Home_Page_Advt
Home_Page_Advt
Home_Page_Advt
Breaking News

ಸಾಂತ್ಯ: ವೃದ್ಧ ಪೀಟರ್ ಡಿ’ ಸೋಜ ಕೆರೆಗೆ ಬಿದ್ದು ಮೃತ್ಯು

ಪುತ್ತೂರು: ವೃದ್ಧರೋರ್ವರು ಕೆರೆಗೆ ಬಿದ್ದು ಮೃತಪಟ್ಟ ಘಟನೆ ಈಶ್ವರಮಂಗಲ ಸಾಂತ್ಯ ಸಮೀಪದ ಪಳನೀರು ಎಂಬಲ್ಲಿ ಅ.14 ರಂದು ಸಂಜೆ ನಡೆದ ಬಗ್ಗೆ ವರದಿಯಾಗಿದೆ.
ಸಾಂತ್ಯ ಸಮೀಪದ ಪಳನೀರು ನಿವಾಸಿ ಪೀಟರ್ ಡಿ’ ಸೋಜ (80ವ) ಮೃ ಪಟ್ಟವರು. ಮನೆ ಮಂದಿ‌ ಕೆಲಸಕ್ಕೆ ಹೋಗಿ ಸಂಜೆ ಹಿಂದಿರುಗುವ ವೇಳೆ ಮನೆಯಲ್ಲಿ ಪೀಟರ್ ಡಿ ಸೋಜ ಇಲ್ಲದಿರುವುದನ್ನು ಗಮನಿಸಿ ಹುಡುಕಾಡಿದಾಗ ಪೀಟರ್ ಡಿ ಸೋಜ ಅವರ ಚಪ್ಪಲು ಕೆರೆಯ ಬಳಿ ಪತ್ತೆಯಾಗಿತ್ತು. ಕೆರೆಯಲ್ಲಿ ಪೀಟರ್ ಅವರ ಮೃತದೇಹವೂ ಪತ್ತೆಯಾಗಿತ್ತು. ಬಳಿಕ ಅಗ್ನಿಶಾಮಕ ದಳ ಸ್ಥಳಕ್ಕೆ ತೆರಳಿ ಮೃತದೇಹವನ್ನು ಕೆರೆಯಿಂದ ಮೇಲೆತ್ತಿದ್ದಾರೆ. ಪೀಟರ್ ಡಿ’ ಸೋಜ ಅವರು ಅ.14ರಂದು ತಮ್ಮ ತೋಟದ ಬಳಿ ನಡೆದುಕೊಂಡು ಹೋಗುವಾಗ ಪಕ್ಕದ ಕೆರೆಗೆ ಕಾಲು ಜಾರಿ ಬಿದ್ದಿರಬಹುದು ಎಂದು ಸಂಶಯಿಸಲಾಗಿದೆ.
ಮೃತರು ಪುತ್ರರಾದ ರೆನ್ನಿ ಡಿ’ ಸೋಜ, ಅಲ್ಬರ್ಟ್ ಡಿ’ಸೋಜ, ಡೆನ್ನಿಸ್ ಡಿ’ಸೋಜ, ಪುತ್ರಿಯರಾದ ಸಿಸಿಲಿಯಾ ಡಿ’ಸೋಜ, ಐರಿನ್ ಡಿ’ಸೋಜ ಅವರನ್ನು ಅಗಲಿದ್ದಾರೆ. ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಮ್ರತರ ಸಂಬಂಧಿಕರಿಗೆ ಬಿಟ್ಟು ಕೊಡಲಾಗಿದೆ. ಮೃತ ದೇಹದ ಅಂತ್ಯ ಸಂಸ್ಕಾರ ನಿಡ್ಪಳ್ಳಿ ಚರ್ಚ್ ಸೀಮೆತರಿಯಲ್ಲಿ‌ ಮಾಡಲಾಗುವುದು ಎಂದು  ಮೃತರ ಸಂಬಂಧಿಕರು ತಿಳಿಸಿದ್ದಾರೆ.
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.