Home_Page_Advt
Home_Page_Advt

ತಾ|ಸರಕಾರಿ ನೌಕರರ ಸಂಘದ ಕಛೇರಿಗೆ ಮಂಗಳೂರು ಕಾಂಟ್ರ್ಯಾಕ್ಟ್ ಕ್ಯಾರೇಜ್ ಬಸ್ಸು ಮಾಲಕರ ಎಸೋಸಿಯೇಶನ್‌ನಿಂದ ಏರ್ ಕಂಡೀಷನರ್ ಕೊಡುಗೆ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಇಲ್ಲಿನ ಬಪ್ಪಳಿಗೆ-ಪುತ್ತೂರು ಬಳಿಯಿರುವ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಇದರ ಪುತ್ತೂರು ಶಾಖೆಯ ನೂತನ ಕಟ್ಟಡವಾದ ಸರಕಾರಿ ನೌಕರರ ಸಂಘದ ಸಮುದಾಯ ಭವನದಲ್ಲಿನ ತಾಲೂಕು ಸರಕಾರಿ ನೌಕರರ ಸಂಘದ ಕಚೇರಿಗೆ ಮಂಗಳೂರಿನ ಕಾಂಟ್ರ್ಯಾಕ್ಟ್ ಕ್ಯಾರೇಜ್ ಇದರ ಬಸ್ದು ಮಾಲಕರ ಎಸೋಸಿಯೇಶನ್ ವತಿಯಿಂದ ನೀಡಿದ ಸುಮಾರು ರೂ.೩೧ ಸಾವಿರ ಮೌಲ್ಯದ ಏರ್ ಕಂಡೀಶನರ್(ಹವಾ ನಿಯಂತ್ರಿತ) ಕೊಡುಗೆಯನ್ನು ಅಳವಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್‌ರವರು, ಸಂಘದಲ್ಲಿನ ವಿವಿಧ ಇಲಾಖೆಗಳ ಸರಕಾರಿ ನೌಕರರ ಮತ್ತು ಸಹೃದಯಿ ದಾನಿಗಳ ಸಹಕಾರದಿಂದ ಸರಕಾರಿ ನೌಕರರ ಸಂಘಕ್ಕೆ ಸುಸಜ್ಜಿತ ಕಟ್ಟಡವನ್ನು ರಚಿಸುವಂತಾಯಿತು. ಮುಂದಿನ ದಿನಗಳಲ್ಲಿ ಇನ್ನೂ ಎರಡು ಅಂತಸ್ತಿನ ಕಟ್ಟಡವನ್ನು ಮೇಲಕ್ಕೆರಿಸಬೇಕಾಗಿದೆ. ಇದಕ್ಕೆ ಸರ್ವ ಸದಸ್ಯರ ಸಹಕಾರ ಬೇಕಾಗಿದೆ. ಇದೇ ಸಂದರ್ಭದಲ್ಲಿ ನಮ್ಮ ಕಚೇರಿಗೆ ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ್‌ರವರ ಮನವಿಯನ್ನು ಪುರಸ್ಕರಿಸಿದ ಮಂಗಳೂರಿನ ಕಾಂಟ್ರ್ಯಾಕ್ಟ್ ಕ್ಯಾರೇಜ್ ಬಸ್ಸು ಮಾಲಕರ ಅಸೋಸಿಯೇಶನ್, ರೂ.೩೧ ಸಾವಿರ ಮೌಲ್ಯದ ಒಂದು ಏರ್ ಕಂಡೀಷನರ್ ಅನ್ನು ಕೊಡುಗೆಯಾಗಿ ನೀಡಿದ್ದು ಅದನ್ನು ಈಗಾಗಲೇ ಅಳವಡಿಸಲಾಗಿದೆ. ಮಂಗಳೂರಿನ ಬಸ್ಸು ಮಾಲಕರ ಸಂಘದ ಪದಾಧಿಕಾರಿಗಳಿಗೆ ಹಾಗೂ ಸದಸ್ಯರಿಗೆ ಸರಕಾರಿ ನೌಕರರ ಸಂಘದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ ಮತ್ತು ಮುಂದಿನ ದಿನಗಳಲ್ಲಿ ಬಸ್ಸು ಮಾಲಕರ ಸಂಘದ ವ್ಯವಹಾರವೂ ಉತ್ತಮ ರೀತಿಯಲ್ಲಿ ಸಾಗಲು ದೇವರು ಅನುಗ್ರಹಿಸಲಿ ಎಂದರು.

ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ್, ಮಾಜಿ ರಾಜ್ಯ ಪರಿಷತ್ ಸದಸ್ಯ ಕೆ.ಕೃಷ್ಣಪ್ಪ, ಕೋಶಾಧಿಕಾರಿ ನಾಗೇಶ್ ಕೆ, ಹಾಗೂ ವಿವಿಧ ಸರಕಾರಿ ಇಲಾಖೆಗಳ ನೌಕರರಾದ ಮಾಮಚ್ಚನ್ ಎಂ, ಸೀತಾರಾಮ್, ಗಿರಿಧರ ಗೌಡ, ರವಿಚಂದ್ರ ಯು, ರಾಮಚಂದ್ರ ಭಟ್, ಮಹಮ್ಮದ್ ಅಶ್ರಫ್, ಎಫ್.ಜಿ ಮಂಗನಗೌಡ್ರು, ಮಲ್ಲಿಕ್ ಕುಮಾರ್, ಆಶಾ ಕೆ, ಶಿವಾನಂದ ಆಚಾರ್ಯ, ಇಂದಿರಾ ಕೆ.ಎಸ್, ಪದ್ಮಾವತಿ ಎಂ.ಆರ್, ಮೋಹನ್ ಜಿ, ಅಬ್ರಹಾಂ ಎಸ್.ಎ, ಕೆ.ಎಸ್ ವಿನೋದ್ ಕುಮಾರ್, ವೆಂಕಟೇಶ್, ಹೊನ್ನಪ್ಪ ಗೌಡ, ಎಲ್.ಸಿ ಸಿಕ್ವೇರಾ, ಪಿ.ರಾಮಚಂದ್ರ ಭಟ್, ಹರಿಪ್ರಕಾಶ್ ಬಿ, ಕೃಷ್ಣಪ್ರಸಾದ್ ಭಂಡಾರಿ, ವಿಜಯಕುಮಾರ್ ಕೆ, ಜ್ಯೂಲಿಯಾನಾ ಮೋರಸ್, ಸ್ಮಿತಾಶ್ರೀ ಬಿ.ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಮಚಂದ್ರ ವಂದಿಸಿದರು.

ರೂ.೩೧ ಸಾವಿರ ಮೌಲ್ಯದ ಏರ್ ಕಂಡೀಷನರ್ ಅನ್ನು ಕೊಡುಗೆಯಾಗಿ ನೀಡಿ ಸಹಕರಿಸಿದ ಮಂಗಳೂರಿನ ಕಾಂಟ್ರ್ಯಾಜ್ಟ್ ಕ್ಯಾರೇಜ್ ಬಸ್ಸು ಮಾಲಕರ ಅಸೋಸಿಯೇಶನ್‌ನ ಪರವಾಗಿ ಹಾಜರಿದ್ದ ಸೇಫ್ ವೇ ಬಸ್ಸು ಮಾಲಕ ರೊನಾಲ್ಡ್ ನೊರೋನ್ಹಾ ಹಾಗೂ ಉಪ್ಪಿನಂಗಡಿ ಅರಫಾ ಟೂರ್ಸ್ ಮತ್ತು ಟ್ರಾವೆಲ್ಸ್ ಇದರ ಶಫಿಕ್ ಹಾಗೂ ಮುಜುಫಾರವರಿಗೆ ಸರಕಾರಿ ನೌಕರರ ಸಂಘದ ವತಿಯಿಂದ ಶಾಲು ಹೊದಿಸಿ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಸೇಫ್ ವೇ ಬಸ್ಸಿನ ಮಾಲಕ ರೊನಾಲ್ಡ್ ನೊರೋನ್ಹಾರವರು ಕೃತಜ್ಞತೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.