Home_Page_Advt
Home_Page_Advt
Home_Page_Advt
Breaking News

ನೇಲ್ಯಡ್ಕ ಶಾಲಾ ಶಿಕ್ಷಕರ ನಿಯೋಜನೆ ರದ್ದತಿಗೆ ಆದೇಶ-ಆಕ್ರೋಶಗೊಂಡ ಗ್ರಾಮಸ್ಥರು

ಕಡಬ : ಐತ್ತೂರು ಗ್ರಾಮದ ನೇಲ್ಯಡ್ಕ ಶಾಲೆಗೆ ಶಿಕ್ಷಕರ ಕೊರತೆ ಇದ್ದು ಕೊಂಬಾರು ಶಾಲೆಯಿಂದ ನಿಯೋಜನೆಗೊಳಿಸಿದ್ದ ಶಿಕ್ಷಕರನ್ನೊಬ್ಬರನ್ನು ಏಕಾಏಕಿ ನಿಯೋಜನೆ ರದ್ದುಗೊಳಿಸಿ ಮತ್ತೆ ಕೊಂಬಾರು ಶಾಲೆಗೆ ನಿಯುಕ್ತಿಗೊಳಿಸಿ ಬಿಇಒರವರು ಆದೇಶಿಸಿದ್ದು ನೇಲ್ಯಡ್ಕ ಶಾಲೆಗೆ ಶಿಕ್ಷಕರ ಕೊರತೆ ತುಂಬದಿದ್ದಲ್ಲಿ ಶಾಲೆಗೆ ಮಕ್ಕಳನ್ನು ಕಳುಹಿಸದೆ ಶಾಲಾ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.

ನ.21ರಂದು ಐತ್ತೂರು ಗ್ರಾ.ಪಂ ಅಧ್ಯಕ್ಷ ಸತೀಶ್ ಕೆರವರ ನೇತೃತ್ವದಲ್ಲಿ ಶಾಲಾಭಿವೃದ್ಧಿ ಸಮಿತಿ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾ.ಪಂ ಅಧ್ಯಕ್ಷ ಸತೀಶ್‌ರವರು ಕಳೆದ ಕೆಲವಾರು ಸಮಯದಿಂದ ಆಗ್ರಹ, ಹೋರಾಟ, ಪ್ರತಿಭಟನೆಯ ಫಲವಾಗಿ ಕಳೆದ ಮೂರು ತಿಂಗಳ ಹಿಂದೆ ನಮ್ಮ ನೇಲ್ಯಡ್ಕ ಶಾಲೆಗೆ ಒಬ್ಬ ಶಿಕ್ಷಕರನ್ನು ಕೊಂಬಾರು ಶಾಲೆಯಿಂದ ನಿಯೋಜನೆಗೊಳಿಸಿದ್ದು ಮುಂದೆ ಶಾಲೆಗೆ ಬೇಕಾಗುವಷ್ಟು ಶಿಕ್ಷಕರನ್ನು ನಿಯುಕ್ತಿಗೊಳಿಸಲಾಗುವುದು ಎಂದು ಭರವಸೆ ನೀಡಿದ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯವರು ಈಗ ಏಕಾಏಕಿ ನಿಯೋಜನೆಗೊಂಡಿದ್ದ ಒಬ್ಬ ಶಿಕ್ಷಕರನ್ನು ಮತ್ತೆ ಕೊಂಬಾರು ಶಾಲೆಗೆ ನಿಯುಕ್ತಿಗೊಳಿಸಿದ್ದು ನಮ್ಮ ಶಾಲೆಯಲ್ಲಿ ನಿರಂತರ ಶಿಕ್ಷಕರ ಕೊರತೆಯಿಂದ ಮಕ್ಕಳ ವಿಧ್ಯಾಭ್ಯಾಸ ಇಲ್ಲದಂತಾಗಿದೆ. ಸರಕಾರ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಂಪೂರ್ಣ ಒತ್ತು ನೀಡವುದಲ್ಲದೆ ಪ್ರತಿ ಶಾಲೆಗಳಲ್ಲಿ ಮಕ್ಕಳ ಶಿಕ್ಷಣಕ್ಕಾಗಿ ಪೂರ್ಣ ಪ್ರಮಾಣದ ಶಿಕ್ಷಕರನ್ನು ನೀಡಲಾಗುವುದು ಎಂದು ಪದೇ ಪದೇ ತಿಳಿಸುತ್ತಿದ್ದರೂ ಗ್ರಾಮೀಣ ಭಾಗದ ನಮ್ಮ ಶಾಲೆಗೆ ಶಿಕ್ಷಕರೇ ಇಲ್ಲದೆ ಮಕ್ಕಳು ವಿಧ್ಯಾಭ್ಯಾಸದಿಂದ ವಂಚಿತರಾಗಿ ಶಾಲೆ ಮುಚ್ಚಬೇಕಾದ ಅನಿವಾರ್ಯತೆ ಬಂದೊದಗಿದೆ. ಎಷ್ಟೇ ಒತ್ತಡ ತಂದರು ಪ್ರಯೋಜನ ಇಲ್ಲದಂತಾಗಿದೆ. ಇನ್ನು ಶಾಲೆಗೆ ಮಕ್ಕಳನ್ನು ಕಳುಹಿಸದೆ ಮಕ್ಕಳೊಂದಿಗೆ ಪೋಷಕರು, ಶಾಲಾಭಿವೃದ್ಧಿ ಸಮಿತಿಯವರು, ಗ್ರಾಮಸ್ಥರು , ಪ್ರತಿಭಟಿಸುವುದು ಅನಿವಾರ್ಯವಾಗಿದೆ ಎಂದು ಗ್ರಾ.ಪಂ ಅಧ್ಯಕ್ಷ ಸತೀಶ್ ಕೆ ಹಾಗೂ ಶಾಲಾ ಎಸ್‌ಡಿಎಮ್‌ಸಿ ಅಧ್ಯಕ್ಷೆ ಲಲಿತಾ ರವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಎಸ್‌ಡಿಎಮ್‌ಸಿ ಉಪಾಧ್ಯಕ್ಷ ದೇವಯ್ಯ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸಿ.ಪಿ ಜಾನ್, ಗ್ರಾ.ಪಂ ಮಾಜಿ ಸದಸ್ಯ ನಾರಾಯಣ ಶೆಟ್ಟಿ ಅತ್ಯಡ್ಕ ಉಪಸ್ಥಿತರಿದ್ದರು.

ಸರಕಾರದ ಆದೇಶದಂತೆ ನಮ್ಮ ನೇಲ್ಯಡ್ಕ ಶಾಲೆಯಲ್ಲಿ 1ರಿಂದ 7ನೇ ತರಗತಿ ಇದ್ದು ಇಲ್ಲಿಗೆ ಒಟ್ಟು ಖಾಯಂ 5 ಶಿಕ್ಷಕರ ಮಂಜೂರಾಗಿದ್ದು, ಆದರೆ ಇಲ್ಲಿ ಒಬ್ಬ ಖಾಯಂ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೂರು ತಿಂಗಳ ಹಿಂದೆ ತಾತ್ಕಾಲಿಕ ನೆಲೆಯಲ್ಲಿ ಒಬ್ಬರನ್ನು ನಿಯೋಜನೆ ಮಾಡಿದ್ದರೂ ಈಗ ಏಕಾಏಕಿ ಕ್ಷೇತ್ರಶಿಕ್ಷಣಾಧಿಕಾರಿಯವರು ವಿಧ್ಯಾಭ್ಯಾಸದ ಮಧ್ಯಭಾಗದಲ್ಲಿ ವರ್ಗಾವಣೆ ಆದೇಶಿಸಿರುವುದು ಯಾವ ನ್ಯಾಯವೆಂದು ತಿಳಿಯುವುದಿಲ್ಲ ಶಿಕ್ಷಣಕ್ಕೆ ಒತ್ತು ಕೊಡಬೇಕಾದ ಶಿಕ್ಷಣಾಧಿಕಾರಿಗಳೇ ಈ ರೀತಿಯ ದುರ್ವರ್ತನೆ ನಡೆಸಿರುವುದು ಅಕ್ಷಮ್ಯ ಅಪರಾಧ –ಲಲಿತಾ  ಅಧ್ಯಕ್ಷರು ಶಾಲಾಭಿವೃದ್ಧಿ ಸಮಿತಿ ನೇಲ್ಯಡ್ಕ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.