Home_Page_Advt
Home_Page_Advt

ಆತ್ಮ ವಿಶ್ವಾಸ ಹಾಗೂ ಛಲದಿಂದ ಯಶಸ್ಸು ಸಾಧ್ಯ – ಗಂಗಾಧರ ಶೆಟ್ಟಿ ಹೊಸಮನೆ

Puttur_Advt_NewsUnder_1
Puttur_Advt_NewsUnder_1

ನೆಲ್ಯಾಡಿ : ಕ್ರಿಕೆಟ್ ಆತ್ಮ ವಿಶ್ವಾಸದ ಆಟ. ಐಟಿಐ ವಿದ್ಯಾಭ್ಯಾಸ ಜೀವನ ಮಾರ್ಗಕ್ಕೆ, ಸ್ವಂತ ಕಾಲಲ್ಲಿ ನಿಲ್ಲಲು ನಮಗೆ ಕಲಿಸಿ ಕೊಡುವಂತಹಾ ಶಿಕ್ಷಣ. ಆದ್ದರಿಂದ ಜೀವನದಲ್ಲಿ ಆತ್ಮ ವಿಶಾಸ ಮತ್ತು ಛಲ ಇದ್ದರೆ ಯಶಸ್ಸು ಸಾಧ್ಯ ಎಂದು ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷರಾದ ಗಂಗಾಧರ ಶೆಟ್ಟಿ ಹೊಸಮನೆ ಹೇಳಿದರು. ಅವರು ನೆಲ್ಯಾಡಿ ಬೆಥನಿ ಕ್ರೀಡಾಂಗಣದಲ್ಲಿ ನ.7 ರಂದು ಬೆಥನಿ ಐಟಿಐ ಮತ್ತು ಜ್ಞಾನೋದಯ ಬೆಥನಿ ಪಿಯು ಕಾಲೇಜು ಇವುಗಳ ಜಂಟಿ ಆಶ್ರಯದಲ್ಲಿ ನಡೆದ ಪ್ರೌಢ ಶಾಲಾ ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಸಂಚಾಲಕರಾದ ರೆ|ಫಾ|ಡಾ| ವರ್ಗೀಸ್ ಕೈಪನಡುಕ್ಕ ಒ.ಐ.ಸಿ. ಅವರು ಆಟಗಾರರಿಗೆ ಹಾಗೂ ವಿದ್ಯಾರ್ಥಿಗಳಿಗೆ ಶುಭವನ್ನು ಹಾರೈಸಿದರು.

ಬೆಥನಿ ಐ ಟಿ ಐ ನೆಲ್ಯಾಡಿ ಇದರ ತರಬೇತಿ ಅಧಿಕಾರಿ ಜೋನ್ ಪಿ.ಎಸ್.ರವರು ನೆಲ್ಯಾಡಿ ಸುತ್ತಮುತ್ತಲಿನ ಪ್ರೌಢ ಶಾಲೆಗಳು ನಮ್ಮ ಪೋಷಕ ಸಂಸ್ಥೆಗಳಾಗಿದ್ದು ಅವರೊಂದಿಗೆ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ಪ್ರೌಢ ಶಾಲಾ ಮಟ್ಟದ ಈ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿರುತ್ತೇವೆ ಎಂದು ಹೇಳಿ ಕಾರ್ಯಕ್ರಮದ ಪ್ರಾಸ್ತಾವಿಕ ಮಾತುಗಳಾಡಿದರು.

ಕಾರ್ಯಕ್ರಮದಲ್ಲಿ ಜ್ಞಾನೋದಯ ಬೆಥನಿ ಪಿ.ಯು.ಕಾಲೇಜಿನ ಪ್ರಾಂಶುಪಾಲರಾದ ರೆ|ಫಾ| ಮಾಥ್ಯು ಪ್ರಫುಲ್ ಒ.ಐ.ಸಿ., ಸಂಸ್ಥೆಯ ಬರ್ಸಾರ್ ರೆ|ಫಾ| ಐಸಕ್ ಸಾಮ್ ಉಪಸ್ಥಿತರಿದ್ದು ಶುಭ ಹಾರೈಸಿದರು.

ವೇದಿಕೆಯಲ್ಲಿ ತೀರ್ಪುಗಾರರಾದ ತೀರ್ಥಪ್ರಸಾದ್ ಮತ್ತು ಹರ್ಷಿತ್ ಹಾಗೂ ವಿವಿಧ ಶಾಲೆಗಳ ದೈಹಿಕ ಶಿಕ್ಷಕರುಗಳು ಉಪಸ್ಥಿತರಿದ್ದರು.

ದೈಹಿಕ ಶಿಕ್ಷಕರಾದ ಮನೋಜ್, ಐಟಿಐ ಕಾಲೇಜಿನ ಕ್ರೀಡಾಧಿಕಾರಿಗಳಾದ ಸುನಿಲ್ ಜೋಸೆಫ್, ವರ್ಗೀಸ್ ಎನ್.ಟಿ., ಹಾಗೂ ಐಟಿಐ ಅಧ್ಯಾಪಕರು ಕಾರ್ಯಕ್ರಮಗಳಿಗೆ ನೇತೃತ್ವ ವಹಿಸಿದ್ದರು.

ಬೆಥನಿ ಐ ಟಿ ಐ ಪ್ರಾಂಶುಪಾಲರಾದ ಸಜಿ ಕೆ ತೋಮಸ್ ಎಲ್ಲರನ್ನು ಸ್ವಾಗತಿಸಿ, ಐ ಟಿ ಐ ವಿದ್ಯಾರ್ಥಿ ಸಂದೇಶ್ ಶೆಟ್ಟಿ ವಂದಿಸಿದರು.

ಅಬ್ದುಲ್ ರಝಾಕ್, ತೋಮಸ್, ಮಹಮ್ಮದ್ ರಿಫಾಸ್, ಪ್ರಾರ್ಥಿಸಿದರು. ಕಿರಿಯ ತರಬೇತಿ ಅಧಿಕಾರಿ ಹರಿಪ್ರಸಾದ್ ರೈ, ವಿದ್ಯಾರ್ಥಿಗಳಾದ ಅಭಿಷೇಕ್ ಹಾಗೂ ಅಬ್ದುಲ್ ರಝಾಕ್, ಮಮ್ಮದ್ ಇರ್‌ಫಾನ್ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.