Home_Page_Advt
Home_Page_Advt
Breaking News

ಬಳ್ಪ: ಕಾರು ಹಾಗೂ ಸ್ಕೂಟರ್ ಮೇಲೆ ಮರಬಿದ್ದು ಹಾನಿ – ಕಾರು ಚಾಲಕ ಗಣೇಶ್ ರವರಿಗೆ ಗಾಯ


ಕಡಬ:  ಭಾರೀ ಗಾಳಿ ಮಳೆಗೆ ಸುಬ್ರಹ್ಮಣ್ಯ ಪಂಜ ರಸ್ತೆಯ ಬಳ್ಪ ಬಳಿಯ ಎಣ್ಣೆಮಜಲು ಕ್ರಾಸ್ ಬಳಿ ಚಲಿಸುತ್ತಿದ್ದ ಸ್ಕೂಟರ್ ಹಾಗೂ ಕಾರಿನ ಮೇಲೆ ಮರ ಬಿದ್ದು ಕಾರು ಚಾಲಕ ಗಣೇಶ್ ಎಂಬವರು ಗಂಭೀರವಾಗಿ ಗಾಯಗೊಂಡ ಘಟನೆ ನ.6 ರಂದು ವರದಿಯಾಗಿದೆ.

ನ.6 ರಂದು ಸಂಜೆ ಭಾರೀ ಗುಡುಗು ಸಹಿತ ಮಳೆಯಾಗಿದ್ದು, ಸುಮಾರು 6 ಗಂಟೆಯಿಂದ ಆರಂಭವಾದ ಭಾರಿ ಸಿಡಿಲು, ಗುಡುಗು, ಗಾಳಿ ಸಹಿತವಾದ ಮಳೆ ಬಳ್ಪ, ಗುತ್ತಿಗಾರು, ಏನೇಕಲ್ಲು ಆಸುಪಾಸಿನಲ್ಲಿ ಆರಂಭವಾಗಿತ್ತು. ಈ ಸಂದರ್ಭ ಎಣ್ಣೆಮಜಲು ಕ್ರಾಸ್ ಬಳಿ ಸುಬ್ರಹ್ಮಣ್ಯ ಕಡೆಗೆ ಸಂಚರಿಸುತ್ತಿದ್ದ ಬಡೆಕ್ಕೋಡಿಯ ಜನಾರ್ಧನ ಎಂಬವರ ಕಾರಿನ ಮೇಲೆ ಹಾಗೂ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸ್ಕೂಟರ್ ಮೇಲೆ ಮರ ಉರುಳಿ ಬಿದ್ದಿದೆ. ಕಾರು ಚಲಾಯಿಸುತ್ತಿದ್ದ ಗಣೇಶ್ ಎಂಬವರು ಗಂಭೀರ ಗಾಯಗೊಂಡಿದ್ದು, ಅವರನ್ನು ಪುತ್ತೂರು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ.

ಬಡೆಕ್ಕೋಡಿಯಿಂದ ಸುಬ್ರಹ್ಮಣ್ಯದ ಬಳಿಯ ಸಂಬಂಧಿಕರ ಮನೆಗೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಜನಾರ್ಧನ ಅವರ ಕಾರನ್ನು ಗಣೇಶ್ ಅವರು ಚಲಾಯಿಸಿಕೊಂಡು ಹೋಗುತ್ತಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.