Home_Page_Advt
Home_Page_Advt
Home_Page_Advt
Breaking News

ನ.24: ಶ್ರೀ ಹನುಮಗಿರಿ ಮೇಳದ ತಿರುಗಾಟ ಆರಂಭ, ಸತ್ಯಾಂತರಂಗ ಪ್ರಥಮ ಸೇವೆಯಾಟ

ಪುತ್ತೂರು: ಹನುಮಗಿರಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಹನುಮಗಿರಿ ಮೇಳದ3 ನೇ ವರ್ಷದ ತಿರುಗಾಟದ ಆರಂಭ ಹಾಗೂ ಪ್ರಥಮ ಸೇವೆಯಾಟ ನ.24ರಂದು ಸಂಜೆ ಶ್ರೀ ಕ್ಷೇತ್ರ ಹನುಮಗಿರಿಯಲ್ಲಿ ನಡೆಯಲಿದೆ. ಸೇವೆಯ ಕಥಾ ಪ್ರಸಂಗವಾಗಿ ` ಸತ್ಯಾತರಂಗ’ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. ಕಲಾವಿದರಾಗಿ ಭಾಗವತಿಕೆಯಲ್ಲಿ ಪದ್ಯಾಣ ಗಣಪತಿ ಭಟ್, ರವಿಚಂದ್ರ ಕನ್ನಡಿಕಟ್ಟೆ, ಚಿನ್ಮಯ ಭಟ್ ಕಲ್ಲಡ್ಕ, ಚೆಂಡೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ದೇಲಂತಮಜಲು ಸುಬ್ರಹ್ಮಣ್ಯ ಭಟ್, ಚೈತನ್ಯಕೃಷ್ಣ ಪದ್ಯಾಣ, ಮದ್ದಳೆಯಲ್ಲಿ ಪದ್ಯಾಣ ಜಯರಾಮ ಆಚಾರ್ಯ, ಸೀತಾರಾಮ ಕುಮಾರ್ ಕಟೀಲು, ಸ್ತ್ರೀಪಾತ್ರದಲ್ಲಿ ಎಂ.ಕೆ ರಮೇಶ್ ಆಚಾರ್ಯ, ಸಂತೋಷ್ ಕುಮಾರ್ ಹಿಲಿಯಾಣ, ರಕ್ಷಿತ್ ಶೆಟ್ಟಿ ಪಡ್ರೆ ಹಾಗೇ ಪ್ರಧಾನ ಭೂಮಿಕೆಯಲ್ಲಿ ಶಿವರಾಮ ಜೋಗಿ ಬಿಸಿರೋಡ್, ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್, ಪೆರ್ಲ ಜಗನ್ನಾಥ ರೈ, ಪ್ರಕಾಶ ನಾಯಕ್ ನೀರ್ಚಾಲು, ಜಯಕೀರ್ತಿ, ವಾಸುದೇವ ರಂಗಾಭಟ್ ಮಧೂರು, ಜಗದಾಭಿರಾಮ ಪಡುಬಿದ್ರಿ, ಜಯಾನಂದ ಸಂಪಾಜೆ, ಪ್ರಸಾದ್ ಸವಣೂರು, ಅಜಿತ್ ಪುತ್ತಿಗೆ, ಸುಬ್ರಾಯ ಹೊಳ್ಳ ಕಾಸರಗೋಡು, ದಿವಾಕರ ರೈ ಸಂಪಾಜೆ, ಪ್ರಜ್ವಲ್ ಕುಮಾರ್ ಗುರುವಾಯನಕೆರೆ, ಶಿವರಾಜ್ ಬಜಕೂಡ್ಲು, ಪೆರ್ಮುದೆ ಜಯಪ್ರಕಾಶ್ ಶೆಟ್ಟಿ, ಸದಾಶಿವ ಕುಲಾಲ್ ವೇಣೂರು, ಶಬರೀಶ್ ಮಾನ್ಯ, ಅಕ್ಷಯ್ ಭಟ್ ಮೂಡಬಿದ್ರೆ ಮತ್ತು ಇತರರು ಅಭಿನಯಿಸಿದ್ದಾರೆ.

ಈ ವರ್ಷದ ನೂತನ ಪೌರಾಣಿಕ ಪ್ರಸಂಗಗಳಲ್ಲಿ ವಿದ್ವಾನ್ ಹಿರಣ್ಯ ವೆಂಕಟೇಶ್ವರ ಭಟ್ ಕಥಾ ಸಂಯೋಜನೆಯ ಎಂ.ಕೆ ರಮೇಶ ಆಚಾರ್ಯ ಪದ್ಯ ರಚನೆಯ ‘ಸತ್ಯಾಂತರಂಗ’ ಹಾಗೂ ಎಂ.ಕೆ ರಮೇಶ ಆಚಾರ್ಯ ವಿರಚಿತ ` ಶಿವಾನಂದ ಲಹರಿ’ ಪ್ರಸಂಗಗಳನ್ನು ಆಡಿತೋರಿಸಲಿದ್ದಾರೆ. ಮೇಳದ ಪ್ರದರ್ಶನಗಳನ್ನು ಆಪೇಕ್ಷಿಸುವವರು ಮೊ.9900474926 ಗೆ ಸಂಪರ್ಕಿಸಬಹುದು ಎಂದು ಮೇಳದ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.