Home_Page_Advt
Home_Page_Advt
Home_Page_Advt
Breaking News

ಕೊಂಬಾರು ಗ್ರಾಮ ಪಂಚಾಯತ್‌ನಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ

ಕಡಬ: ಕೊಂಬಾರು ಗ್ರಾಮ ಪಂಚಾಯತ್ ನ ನೇತೃತ್ವದಲ್ಲಿ ಸುರತ್ಕಲ್ ಸಂಭವ್ ಪೌಂಡೇಶನ್ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ)ಇದರ ಆಶ್ರಯದಲ್ಲಿ ಶ್ರೀ.ಕ್ಷೇ.ಧ.ಗ್ರಾ.ಯೋಜನೆ ಒಕ್ಕೂಟ ಕೊಂಬಾರು ಮತ್ತು ಸಿರಿಬಾಗಿಲು, ಸ್ಪಂಧನ ಸ್ತ್ರೀಶಕ್ತಿ ಗೊಂಂಚಲು ಸಮಿತಿ, ನವೋದಯ ಸ್ವ ಸಹಾಯ ಸಂಘಗಳ ಒಕ್ಕೂಟ, ಶ್ರೀ ಕ್ಷೇ.ಒಡಿಯೂರು ಗ್ರಾ.ವಿ.ವಾಹಿನಿ ಕೊಂಬಾರು ಘಟಕ, ಕೆಂಜಾಳ ಶ್ರಿ ಪಂಚಲಿಂಗೇಶ್ವರ ಯುವಕ ಮಂಡಲ, ಸಿರಿಭಾಗಿಲು ಒಕ್ಕಲಿಗ ಗೌಡ ಸ್ವ ಸಹಾಯ ಸಂಘಗಳ ಸಹಕಾರದೊಂದಿಗೆ ನ.26ರಂದು ಕೊಂಬಾರು ಗ್ರಾ.ಪಂ. ಸಭಾಭವನದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು.

ಗ್ರಾ.ಪಂ.ಅಧ್ಯಕ್ಷ ಅಜಿತ್ ಯಸ್. ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಗ್ರಾಮಸ್ಥರ ಸರ್ವತೋಮುಕ ಅಭಿವೃದ್ದಿಗೆ ಶ್ರಮಿಸುತ್ತಿರುವ ಗ್ರಾ.ಪಂ. ನೇತೃತ್ವದಲ್ಲಿ ಅಂಧತ್ವ ನಿವಾರಣೆಗಾಗಿ ಉಚಿತ ಕಣ್ಣಿನ ತಪಾಸಣೆ ನಡೆಸುವ ಮೂಲಕ ಅಗತ್ಯವೆನಿಸಿದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸುವುದಲ್ಲದೇ, ಶಿಬಿರಾರ್ಥಿಗಳ ಸಂಪೂರ್ಣ ಆರೋಗ್ಯವನ್ನು ಕಾಪಾಡಲಾಗುವುದು. ಇಂತಹ ಅನೇಕ ಕಾರ್ಯಕ್ರಮಗಳನ್ನು ನಮ್ಮ ಗ್ರಾ.ಪಂ. ಮೂಲಕ ನಡೆಸಲಾಗುತ್ತಿದ್ದು, ಜನೋಪಯೋಗಿ ಯೋಜನೆಗಳನ್ನು ನಿರಂತರ ನಡೆಸಲಾಗುತ್ತಿದೆ ಎಂದರು.

ಸಂಭವ್ ಪೌಂಡೇಶನ್ ನ ಹೈಮಿತ್ರ ಮೇನೇಜರ್ ಹೇಮಚಂದ್ರ ಮಾತನಾಡಿ ಶಿಬಿರದ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಲ್ಲದೇ, 5 ವರ್ಷ ದಿಂದ 15 ವರ್ಷದೊಳಗಿನ ಕಣ್ಣಿನ ಸಮಸ್ಯೆ ಇರುವ ಮಕ್ಕಳಿಗೆ ಶಿಬಿರದ ಪ್ರಯುಕ್ತ ಉಚಿತ ಕನ್ನಡಕ ವಿತರಿಸಲಾಗುವುದು. 15 ವಯಸ್ಸಿಗಿಂತ ಮೇಲ್ಪಟ್ಟವರಿಗೆ ಅಗತ್ಯವುಳ್ವರಿಗೆ ಕನ್ನಡಕವನ್ನು ರಿಯಾಯಿತಿ ದರದಲ್ಲಿ ವಿತರಿಸಲಾಗುವುದು. ಗ್ರಾಮಾಂತರ ಪ್ರದೇಶದಲ್ಲಿ ನಾನು ಇಂತಹ ಶಿಬಿರಗಳನ್ನು ನಡೆಸುತ್ತಿದ್ದು, ಗ್ರಾಮಸ್ಥರು ಪ್ರಯೋಜನ ಪಡೆದುಕೊಳ್ಳಬೇಕೆಂದರು.

ಗ್ರಾ.ಪಂ. ಉಪಾಧ್ಯಕ್ಷೆ ಜಯಶ್ರೀ ರಾಮಚಂದ್ರ ಗೌಡ, ಪಂ.ಅಭಿವೃದ್ದಿ ಅಧಿಕಾರಿ ರಾಘವೇಂದ್ರ ಗೌಡ, ಮಾತನಾಡಿ ಶಿಬಿರದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಹೇಳಿದರು. ಗ್ರಾ.ಪಂ. ಸದಸ್ಯರಾದ ಲಲಿತಾ, ಮಧುಸೂದನ್, ಪುರುಷೋತ್ತಮ ಆಮಡ್ಕ, ಶ್ರೀ ಕ್ಷೇ.ಧ.ಗ್ರಾ.ಯೋಜನೆ ಕೊಂಬಾರು ಒಕ್ಕೂಟದ ಸೇವಾಪ್ರತಿನಿಧಿ ಪರಮೆಶ್ವರ ಉರುಂಬಿ, ಸಂಭವ್ ಪೌಂಡೆಶನ್‌ನ ಸಿಬ್ಬಂಧಿಗಳಾದ ಅಭಿಲಾಷ್, ಸಂಧ್ಯಾ, ವಿನುತಾ, ಅಕ್ಷತಾ ಉಪಸ್ಥಿತರಿದ್ದರು. ಗ್ರಾ.ಪಂ. ಸಿಬ್ಬಂಧಿ ಲೋಕನಾಥ ಸ್ವಾಗತಿಸಿ ವಂದಿಸಿದರು. ಸಿಬ್ಬಂಧಿಗಳಾದ ಜನಾರ್ಧನ, ಅಶ್ವತ್, ಸುಜಾತಾ, ರೂಪಾ, ಲಕ್ಷ್ಮೀ ಸಾಂತಪ್ಪ ಗೌಡ ಸಹಕರಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.