Home_Page_Advt
Home_Page_Advt
Breaking News

ಅನರ್ಹ ಬಿಪಿಎಲ್ ಕಾರ್ಡ್‌ದಾರರಿಗೆ ದಂಡ ಇಲ್ಲ!

ಪುತ್ತೂರು: ಸರಕಾರದ ಮಾನದಂಡಗಳನ್ನು ಮೀರಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಫಲಾನುಭವಿಗಳಿಗೆ ಎಪಿಎಲ್‌ಗೆ ಪರಿವರ್ತಿಸುವ ಸಂದರ್ಭದಲ್ಲಿ ದಂಡ ಪಾವತಿಸಬೇಕಾಗಿಲ್ಲ ಎಂದು ನ.6ರಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಆದೇಶ ಬಂದಿರುವುದಾಗಿ ತಹಶೀಲ್ದಾರ್ ಅನಂತಶಂಕರರವರು ಮಾಹಿತಿ ನೀಡಿದ್ದಾರೆ.

ಈಗಾಗಲೇ ಬಿಪಿಎಲ್ ಕಾರ್ಡ್ ಹೊಂದಿದ್ದು ಅದನ್ನು ಸರಕಾರದ ನಿಯಮದಂತೆ ಎಪಿಎಲ್‌ಗೆ ಪರಿವರ್ತಿಸುವ ಸಂದರ್ಭದಲ್ಲಿ ಸರಕಾರ ನಿಗದಿ ಪಡಿಸಿದ ದಂಡವನ್ನು ಪಾವತಿಸಬೇಕಾಗಿತ್ತು. ಇನ್ನು ಮುಂದೆ ದಂಡ ಪಾವತಿಸದೇ ಬಿಪಿಎಲ್‌ನಿಂದ ಎಪಿಎಲ್‌ಗೆ ಪರಿವರ್ತಿಸಲು ಅವಕಾಶ ನೀಡಲಾಗುವುದು ಎಂದು ಮೌಖಿಕ ಆದೇಶ ಮಾತ್ರ ಬಂದಿದೆ. ಈಗಾಗಲೇ ದಂಡ ಪಾವತಿಸಿದವರಿಗೆ ಮರು ಪಾವತಿ ಮಾಡುವ ಬಗ್ಗೆ ಯಾವುದೇ ನಿರ್ದೇಶನಗಳು ಬಂದಿರುವುದಿಲ್ಲ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

ಬಿಪಿಎಲ್ ಪಡಿತರ ಚೀಟಿಗೆ ಅನರ್ಹರಾದರೂ ಆದರಿಂದ ಸೌಲಭ್ಯ ಪಡೆಯುತ್ತಿರುವವರಿಗೆ ಪಡಿತರ ಚೀಟಿಯನ್ನು ಎಪಿಎಲ್‌ಗೆ ಪರಿವರ್ತಿಸಿಕೊಳ್ಳಲು ಸರಕಾರ ಸೆ. 30ರ ಗಡುವು ನೀಡಿತ್ತು. ಆಗಸ್ಟ್, ಸೆಪ್ಟಂಬರ್‌ನಲ್ಲಿ ಕೆಲವರು ದಂಡ ರಹಿತವಾಗಿ ಎಪಿಎಲ್‌ಗೆ ಬದಲಾಯಿಸಿಕೊಂಡಿದ್ದರು. ಆ ನಂತರ ದಂಡ ಪಾವತಿಸಿ ಎಪಿಎಲ್‌ಗೆ ಪರಿವರ್ತಿಸ ಬೇಕಾಗಿದ್ದು ನ.3ರ ತನಕ 270 ಕುಟುಂಗಳ ಕಾರ್ಡ್ ರದ್ದುಗೊಳಿಸಿ ರೂ.2,21,575 ದಂಡ ಪಾವತಿಸಲಾಗಿತ್ತು. ಇದೀಗ ದಂಡ ರಹಿತವಾಗಿ ಪಾವತಿಸಲು ಅವಕಾಶ ನೀಡುತ್ತಿದ್ದು ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಸರಕಾರಿ ಹಾಗೂ ಅರೆ ಸರಕಾರಿ ನೌಕರರನ್ನು ಹೊಂದಿರುವ ಕುಟುಂಬದವರು, ನಗರ ಪ್ರದೇಶದಲ್ಲಿ 1000 ಚದರ ಅಡಿಗಿಂತ ದೊಡ್ಡ ಮನೆ ಹೊಂದಿರುವವರು, ಗ್ರಾಮೀಣ ಪ್ರದೇಶಗಳಲ್ಲಿ 3 ಹೆಕ್ಟೇರ್‌ಗಿಂತ ಅಧಿಕ ಭೂಮಿ ಹೊಂದಿರುವವರು, ನಾಲ್ಕ ಚಕ್ರದ ವಾಹನ ಹೊಂದಿರುವವರು ಹಾಗೂ ಕುಟುಂಬದ ವಾರ್ಷಿಕ ಆದಾಯ ರೂ.1.20ಲಕ್ಷಕ್ಕಿಂತ ಅಧಿಕ ಇರುವವರು ಬಿಪಿಎಲ್ ಕಾರ್ಡ್ ಹೊಂದಿರಲು ಅನರ್ಹರಾಗಿರುತ್ತಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.