Home_Page_Advt
Home_Page_Advt
Home_Page_Advt
Breaking News

ನೂಜಿಬಾಳ್ತಿಲ, ರೆಂಜಿಲಾಡಿ ಒಕ್ಕೂಟ ವತಿಯಿಂದ ಅಧ್ಯಯನ ಪ್ರವಾಸ


ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಳಿನೆಲೆ ವಲಯದ ನೂಜಿಬಾಳ್ತಿಲ ಹಾಗೂ ರೆಂಜಿಲಾಡಿ ಒಕ್ಕೂಟದ ವತಿಯಿಂದ ಅ.25 ರಂದು ಕೃಷಿ ಅಧ್ಯಯನ ಪ್ರವಾಸ ಮಾಡಲಾಯಿತು.

ಕೃಷಿ ಅಧ್ಯಯನ ಪ್ರವಾಸದಲ್ಲಿ ಪುತ್ತೂರು ತಾಲೂಕಿನ ಬೆಟ್ಟಂಪಾಡಿಯಲ್ಲಿ ಕಜೆ ನಿವಾಸಿ ತ್ಯಾಂಪ ನಾಯ್ಕ ಅವರು ಸಾವಯವ ಮಿಶ್ರ ಕೃಷಿ, ಹೈನುಗಾರಿಕೆ ಬಗ್ಗೆ, ಗಣೇಶ್ ನಾಯ್ಕ ಅವರು ಮೀನು, ಕೋಳಿ, ಹಂದಿ, ಮೊಲ, ಜೇನು ಸಾಕಾಣಿಕೆ ಬಗ್ಗೆ, ಕಾವು ಮೋನಪ್ಪ ಪೂಜಾರಿ ಅವರು ಮಲ್ಲಿಗೆ ಕೃಷಿ ಹಾಗೂ ನೀರು ಇಂಗಿಸುವಿಕೆ ಬಗ್ಗೆ ಹಾಗೂ ಕಡಮಜಲು ಸುಭಾಷ್ ರೈ ಅವರು ಗೇರು, ಅಡಿಕೆ, ತೆಂಗು ಸೇರಿದಂತೆ ಹಲವು ಕೃಷಿಗಳ ಬಗ್ಗೆ ತಂಡದ ಸದಸ್ಯರಿಗೆ ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಹನುಮಗಿರಿ, ಕೋಟಿ ಚೆನ್ನಯ ಮೂಲಸ್ಥಾನ ಪಡುಮಲೆ ಗೆಜ್ಜೆಗಿರಿ ನಂದನ ಬಿತ್ತ್‌ಲ್ ಹಾಗೂ ಬೀರಮಲೆ ದೇಯಿ ಬೈದೇತಿ ಔಷದಿ ವನಕ್ಕೆ ಬೇಟಿ ನೀಡಲಾಯಿತು. ಯೋಜನಾ ಕೃಷಿ ಅಧಿಕಾರಿ ಉಮೇಶ್ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಸಲಾಯಿತು. ನೂಜಿಬಾಳ್ತಿಲ ಒಕ್ಕೂಟ ಅಧ್ಯಕ್ಷ ಪುರುಷೋತ್ತಮ ಗೌಡ, ರೆಂಜಿಲಾಡಿ ಅಧ್ಯಕ್ಷ ಸುಂದರ, ಸೇವಾಪ್ರತಿನಿಧಿಗಳಾದ ಯಶವಂತ್, ದಯಾನಂದ ಹಾಗೂ ಒಕ್ಕೂಟದ ಪದಾಧಿಕಾರಿಗಳು, ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.