Home_Page_Advt
Home_Page_Advt
Breaking News

ನಾಪತ್ತೆಯಾಗಿದ್ದ ಸೋಮವಾರಪೇಟೆ ಮೂಲದ ಸುನಿಲ್ ರವರ ಮೃತದೇಹ ನೆಲ್ಲಿಗುಡ್ಡೆಯ ಸೇತುವೆ ಕೆಳಗಡೆ ಪತ್ತೆ


ವಿಟ್ಲ: ನಾಪತ್ತೆಯಾಗಿದ್ದ ಯುವಕನ ಮೃತದೇಹವು ದ್ವಿಚಕ್ರವಾಹನ‌ ಸಹಿತ ವಿಟ್ಲ ಕಸಬಾ ಗ್ರಾಮದ ನೆಲ್ಲಿಗುಡ್ಡೆ ಸಮೀಪದ ಸೇತುವೆಯ ಕೆಳಗಡೆ ನ.6ರಂದು ಪತ್ತೆಯಾಗಿದೆ.

ಮಡಿಕೇರಿ ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ  ಅಬ್ಬೇತ್ ಮಂಗಳ ನಿವಾಸಿ ಅಣ್ಣಿ ಯವರ ಪುತ್ರ ಸುನಿಲ್ ಮೃತಪಟ್ಟವರಾಗಿದ್ದಾರೆ. ಸುನಿಲ್ ರವರು ತನ್ನ ಅಜ್ಜಿ ಮನೆಯಾದ ಮಂಗಿಲಪದವು ನಿವಾಸಿ ಕಮಲರವರ ಮನೆಗೆ ಕೆಲ ದಿನಗಳ ಹಿಂದೆ ಬಂದಿದ್ದರು. ನ.4ರಂದು ಪೇಟೆಗೆಂದು ತೆರಳಿ ಹೋದ ಸುನಿಲ್ ರವರು ಆ ಬಳಿಕ ಮನೆಗೆ ಬಾರದೆ‌ ನಾಪತ್ತೆಯಾಗಿದ್ದರು. ಈ ಕುರಿತು ಅವರ ಸಂಬಂಧಿಕರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಬಿಸುತ್ತಿದ್ದಂತೆ ವಿಟ್ಲ ಕಸಬ ಗ್ರಾಮದ ನೆಲ್ಲಿಗುಡ್ಡೆ ಸೇತುವೆಯ ಕೆಳಗಡೆ ಸುನಿಲ್ ರವರ ಮೃತದೇಹ ಪತ್ತೆಯಾಗಿದೆ.

ಸೇತುವೆ ನಿರ್ಮಾಣ ಹಂತದಲ್ಲಿದ್ದು, ಇನ್ನೂ ತಡೆಗೋಡೆ ಕಾಮಗಾರಿ ಬಾಕಿಯಿದ್ದು, ರಾತ್ರಿ ಹೊತ್ತಿನಲ್ಲಿ ಸೇತುವೆ ಗಮನಕ್ಕೆ ಬರದೆ ಈ ಅಪಘಾತ ಸಂಭವಿಸಿರಬಹುದೆಂದು ಅಂದಾಜಿಸಲಾಗಿದೆ. ಘಟನಾ‌ ಸ್ಥಳಕ್ಕೆ ವಿಟ್ಲ ಠಾಣಾ ಎಸ್ ಐ ಯಲ್ಲಪ್ಪ ರವರ ನೇತೃತ್ವದ ಪೊಲೀಸರ ತಂಡ ಆಗಮಿಸಿ ಮಾಹಿತಿ ಪಡೆದುಕೊಂಡಿದೆ.ಮೃತದೇಹವನ್ನು ಮಹಜರು ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಗಿದೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.