Home_Page_Advt
Home_Page_Advt
Breaking News

ಡಿಕೆ ಶಿವಕುಮಾರ್ ಬಿಡುಗಡೆ – ಕಡಬ ಕಾಂಗ್ರೆಸ್‌ನಿಂದ ಹರ್ಷೋದ್ಘಾರ

ಕಡಬ : ಕಾಂಗ್ರೆಸ್‌ ನಾಯಕ ಮಾಜಿ ಸಚಿವ ಡಿಕೆ ಶಿವಕುಮಾರ್ ಬಿಡುಗಡೆಯಿಂದ ಸಂತೋಷಗೊಂಡ ಕಡಬ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಜಿ.ಪಂ ಸದಸ್ಯ ಪಿ.ಪಿ ವರ್ಗೀಸ್ ಅವರ ನೇತೃತ್ವದಲ್ಲಿ ಕಡಬ ಪೇಟೆಯಲ್ಲಿ ಅ.24ರಂದು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಿಸಲಾಯಿತು.

ಡಿಕೆಶಿ ಬಿಡುಗಡೆಯನ್ನುದ್ದೇಶಿಸಿ ಮಾತನಾಡಿದ ಜಿ.ಪಂ ಸದಸ್ಯ ಪಿ.ಪಿ ವರ್ಗೀಸ್ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಪ್ರಭಾವಿ ನಾಯಕರಾಗಿರುವ ಡಿಕೆಶಿವಕುಮಾರ್‌ರನ್ನು ಬಿಜೆಪಿಯ ರಾಜಕೀಯ ದುರುದ್ದೇಶದಿಂದ ಇಡಿ ಮೂಲಕ ಬಂಧಿಸಿ ಜೈಲಿಗೆ ಅಟ್ಟಿದ್ದು ನ್ಯಾಯಲಯವು ಅ.23ರಂದು ಬಿಡುಗಡೆಗೊಳಿಸಿದೆ. ನ್ಯಾಯಲಯದ ತೀರ್ಪನ್ನು ಸ್ವಾಗತಿಸುವ ಮೂಲಕ ನ್ಯಾಯದೀಶರನ್ನು ಅಭಿನಂದಿಸುವುದಲ್ಲದೆ ಮುಂದಿನ ದಿನಗಳಲ್ಲಿ ಬಿಜೆಪಿಯವರ ಇಂತಹ ಕುತಂತ್ರದಿಂದ ಪಾರಾಗಿ ಈ ರಾಜ್ಯದ , ದೇಶದ ಜನಪರ ಕಾಳಜಿಯಿಂದ ಜನಸೇವೆ ಮಾಡಲು ಡಿಕೆಶಿ ಯವರಿಗೆ ದೇವರು ಶಕ್ತಿ ನೀಡಲೆಂದು ಹಾರೈಸಿದರು.

ಜೆಡಿಎಸ್ ರಾಜ್ಯ ಕಾರ್ಯದರ್ಶಿ ಸಯ್ಯದ್ ಮೀರಾ ಸಾಹೇಬ್ ಮಾತನಾಡಿ ಪ್ರಭಾವಿ ನಾಯಕರನ್ನು ಮಟ್ಟ ಹಾಕಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಅವನಿಸುತ್ತಿರುವ ಬಿಜೆಪಿಯವರಿಂದ ಈ ದೇಶ ಸಂಪೂರ್ಣ ಅದೋಗತಿಗೆ ತಲುಪಿದೆ ಡಿಕೆಶಿವಕುಮಾರ್‌ರಂತಹ ಜನನಾಯಕರನ್ನು ಅನಗತ್ಯ ಆರೋಪ ಹೊರಿಸಿ ಜೈಲಿಗೆ ಅಟ್ಟಿರುವುದು ಸರಿಯಲ್ಲ ಇವರನ್ನು ಬಂಧಿಸಿದಾಗಲೇ ರಾಜ್ಯದ್ಯಂತ ಬೃಹತ್ ಮಟ್ಟದಲ್ಲಿ ಪ್ರತಿಭಟನೆಗಳು ನಡೆದಿದ್ದು ನಮ್ಮ ಕಡಬದಲ್ಲೂ ಒಕ್ಕಲಿಗ ಗೌಡ ಸಮುದಾಯದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಡಿಕೆಶಿ ಬಂಧನವನ್ನು ಖಂಡಿಸಲಾಗಿತ್ತು. ಸಮ್ಮಿಶ್ರ ಸರಕಾರದಲ್ಲಿ ಜೆಡಿಎಸ್‌ಗೆ ಸಹಕಾರ ನೀಡಿ ಸರಕಾರ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಡಿಕೆಶಿಯವರಿಗೆ ದೇವರ ಅನುಗ್ರಹದಿಂದ ನ್ಯಾಯಲಯದ ತೀರ್ಪಿನಂತೆ ಜೈಲಿನಿಂದ ಬಿಡುಗಡೆಗೊಂಡು ಮತ್ತೆ ಜನಸೇವೆಗೆ ತೊಡಗಿಕೊಂಡಿರುವುದು ಸಂತೋಷವಾಗಿದ್ದು ಅವರೊಬ್ಬ ರಾಷ್ಟ್ರ ನಾಯಕರಾಗಿ ಬೆಳೆಯಲೆಂದು ಹಾರೈಸಿದರು.

ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಗಣೇಶ್ ಕೈಕುರೆ ಸ್ವಾಗತಿಸಿ ಡಿಕೆಶಿಯವರು ಬಿಡುಗಡೆಯನ್ನು ನಮ್ಮೆಲ್ಲರ ಸೌಭಾಗ್ಯವೆಂದು ನ್ಯಾಯಾಲಯದ ತೀರ್ಪನ್ನು ಅಭಿನಂದಿಸಿದರು.

ಕಡಬ ತಾ.ಪಂ ಸದಸ್ಯ ಫಝಲ್ ಕೋಡಿಂಬಾಳ, ಕಡಬ ಗ್ರಾ.ಪಂ ಅಧ್ಯಕ್ಷ ಬಾಬು ಮುಗೇರ, ತಾ.ಪಂ ಸದಸ್ಯೆ ಕಡಬ ಬ್ಲಾಕ್ ಕಾಂಗ್ರೇಸ್ ಮಹಿಳಾ ಘಟಕದ ಅಧ್ಯಕ್ಷೆ ಉಷಾಅಂಚನ್, ಡಿಸಿಸಿ ಸದಸ್ಯರಾದ ನೀಲಾವತಿ ಶಿವರಾಂ, ಎ.ಎಸ್ ಶೇರಿಫ್, ಕಡಬ ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಹರಿಪ್ರಸಾದ್ ಎನ್ಕಾಜೆ, ಕಡಬ ಬ್ಲಾಕ್ ಕಾಂಗ್ರೆಸ್‌ ಉಪಾಧ್ಯಕ್ಷ ತೋಮಸ್ ಕೆ.ಜೆ, ಜಿಲ್ಲಾ ಯುವ ಕಾಂಗ್ರೆಸ್‌ ನಾಯಕ ಕೆ.ಎಂ ಹನೀಫ್, ಕಡಬ ಬ್ಲಾಕ್ ಯುವಕ ಕಾಂಗ್ರೆಸ್‌ ಪ್ರಚಾರ ಸಮಿತಿ ಅಧ್ಯಕ್ಷ ಸತೀಶ್ ನಾಕ್, ಕಡಬ ತಾ.ಜೆಡಿಎಸ್ ಉಪಾಧ್ಯಕ್ಷ ಚಂದ್ರಶೇಖರ್ ಕೋಡಿಬೈಲ್, ಐತ್ತೂರು ಗ್ರಾ.ಪಂ ಸದಸ್ಯ ಯೂಸುಪ್ ಎಂ.ಪಿ, ಹಿಂದುಳಿದ ವರ್ಗದ ಅಧ್ಯಕ್ಷ ಗಿರೀಶ್ ಬದನೆ, ಪ್ರಮುಖರಾದ ಮನಮೋಹನ ಗೋಳಿಯಾಡಿ, ವೆಂಕಟರಮಣ ಪಾಂಗ, ಜೋಸೆಫ್ ಚೆಂಡೆಹಿತ್ಲು ನೆಟ್ಟಣ, ಜಗನ್ನಾಥ ರೈ ಕುಟ್ರುಪ್ಪಾಡಿ, ಮೊದಲಾದವರು ಉಪಸ್ಥಿತರಿದ್ದರು.  ಡಿಕೆಶಿ ಬಿಡುಗಡೆಗೆ ಜಯಕಾರ ಕೂಗಿ ಬಿಜೆಪಿಗೆ ದಿಕ್ಕಾರ ಕೂಗಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.