Home_Page_Advt
Home_Page_Advt
Breaking News

ನ್ಯೂ ಆರ್.ಎಚ್ ಸೆಂಟರ್‌ನಲ್ಲಿ ಗಮನ ಸೆಳೆದ ವಧುವಿನ ಶೃಂಗಾರ ಸ್ಪರ್ಧೆ

 

ಪುತ್ತೂರು: ರಂಗು ರಂಗಿನ ಸೀರೆ ಉಟ್ಟು ಮಿನುಗುತ್ತಿದ್ದ ನಾರಿಯರು, ಉದ್ದ ಜಡೆ, ವಿವಿಧ ವಿನ್ಯಾಸ ಅಭರಣದಲ್ಲಿ ಮಧು ಮಗಳಂತೆ ಭಾಸವಾಗುತ್ತಿದ್ದು ನೋಡುಗರನ್ನು ಗಮನಸೆಳೆದ ಚೆಲುವೆಯರು. ಅಷ್ಟಕ್ಕೂ ಇದು ಮದುವೆ ಮಂಟಪವಲ್ಲ…ಇವೆಲ್ಲಾ ಕಂಡು ಬಂದಿದ್ದು ಪುತ್ತೂರಿನ ಪ್ರತಿಷ್ಠಿತ ಜವುಳಿ ಮಳಿಗೆ ಆರ್.ಎಚ್. ಸೆಂಟರ್ ನಲ್ಲಿ…

ಹೌದು ಇದು ಬೊಳುವಾರಿನ ನ್ಯೂ ಆರ್.ಎಚ್ ಸೆಂಟರ್‌ನ ವ್ಯುಮೆನ್ಸ್ ವಲ್ಡ್ ಸಿಲ್ಕ್ ಮಾರ್ಕ್ ಆರ್ಗನೈಸೇಷನ್ ಆಫ್ ಇಂಡಿಯಾ ಇದರ ಪ್ರಾಯೋಜಕತ್ವದಲ್ಲಿ ಪ್ರಥಮ ಬಾರಿಗೆ ಪುತ್ತೂರಿನಲ್ಲಿ ನಡೆದ ವಧುವಿನ ಶೃಂಗಾರ ಸ್ಪರ್ಧೆಯಲ್ಲಿ ಕಂಡುಬಂದಿದೆ. ಪುತ್ತೂರಿನಲ್ಲಿ ಪ್ರಥಮ ಬಾರಿಗೆ ನಡೆದ ಈ ಸ್ಫರ್ದೆಗೆ ಪೂರಕ ಸ್ಪಂದನೆ ದೊರೆತಿದೆ. ಕಾರ್ಯಕ್ರಮದಲ್ಲಿ 15 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದು ಬಣ್ಣ ಬಣ್ಣದ ಸೀರೆಯುಟ್ಟು, ವಿಭಿನ್ನ ಶೈಲಿಯ ಆಭರಣಗಳನ್ನು ತೊಟ್ಟು ಮದುವೆ ಮಂಟಪಕ್ಕೆ ಹೊರಟ ಅಪ್ಪಟ ವಧುವಿನಂತೆ ಶೋಭಿಸುತ್ತಿದ್ದರು. ವಿಭಿನ್ನ ಶೈಲಿಯ ಕೇಶಾಲಂಕಾರ, ವಿವಿಧ ವಿನ್ಯಾಸ ಆಭರಣಗಳಿಂದ ಕಂಗೊಳಿಸುತ್ತಿದ್ದು ಒಬ್ಬರು ಇನ್ನೊಬ್ಬರಿಗಿಂತ ಭಿನ್ನವಾಗಿ ಕಾಣುತ್ತಿದ್ದರು.

ಸಿಲ್ಕ್ ಮಾರ್ಕ್‌ನ ಮಾಹಿತಿ:
ಸಿಲ್ಕ್ ಮಾರ್ಕ್ ಆರ್ಗನೈಸೇನ್ ಆಫ್ ಇಂಡಿಯಾ ಮ್ಯಾನೇಜರ್ ಗಳಾದ ಸತೀಶ್ ಕುಮಾರ್ , ಸಂದೀಪ್ ಬೆಂಗಳೂರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಿಲ್ಕ್ ಮಾರ್ಕ್ ಸೀರೆಯ ಉತ್ಪಾದನೆ, ಗುಣ ಮಟ್ಟ ಹಾಗೂ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದರು.

ವಧುವಿನ ಶೃಂಗಾರ ಸ್ಪರ್ಧೆಯಲ್ಲಿ ಒಟ್ಟು 15 ಮಂದಿ ಭಾಗವಹಿಸಿದ್ದರು. ಈ ಪೈಕಿ ಸಾನ್ವಿ ಶೆಟ್ಟಿ(ಪ್ರ), ಧನುಶ್ರೀ ಪುಣಚ(ದ್ವಿ) ಹಾಗೂ ಶ್ರಾವ್ಯ ಜೆ.ಶೆಟ್ಟಿ(ತೃ) ಬಹುಮಾನವನ್ನು ಪಡೆದುಕೊಂಡರು. ಉಳಿದಂತೆ ನಿಶ್ಮಿತಾ ಮತ್ತು ಶಿಲ್ಪಾ, ಸುಜಾತ ಮತ್ತು ದಿವ್ಯಾ, ಶೋಭಾ ಮತ್ತು ಸುನೇರಿ, ಸವಿತಾ ಶೆಟ್ಟಿ ಮತ್ತು ನಿರೀಕ್ಷಾ ಹಾಗೂ ಪ್ರಿಯ ಮತ್ತು ಅಶ್ವಿನಿಯವರಿಗೆ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಯಿತು. ಮಂಗಳೂರು ಚೇತನಾ ಬ್ಯೂಟಿಪಾರ್ಲರ್‌ನ ಮ್ಹಾಲಕಿ ಚೇತನಾ, ದರ್ಬೆ ಗ್ಮಾಲ್ ಸ್ಟುಡಿಯೋದ ಮ್ಹಾಲಕಿ ರೇಷ್ಮಾ ಎಸ್.ಉಳ್ಳಾಲ, ಮೂಲ್ಕಿ ಶೀತಲ್ ಬ್ಯೂಟಿಪಾರ್ಲರ್‌ನ ಮ್ಹಾಲಕಿ ಬಬಿತಾ ಶೆಟ್ಟಿ ಮುಲ್ಕಿ ತೀರ್ಪುಗಾರಗಿ ಸಹಕರಿಸಿದ್ದರು.

ಸನ್ಮಾನ
ಕಾರ್ಯಕ್ರಮದಲ್ಲಿ ಪುತ್ತೂರಿನಲ್ಲಿ 20 ವರ್ಷಗಳಿಗಿಂತಲೂ ಅಧಿಕ ಕಾಲ ಬ್ಯೂಟಿಷಿಯನ್ ಆಗಿ ಸೇವೆ ಸಲ್ಲಿಸುತ್ತಿರುವ ಡಿಸೈನರ್ ಬುಟಿಕ್ ಪಾರ್ಲರ್‌ನ ಆಶಾ ಭಟ್ ಹಾಗೂ ಸೆನೋರಿಟಾ ಬ್ಯೂಟಿ ಪಾರ್ಲರ್‌ನ ದಿವ್ಯಾ ಕೆ.ಶೆಟ್ಟಿಯವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಸಹ ಪ್ರಾಯೋಜಕರಾದ ವಿಭಾ ಫ್ಯಾಶನ್‌ನ ಮಾಲಕಿ ಶ್ರೀಮತಿ ವೀಣಾ ಬಿ.ಕೆ., ಐಶ್ವರ್ಯ ಬ್ಯೂಟಿ ಪಾರ್ಲರ್‌ನ ಮಾಲಕಿ ಶ್ರೀಮತಿ ಐಶ್ವರ್ಯ ಉಪಸ್ಥಿತರಿದ್ದರು. ಆರ್.ಎಚ್. ಸೆಂಟರ್‌ನ ಬ್ರಾಂಡ್ ಅಂಬಾಸಿಡರ್ ಸುರತ್ಕಲ್‌ನ ಶ್ವೇತಾ ಸಂತೋಷ್ ಹಾಗೂ ಪ್ರಸನ್ನ ಚೆತನಾ, ನಗರ ಸಭಾ ಸದಸ್ಯ ಪಿ.ಜಿ. ಜಗನ್ನಿವಾಸ ರಾವ್, ಪುತ್ತೂರಿನ ಪ್ರಸನ್ನ ಚೇತನಾ, ತೀರ್ಪುಗಾರರಾದ ಚೇತನಾ ಮಂಗಳೂರು, ರೇಷ್ಮಾ ಉಳ್ಳಾಲ್ ಹಾಗೂ ಬಬಿತಾ ಶೆಟ್ಟಿ ವಿಜೇತರಿಗೆ ಬಹುಮಾನ ವಿತರಿಸಿದರು. ನ್ಯೂ ಆರ್.ಎಚ್ ಸೆಂಟರ್‌ನ ಮ್ಹಾಲಕರಾದ ಗೋಪಾಲ್ ಎಂ.ಯು ಹಾಗೂ ಸೌಮ್ಯ ಎಂ.ಯು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಪಶುಪತಿ ಶರ್ಮ ಕಾರ್ಯಕ್ರಮ ನಿರೂಪಿಸಿದರು. ಸಿಬಂದಿಗಳು ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.