Home_Page_Advt
Home_Page_Advt
Home_Page_Advt
Breaking News

ಕಾವು: ಬಿಜೆಪಿಯಿಂದ ಗಾಂಧಿ ಸಂಕಲ್ಪ ಯಾತ್ರೆ-ಕಾಲ್ನಡಿಗೆ ಜಾಥಾ

 

  • ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರನಿರ್ಮಾಣ ಸಾಧ್ಯ-ನನ್ಯ

ಕಾವು: ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನೋತ್ಸವದ ಅಂಗವಾಗಿ ದೇಶಾದ್ಯಂತ ಬಿಜೆಪಿಯಿಂದ ನಡೆಯುತ್ತಿರುವ ಗಾಂಧೀ ಸಂಕಲ್ಪ ಯಾತ್ರೆ-ಕಾಲ್ನಡಿಗೆ ಜಾಥಾವು ನ.15ರಂದು ಬಿಜೆಪಿ ಮಾಡ್ನೂರು ಶಕ್ತಿಕೇಂದ್ರದಲ್ಲಿ ನಡೆಯಿತು.  ಬೆಳಿಗ್ಗೆ ಕಾವು ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ಬಳಿಯಲ್ಲಿ ಗಾಂಧೀ ಸಂಕಲ್ಪ ಯಾತ್ರೆಯು ಉದ್ಘಾಟನೆಗೊಂಡಿತು. ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನನ್ಯ ಅಚ್ಚುತ ಮೂಡೆತ್ತಾಯರವರು ತೆಂಗಿನಕಾಯಿ ಒಡೆಯುವ ಮೂಲಕ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ ಗಾಂಧೀಜಿಯವರು ಕಂಡ ರಾಮರಾಜ್ಯದ ಕನಸು ನನಸಾಗುವ ದಿನ ಹತ್ತಿರವಾಗುತ್ತಿದೆ, ಪ್ರಧಾನಿ ಮೋದಿಯವರ ಯೋಚನೆಯ ದಿಕ್ಕು, ಆಡಳಿತ ವೈಖರಿ,  ಜನಪರ ಯೋಜನೆಗಳು ಗಾಂಧೀಜಿಯವರ ತತ್ವ, ಮಾರ್ಗವನ್ನು ನೆನಪಿಸುತ್ತಿದೆ,  ಬಿಜೆಪಿಯು ಗಾಂಧಿ ಸಂಕಲ್ಪ ಯಾತ್ರೆಯ ಮೂಲಕ ಗ್ರಾಮೀಣ ಭಾಗದಲ್ಲಿ ರಾಷ್ಟ್ರಚಿಂತನೆಯ ಕಾರ್ಯದ ಮೂಲಕ ವ್ಯಕ್ತಿ ನಿರ್ಮಾಣವನ್ನು ಮಾಡಿ ರಾಷ್ಟ್ರನಿರ್ಮಾಣದ ಸಾಧ್ಯತೆಯನ್ನು ಮಾಡುತ್ತಿದೆ ಎಂದು ಹೇಳಿದರು.

ಪುತ್ತೂರು ಶಾಸಕ ಸಂಜೀವ ಮಠಂದೂರುರವರು ಭಾರತ ಮಾತೆಗೆ ಹಾರ ಹಾಕಿ, ಪುಷ್ಫಾರ್ಚನೆ ಮಾಡಿ ಚಾಲನೆ ನೀಡಿದರು. ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿಯವರು ರಾಷ್ಟ್ರಧ್ವಜವನ್ನು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಂಗಾರಡ್ಕ ವಿಶ್ವೇಶ್ವರ ಭಟ್, ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಪ್ರಮುಖರಾದ ಪುರುಷೋತ್ತಮ ಗೌಡ ಮುಂಗ್ಲಿಮನೆ, ನಿತಿಶ್ ಕುಮಾರ್ ಶಾಂತಿವನ, ಅರಿಯಡ್ಕ ಗ್ರಾ.ಪಂ ಉಪಾಧ್ಯಕ್ಷ ಲೋಕೇಶ್ ಚಾಕೋಟೆ, ಸದಸ್ಯರಾದ ಸೀತಾರಾಮ ಮೇಲ್ಪಾದೆ, ಲೋಹೀತ್ ಕೆರೆಮಾರು, ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾದ ಕೆ. ಚಂದ್ರಶೇಖರ ರಾವ್ ನಿಧಿಮುಂಡ, ಪೂವಪ್ಪ ನಾಯ್ಕ, ಕಾವು ಗೋಪೂಜಾ ಸಮಿತಿ ಅಧ್ಯಕ್ಷ ಹರೀಶ್ ಕುಂಜತ್ತಾಯ, ಬಿಜೆಪಿ ಮಾಡ್ನೂರು ಗ್ರಾಮ ಸಮಿತಿ, ಬೂತ್ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಕಾರ್ಯಕರ್ತರು, ಹಿತೈಷಿಗಳು ಪಾಲ್ಗೊಂಡಿದ್ದರು. ಮಾಡ್ನೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೃಷ್ಣಪ್ರಸಾದ್ ಕೊಚ್ಚಿಯವರು ಸ್ವಾಗತಿಸಿ, ಸುನೀಲ್ ನಿಧಿಮುಂಡರವರು ಕಾರ್ಯಕ್ರಮ ನಿರ್ವಹಿಸಿದರು.

ಕಾವುನಿಂದ ಕೌಡಿಚ್ಚಾರ್‌ವರೆಗೆ ಕಾಲ್ನಡಿಗೆ ಜಾಥಾ:
ಗಾಂಧಿ ಸಂಕಲ್ಪಯಾತ್ರೆಯ ಅಂಗವಾಗಿ ಕಾವುನಿಂದ ಆರಂಭಗೊಂಡ ಕಾಲ್ನಡಿಗೆ ಜಾಥಾವು ಮುಖ್ಯರಸ್ತೆಯಲ್ಲಿ ಸಾಗಿ ಕೌಡಿಚ್ಚಾರ್‌ರವರೆಗೆ ಸಾಗಿ ಬಂತು, ಶಾಸಕ ಸಂಜೀವ ಮಠಂದೂರು, ತಾ.ಪಂ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ಬಂಗಾರಡ್ಕ ವಿಶ್ವೇಶ್ವರ ಭಟ್, ನನ್ಯ ಅಚ್ಚುತ ಮೂಡೆತ್ತಾಯರವರು ಸೇರಿದಂತೆ ಬಿಜೆಪಿಯ ತಾಲೂಕು ಪದಾಧಿಕಾರಿಗಳು, ಮಾಡ್ನೂರು ಗ್ರಾಮ ಸಮಿತಿಯ ಪದಾಧಿಕಾರಿಗಳು, ಕಾರ್ಯಕರ್ತರು ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.