Home_Page_Advt
Home_Page_Advt
Home_Page_Advt
Breaking News

ಕಟ್ಟಡ ತೆರಿಗೆ ಪಾವತಿಗೆ ಬಾಕಿ-ನಗರ ಸಭೆಯಿಂದ ಮನೆ, ಕಛೇರಿಗಳಿಗೆ ಭೇಟಿ, ಪಾವತಿಸುವಂತೆ ಸೂಚನೆ

ಪುತ್ತೂರು: ಕಳೆದ ಎರಡು ಮೂರು ವರ್ಷಗಳಿಂದ ನಗರಸಭೆಗೆ ಕಟ್ಟಡ ತೆರಿಗೆ ಪಾವತಿಸದೆ ಬಾಕಿ ಇರಿಸಿಕೊಂಡಿರುವ ಕಟ್ಟಡ ಮಾಲಕರ ಮನೆ ಮತ್ತು ಕಚೇರಿಗಳಿಗೆ ಭೇಟಿ ನೀಡಿದ ಪುತ್ತೂರು ನಗರಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ಮತ್ತು ಸಿಬಂದಿ ಬಾಕಿ ಇರಿಸಿದ ತೆರಿಗೆಗಳನ್ನು ಪಾವತಿಸುವಂತೆ ಸೂಚನೆ ನೀಡಿದರು. ತೆರಿಗೆ ವಸೂಲಾತಿ ಕುರಿತು ಯಾವುದೇ ಕಾನೂನು ಕ್ರಮಗಳಿಗೆ ಅವಕಾಶವಾಗದಂತೆ ಬಾಕಿ ಇರಿಸಲಾಗಿರುವ ತೆರಿಗೆಯನ್ನು ನಗರಸಭೆಗೆ ಪಾವತಿಸುವಂತೆ ಸೂಚಿಸಿದರು.

ನಗರಸಭೆಯಲ್ಲಿ ಕಟ್ಟಡ ತೆರಿಗೆ ಪಾವತಿ ಪ್ರಮಾಣ ಕಡಿಮೆಯಾಗಿದೆ. ಬಹುತೇಕ ಕಟ್ಟಡ ಮಾಲಿಕರು ಅವಧಿಗೆ ಪೂರ್ವವಾಗಿ ಕಟ್ಟಡ ತೆರಿಗೆಗಳನ್ನು ಪಾವತಿಸಿ ನಗರಸಭೆಗೆ ಸಹಕರಿಸುತ್ತಿದ್ದಾರೆ. ಕೆಲವೊಂದು ಕಟ್ಟಡಗಳ ಮಾಲಿಕರು ತೆರಿಗೆಯನ್ನು ಪಾವತಿಸದೆ ಬಾಕಿ ಇರಿಸಿಕೊಂಡಿದ್ದಾರೆ. ಇಂತವರಿಂದ ತೆರಿಗೆ ಕಟ್ಟಿಸಿಕೊಳ್ಳಲು ನಗರಸಭೆ ಕ್ರಮಕ್ಕೆ ಮುಂದಾಗಿದೆ. ಈಗ ಎಲ್ಲರಿಗೂ ತೆರಿಗೆ ಕಟ್ಟುವಂತೆ ತಿಳುವಳಿಕೆ ನೀಡಲಾಗುತ್ತಿದೆ. ನಂತರವೂ ತೆರಿಗೆ ಪಾವತಿಸದೆ ಬಾಕಿ ಇರಿಸಿಕೊಂಡಲ್ಲಿ ಅಂತವರ ವಿರುದ್ಧ ಕಾನೂನು ಕ್ರಮವನ್ನು ಜರಗಿಸಲು ನೋಟೀಸ್ ಜಾರಿ ಮಾಡಲಾಗುತ್ತದೆ ಎಂದು ನಗರಸಭಾ ಪೌರಾಯುಕ್ತೆ ರೂಪಾ ಟಿ. ಶೆಟ್ಟಿ ತಿಳಿಸಿದ್ದಾರೆ.

ನಗರಸಭಾ ಕಂದಾಯ ನಿರೀಕ್ಷಕ ರಾಮಯ್ಯ ಗೌಡ, ನಗರಸಭಾ ಬಿಲ್ ಕಲೆಕ್ಟರ್ ರಾಜೇಶ್, ಕಂದಾಯ ಅಧಿಕಾರಿ ರಾಧಾಕೃಷ್ಣ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.