Home_Page_Advt
Home_Page_Advt
Breaking News

ದೇಯಿ ಬೈದ್ಯೆತಿ- ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ಕ್ಷೇತ್ರದ ಬ್ರಹ್ಮಕಲಶೋತ್ಸವಕ್ಕೆ ದಿನ ನಿಗದಿ

  • 2020ರ ಫೆ. 26ರಿಂದ ಮಾ. 4ರವರೆಗೆ ಅದ್ದೂರಿಯಾಗಿ ನಡೆಸಲು ತೀರ್ಮಾನ

ಪುತ್ತೂರು: ಪುನರುತ್ಥಾನದ ಹಾದಿಯಲ್ಲಿರುವ ದೇಯಿ ಬೈದ್ಯೆತಿ- ಕೋಟಿ ಚೆನ್ನಯರ ಮೂಲಸ್ಥಾನ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ 2020ರ ಫೆಬ್ರವರಿ 26ರಿಂದ ಮಾರ್ಚ್ 4ರವರೆಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ. ಕ್ಷೇತ್ರ ಪುನರುತ್ಥಾನ ಕಾರ್ಯದ ಕೆಲಸಗಳು ಈಗಾಗಲೇ ಶೇಕಡಾ 70ರಷ್ಟು ಪೂರ್ಣಗೊಂಡಿದ್ದು, ಇನ್ನುಳಿದ ಕಾಮಗಾರಿಗಳನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಫೆ.26ರಿಂದ ಒಂದು ವಾರಗಳ ಕಾಲ ಧಾರ್ಮಿಕ, ತೌಳವ ಪಾರಂಪರಿಕ ವಿಧಿ ವಿಧಾನಗಳ ಮೂಲಕ ಬ್ರಹ್ಮಕಲಶೋತ್ಸವ ಮತ್ತು ನೇಮ ನಡಾವಳಿಗಳು ನಡೆಯಲಿವೆ.

ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲ್ ಅಧ್ಯಕ್ಷತೆಯಲ್ಲಿ ನವೆಂಬರ್ 5ರಂದು ಶ್ರೀ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ಈ ವಿಚಾರವನ್ನು ಚರ್ಚಿಸಿ ಅಂತಿಮಗೊಳಿಸಲಾಯಿತು. ಕ್ಷೇತ್ರದ ಯಜಮಾನರಾದ ಶ್ರೀಧರ ಪೂಜಾರಿ ಮತ್ತು ತಂತ್ರಿವರ್ಯರಾದ ಲೋಕೇಶ್ ಶಾಂತಿ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ.

ಸಭಾ ಕಾರ್ಯಕ್ರಮಗಳು, ಸಾಂಸ್ಕೃತಿಕ ವೈವಿಧ್ಯಗಳು ನಡೆಯಲಿದ್ದು, ನಾಡಿನ ಮೂಲೆ ಮೂಲೆಯಿಂದ ಲಕ್ಷಾಂತರ ಭಕ್ತರು ಈ ಪುಣ್ಯೋತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ಜಯಂತ ನಡುಬೈಲ್ ಹೇಳಿದರು.

ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ನಿವೃತ್ತ ಎಸ್.ಪಿ., ಬೆಳ್ತಂಗಡಿ ಬಿಲ್ಲವ ಸಂಘದ ಮಾಜಿ ಅಧ್ಯಕ್ಷರಾದ ಪೀತಾಂಬರ ಹೇರಾಜೆ ಅವರನ್ನು ಘೋಷಿಸಲಾಯಿತು. ಪದಾಧಿಕಾರಿಗಳು ಮತ್ತು ಉಪ ಸಮಿತಿಗಳನ್ನು ಶೀಘ್ರದಲ್ಲೇ ನೇಮಿಸಲು ನಿರ್ಧರಿಸಲಾಯಿತು.

ಕಾರಣಿಕ ಶಕ್ತಿಗಳ ಮೂಲಸ್ಥಾನವನ್ನು ಕೌಟುಂಬಿಕ ಆರಾಧನಾ ಕ್ಷೇತ್ರವಾಗಿ ಪುನರುತ್ಥಾನಗೊಳಿಸಬೇಕೆಂಬ ಪ್ರಶ್ನಾ ಚಿಂತನೆಯ ಸಂಕಲ್ಪದ ಪ್ರಕಾರ ಪುನರುತ್ಥಾನ ನಡೆಸಲಾಗುತ್ತಿದೆ. ಕೋಟಿ ಚೆನ್ನಯ ಭಕ್ತರ ಪಾಲಿಗೂ ಇದು ಮೂಲಸ್ಥಾನವಾಗಿ ಕಂಗೊಳಿಸಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಕ್ಷೇತ್ರದ ಯಜಮಾನರಾದ ಶ್ರೀಧರ ಪೂಜಾರಿ, ಮಾತೃಶ್ರೀ ಲೀಲಾವತಿ ಅಮ್ಮ, ತಂತ್ರಿಗಳಾದ ಲೋಕೇಶ್ ಶಾಂತಿ, ಸಮಿತಿಯ ಉಪಾಧ್ಯಕ್ಷರಾದ ರಾಜಶೇಖರ ಕೋಟ್ಯಾನ್, ಪೀತಾಂಬರ ಹೇರಾಜೆ, ಬಿಲ್ಲವ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷರಾದ ಎನ್.ಟಿ. ಪೂಜಾರಿ, ಮುಂಬೈ ಬಿಲ್ಲವರ ಎಸೋಸಿಯೇಶನ್ ನಿಕಟಪೂರ್ವ ಅಧ್ಯಕ್ಷರಾದ ನಿತ್ಯಾನಂದ ಕೋಟ್ಯಾನ್, ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿ ಪೂಜಾರಿ ಚಿಲಿಂಬಿ, ಕಾರ್ಯದರ್ಶಿಗಳಾದ ಸುಧಾಕರ ಸುವರ್ಣ, ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಆನುವಂಶಿಕರಾದ ಮಹಾಬಲ ಪೂಜಾರಿ, ಮುಂಬೈನ ಹರೀಶ್ ಅಮೀನ್, ಭಾಸ್ಕರ ಸಾಲಿಯಾನ್, ದಯಾನಂದ ಪೂಜಾರಿ, ಗಂಗಾಧರ ಮಿತ್ತಮಾರ್, ಪ್ರಮುಖರಾದ ಚಂದ್ರಶೇಖರ ಉಚ್ಚಿಲ್, ಶೈಲೇಂದ್ರ ವೈ ಸುವರ್ಣ, ಶಿವರಾಂ ನೀರ್ಚಾಲ್, ಸಂತೋಷ್ ಕೊಟ್ಟಿಂಜ, ಚಂದ್ರಶೇಖರ ಸುವರ್ಣ ಮೂಲ್ಕಿ, ಚಂದ್ರಶೇಖರ ಸುವರ್ಣ ಹೊಸಬೆಟ್ಟು, ನವೀನ್ ಸುವರ್ಣ, ನವೀನ್ ಅಮೀನ್, ಹರಿಶ್ಚಂದ್ರ ಅಮೀನ್, ಗಣೇಶ್ ಬಂಗೇರ, ಚಂದ್ರಹಾಸ ಅಮೀನ್ ಗೋವಾ, ಸೋಮನಾಥ್ ಬಂಗೇರ ವರ್ಪಾಳೆ, ಕೆಡೆಂಜಿಗುತ್ತು ಪ್ರವೀಣ್ ಕುಮಾರ್, ಉದಯ ಕೊಲಾಡಿ, ನಾರಾಯಣ ಪೂಜಾರಿ ನಂಜೆ, ನಾರಾಯಣ ಪೂಜಾರಿ ಮಡ್ಯಂಗಳ, ದಯಾನಂದ ಕರ್ಕೆರ, ಚಂದ್ರಶೇಖರ್ ಪರಕ್ಕಮೆ, ನಾರಾಯಣ ಪೂಜಾರಿ ಮಚ್ಚಿನ, ಮಂಜುನಾಥ ಸಾಲಿಯಾನ್ ಮತ್ತಿತರರು ಉಪಸ್ಥಿತರಿದ್ದರು.

250ರಷ್ಟು ಗರಡಿಗಳಲ್ಲಿ ಆರಾಧನೆ ಪಡೆಯುತ್ತಿರುವ ಕೋಟಿ ಚೆನ್ನಯರ ಮೂಲಕ್ಷೇತ್ರ ಗೆಜ್ಜೆಗಿರಿಯಲ್ಲಿ, ಇದೇ ಮೊದಲ ಬಾರಿಗೆ ಅವಳಿ ವೀರರು ಮತ್ತು ಮಾತೆ ದೇಯಿ ಬೈದ್ಯೆತಿ ಆರಾಧನೆ ಆರಂಭಗೊಳ್ಳಲಿದೆ. ಅದೇ ರೀತಿ ಸಾಯನ ಬೈದ್ಯರನ್ನು ಗುರು ಸ್ಥಾನದಲ್ಲಿ ಸಂಕಲ್ಪಿಸಿ ಗುರು ಪೀಠ ಸ್ಥಾಪನೆ ನಡೆಯಲಿದ್ದು, ಮೂಲ ಗರಡಿಯಲ್ಲಿ ಕೋಟಿ ಚೆನ್ನಯರ ಜತೆಗೆ ಗುರುಗಳ ಆರಾಧನೆಯೂ ನಡೆಯಲಿದೆ. ನೂತನ ಕೊಡಿಮರ ಪ್ರತಿಷ್ಠೆಯ ಮೂಲಕ ಮಹೋತ್ಸವ ಆರಂಭಗೊಳ್ಳಲಿದೆ. ಆದಿ ದೈವ ಧೂಮಾವತಿ ಸಾನಿಧ್ಯ, ಕುಪ್ಪೆ ಪಂಜುರ್ಲಿ ಸಾನಿಧ್ಯ, ಸಾಯನ ಬೈದ್ಯರ ಗುರು ಪೀಠ, ಬೆರ್ಮೆರ್ ಗುಂಡ, ಕೋಟಿ ಚೆನ್ನಯರ ಮೂಲಸ್ಥಾನ ಗರಡಿ, ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆ, ಮಹಾಮಾತೆ ದೇಯಿ ಬೈದ್ಯೆತಿ ಮಹಾ ಸಮಾಧಿ ಸಾನಿಧ್ಯಗಳ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ನಡೆಯಲಿದೆ. ಧರ್ಮದೈವ ಧೂಮಾವತಿ, ಕುಪ್ಪೆ ಪಂಜುರ್ಲಿ, ದೇಯಿ ಬೈದ್ಯೆತಿ, ಕೋಟಿ ಚೆನ್ನಯ, ಕೊರತಿ, ಕಲ್ಲಾಲ್ದಾಯ ದೈವಗಳ ನೇಮೋತ್ಸವ ಸಂಪನ್ನಗೊಳ್ಳಲಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.