ಪುತ್ತೂರು ಹವ್ಯಕ ವಲಯದಿಂದ ನಾಲ್ಕನೇ ದಿನದ ವಾಲ್ಮೀಕಿ ರಾಮಾಯಣ ಪಾರಾಯಣ

Puttur_Advt_NewsUnder_1
Puttur_Advt_NewsUnder_1

ಪುತ್ತೂರು: ಪುತ್ತೂರು ಹವ್ಯಕ ವಲಯದಿಂದ ಶ್ರೀಮದ್ ವಾಲ್ಮೀಕಿ ರಾಮಾಯಣ ಪಾರಾಯಣದ ನಾಲ್ಕನೇ ದಿನದಂದು (ನ.08) ಅರಣ್ಯ ಕಾಂಡದ 68ನೇಸರ್ಗದ ವರೆಗೆ ಐಶ್ವರ್ಯ ಅರ್ಥ್ ಮೂವರ್ಸ್ ಉಪ್ಪಂಗಳ ರವಿಶಂಕರವರ ಮನೆಯಲ್ಲಿ ನಡೆಯಿತು.

ರಾಮನು ಅಗಸ್ತ್ಯ ಮುನಿಗಳ ಆಶ್ರಮಕ್ಕೆ ಪ್ರಯಾಣ ನಂತರ ಜಟಾಯು ಪರಿಚಯ ಹೀಗೆ ಮುಂದುವರಿದು ಪಂಚವಟಿಯಲಿ ಪರ್ಣಶಾಲೆ ನಿರ್ಮಿಸಿ ವಾಸ, ಶೂರ್ಪಣಕಿಯ ಪ್ರವೇಶ, ರಾಮನನ್ನು ಕಂಡು ಕಾಮಮೋಹಿತಳಾಗುವುದು, ಖರ – ದೂಷಣರ ಪ್ರವೇಶ ಮತ್ತು ವಧೆ ಹೀಗೆ ಮುಂದುವರರಿದು ಮಾರೀಚ ಮಾಯಾಮೃಗ ವಾಗಿ ಬರಲು ಸೀತಾದೇವಿಯು ಅದನ್ನು ನೋಡಿ ಅಚ್ಚರಿಗೊಳುವುದು. ತದನಂತರ ರಾವಣ ಬಿಕ್ಷುವೇಶದಲಿ ಸೀತಾಪಹಾರ ಮಾಡುವುದು ಹೀಗೆ ಮುಂದುವರಿದು ಜಟಾಯು-ರಾವಣ ಯುದ್ದ ಮತ್ತು ಜಟಾಯು ಮೋಕ್ಷ ರಾಮನಿಂದ ಜಟಾಯು ಸಂಸ್ಕಾರ ಎಂದು ವೇದಬ್ರಹ್ಮ ಶ್ರೀನಿಧಿ ಭಟ್ ರವರು ತಿಳಿಸಿದರು. ಪುತ್ತೂರು ಹವ್ಯಕ ವಲಯದ ಅಧ್ಯಕ್ಷ ಪುಳು ಈಶ್ವರ ಭಟ್ ಕಾರ್ಯದರ್ಶಿ ದಿನಮಣಿ ನಾರಾಯಣ ಭಟ್, ಗುರಿಕಾರ ಕಾಡೂರು ಶಿವ ಕುಮಾರ್, ಸುಬ್ರಹ್ಮಣ್ಯ ಭಟ್, ನಗರಸಭಾ ಸದಸ್ಯೆ ವಿದ್ಯಾ ಆರ್ ಗೌರಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.