಿಪ್ಲೊಮಾ ಮಾಡಿ, ಮೂರು ವರ್ಷ ಕೆಲಸ ಮಾಡಿದ ಅನುಭವ ಇರುವವರು ಅರ್ಜಿ ಸಲ್ಲಿಸಲು ಅರ್ಹರು. ಫಾರ್ಮಸಿಸ್ಟ್ ಹುದ್ದೆಗೆ ಡಿಪ್ಲೊಮಾ(ಫಾರ್ಮಸಿ) ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಹಿಂದಿ ಟೈಪಿಸ್ಟ್ ಹುದ್ದೆಗೆ ಪದವಿ (ಆರ್ಟ್ಸ್/ ಸೈನ್ಸ್/ ಕಾಮರ್ಸ್/ ಮ್ಯಾನೇಜ್ ಮೆಂಟ್/ ಕಂಪ್ಯೂಟರ್ ಅಪ್ಲಿಕೇಶನ್) ಮತ್ತು ಎಸ್ ಎಸ್ ಎಲ್ ಸಿ/ ಪದವಿ ಮಟ್ಟದಲ್ಲಿ ಹಿಂದಿಯನ್ನು ಒಂದು ವಿಷಯವನ್ನಾಗಿ ಅಧ್ಯಯನ ಮಾಡಿರಬೇಕು. ಹಿಂದಿ ಟೈಪ್ ರೈಟಿಂಗ್ ತಿಳಿದಿರಬೇಕು. ಫಿಟ್ಟರ್, ಎಲೆಕ್ಟ್ರಾನಿಕ್ ಮಕ್ಯಾನಿಕ್, ವೆಲ್ಡರ್, ಕಾರ್ಪೆಂಟರ್, ಮೆಕ್ಯಾನಿಕಲ್, ಡ್ರೈವರ್ ಕಮ್ ಆಪರೆಟರ್, ಫೈರ್ ಮನ್, ಕುಕ್ ಮತ್ತು ಲೈಟ್ ವೆಹಿಕಲ್ ಡ್ರೈವರ್ ಹುದ್ದೆಗಳಿಗೆ ಎಸ್ ಎಸ್ ಎಲ್ ಸಿ/ ಐಟಿಐ ಮಾಡಿ, ನಿಗದಿತ ಸೇವಾನುಭವ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ವಯೋಮಿತಿ:

  • ಕನಿಷ್ಠ 18 ವರ್ಷಗಳು.
  • ಹಿಂದಿ ಟೈಪಿಸ್ಟ್ ಹುದ್ದೆಗೆ ಗರಿಷ್ಠ 26 ವರ್ಷಗಳು. ಡ್ರೈವರ್ ಕಮ್ ಮ್ಯಾನೇಜರ್ ಮತ್ತು ಫೈರ್ ಮನ್ ಹುದ್ದೆಗೆ ಗರಿಷ್ಠ 25 ವರ್ಷ. ಹಾಗೂ ಉಳಿದೆಲ್ಲಾ ಹುದ್ದೆಗಳಿಗೆ 35 ವರ್ಷಗಳು.

ಶುಲ್ಕ:

  • ಉಳಿದೆಲ್ಲಾ ವರ್ಗದ ಅಭ್ಯರ್ಥಿಗಳು ಸೈಂಟಿಫಿಕ್ ಅಸಿಸ್ಟೆಟ್, ಟೆಕ್ನಿಕಲ್ ಅಸಿಸ್ಟೆಟ್ ಮತ್ತು ಕೇಟರಿಂಗ್ ಸೂಪರ್ ವೈಸರ್ ಹುದ್ದೆಗಳಿಗೆ – 250/- ಹಾಗೂ ಇನ್ನುಳಿದ ಎಲ್ಲಾ ಹುದ್ದೆಗಳಿಗೆ -100/-
  • ಪರಿಶಿಷ್ಟ ಜಾತಿ (ಎಸ್‌ಸಿ), ಪರಿಶಿಷ್ಟ ಪಂಗಡ(ಎಸ್‌ಟಿ), ವಿಕಲಚೇತನರು, ಮಾಜಿ ಸೈನಿಕರಿಗೆ (ಇಎಸ್‌ಎಂ) ಅಭ್ಯರ್ಥಿಗಳಿಗೆ ಶುಲ್ಕ ಪಾವತಿಸುವುದರಿಂದ ವಿನಾಯಿತಿ ನೀಡಲಾಗಿದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-10-2019

ಅರ್ಜಿಯ ಸ್ವೀಕೃತಿ ಪತ್ರವನ್ನು ಕಳುಹಿಸಲು ಕೊನೆಯ ದಿನಾಂಕ: 21-10-2019

ಅಂಚೆ ವಿಳಾಸ: The Administrative Officer (Recruitment), ISRO Propulsion Complex (IPRC), Mahendragiri, Tiruneleli District, Tamil Nadu – 627133

ಹೆಚ್ಚಿನ ವಿವರಗಳಿಗಾಗಿ ವೆಬ್ಸೈಟ್: https://www.isro.gov.in/careers

ಹೆಚ್ಚಿನ ಮಾಹಿತಿಗಾಗಿ ಹಾಗೂ ಆನ್ಲೈನ್ಗಾಗಿ ಸಂಪರ್ಕಿಸಿ:

ಪುತ್ತೂರು:- ಸುದ್ದಿ ತರಬೇತಿ ಕೇಂದ್ರ, ದೇವಣ್ಣ ಕಿಣಿ ಬಿಲ್ಡಿಂಗ್ , ಪ್ರಥಮ ಮಹಡಿ, ಕಾರ್ಪೋರೇಷನ್ ಬ್ಯಾಂಕ್ ಬಳಿ, ಮುಖ್ಯರಸ್ತೆ ಪುತ್ತೂರು. ಫೋ: 08251-238949 | 7829503541

ಪುತ್ತೂರು:- ಸುದ್ದಿ ಮಾಹಿತಿ ಕೇಂದ್ರ, ನಗರಸಭಾ ವಾಣಿಜ್ಯ ಸಂಕೀರ್ಣ,ಹೂವಿನ ಮಾರುಕಟ್ಟೆ ಹತ್ತಿರ, ಮುಖ್ಯ ರಸ್ತೆ, ಪುತ್ತೂರು. ಫೋ: 08251-232388

ಈಶ್ವರಮಂಗಲ:- ಸುದ್ದಿ ಮಾಹಿತಿ ಕೇಂದ್ರ, ಓಂ ಸಂಕೀರ್ಣ ಮಹಡಿ, ಈಶ್ವರಮಂಗಲ. ಫೋ: 08251-289949 | 9448725879

ವಿಟ್ಲ:- ಸುದ್ದಿ ಮಾಹಿತಿ ಕೇಂದ್ರ, 2ನೇ ಮಹಡಿ , ಹೀರಾ ಟವರ್ಸ್ ಖಾಸಗಿ ಬಸ್ ನಿಲ್ದಾಣ, ವಿಟ್ಲ. ಫೋ: 08255-238182 | 9743128282

ಉಪ್ಪಿನಂಗಡಿ:- ಸುದ್ದಿ ಮಾಹಿತಿ ಕೇಂದ್ರ, ಗ್ರಾಮ ಪಂಚಾಯತ್ ವಾಣೀಜ್ಯ ಸಂಕೀರ್ಣ, ಉಪ್ಪಿನಂಗಡಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ಬಳಿ, ಉಪ್ಪಿನಂಗಡಿ

ಕಡಬ:- ಸುದ್ದಿ ಮಾಹಿತಿ ಕೇಂದ್ರ, ಗ್ರಾಮ ಪಂಚಾಯತ್ ಕಟ್ಟಡ, ಮುಖ್ಯರಸ್ತೆ, ಕಡಬ. ಫೋ: 08251-260949

Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.